ಮಂಗಳೂರು – ನವರಾತ್ರಿ ದಸರ ಮಹೋತ್ಸವಹ ಹಿನ್ನೆಲೆಯಲ್ಲಿ ಪ್ರವಾಸಿಗರು ಮಂಗಳಊರು ಸೇರಿದಂತೆ ಕರಾವಳಿಗೆ ಲಗ್ಗೆ ಇಟ್ಟಿದ್ದು, ಕಳೆದ ಮೂರು ದಿನಗಳಿಂದ ಕರಾವಳಿಯ ಸಮುದ್ರತಾಣಗಳು ಪ್ರವಾಸಿಗರಿಂದ ತುಂಬಿ ಹೋಗಿದೆ.
ಅದೇ ರೀತಿ ಕರಾವಳಿ ತೀರದ ಬೀಚ್ ರೆಸಾರ್ಟ್ ಗಳು ಮತ್ತು ಮಂಗಳೂರಿನ ಬಹುತೇಕ ಹೊಟೇಲು ಲಾಡ್ಜುಗಳು ಭರ್ತಿ ಆಗಿವೆ. ಮಂಗಳೂರು ದಸರಾ ಉತ್ಸವದ ಶೋಭಾ ಯಾತ್ರೆ ಜನಪ್ರಿಯವಾಗಿದ್ದು, ಇದನ್ನು ವೀಕ್ಷಿಸಲೆಂದೇ ಜನರು ದೂರದ ಊರುಗಳಿಂದ ಮಂಗಳೂರಿಗೆ ಆಗಮಿಸುತ್ತಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಹೊರಡುವ ಶೋಭಯಾತ್ರೆ ಮೆರವಣಿಗೆಯು ಮಣ್ಣಗುಡ್ಡೆ ಸಾಗಿ ನಾರಾಯಣ ಗುರು ವೃತ್ತದ ಮೂಲಕ ಲಾಲ್ ಭಾಗ್ ಬಲ್ಲಾಳ್ ಭಾಗ್ ಮೂಲಕ ಪಿವಿಎಸ್ ವೃತ್ತದ ಮೂಲಕ ನವ ಭಾರತ ಸರ್ಕಲ್ ಮೂಲಕ ಹಂಪನಕಟ್ಟೆ ಪ್ರದೇಶಕ್ಕೆ ತಲುಪಿ ಅಲ್ಲಿಂದ ರಥಬೀದಿಯಾಗಿ ಮತ್ತೆ ಕುದ್ರೋಳಿ ತಲುಪುವುದು. ಈ ನಯನ ಮನೋಹರ ಮೋರವಣಿಗೆಯನ್ನು ವೀಕ್ಷಿಸಲು ಪರವೂರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸುತ್ತಾರೆ.
ಮೈಸೂರು ಜಂಬೂಸವಾರಿ ಮೆರವಣಿಗೆಯಲ್ಲಿ ಆನೆಗಳು ಪ್ರಮುಖ ಆಕರ್ಷಣೆಯಾದರೆ ಮಂಗಳೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಮತ್ತು ಹುಲಿವೇಷಗಳ ತಂಡ ದೊಂದಿಗೆ ನವದುರ್ಗೆಯರ ಸ್ತಬ್ಧ ಚಿತ್ರ ಕೂಡ ರಮಣೀಯವಾಗಿರುತ್ತವೆ.
ಕೊರೊನ ಲಾಕ್ ಡೌನ್ ಅನಂತರ ಮಂಕಾಗಿದ್ದ ಹೊಟೇಲು ಉದ್ಯಮ ಈ ಬಾರಿ ನವರಾತ್ರಿ ವೇಳೆಗೆ ಮತ್ತೆ ಚೇತರಿಸತೊಡಗಿದೆ.