ಮರಿ ಹಾಕಿದ ದಸರ ಆನೆಗಳು ಮೈಸೂರು ವರದಿ

ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸಿದ್ದ 28 ವರ್ಷದ ನೇತ್ರಾವತಿ ಆನೆಯು ಸೋಮವಾರ ರಾತ್ರಿ ಹೆಣ್ಣು ಮರಿಗೆ ಜನ್ಮನೀಡಿದೆ.

ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರಲು ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯು ಅಂಬಾರಿ ಹೊರುವ ಸಾಗರನ ಜತೆ ಯಾವ ಆನೆಗಳನ್ನು ಕಳುಹಿಸಬೇಕು ಎಂದು ಗೊಂದಲ ಮೂಡಿತ್ತು. ಕುಂತಿ ಈಚೆಗೆ ಮರಿ ಹಾಕಿತ್ತು. ಭಾನುಮತಿ ತುಂಬು ಗರ್ಭಿಣಿಯಾಗಿತ್ತು. ಹಾಗಾಗಿ ಸಾಗರ ಆನೆ ಜತೆ ನೇತ್ರಾವತಿ, ಹೇಮಾವತಿ ಆನೆಗಳನ್ನು ಕಳುಹಿಸಲಾಗಿತ್ತು. ಕಳೆದ 15 ದಿನಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ತಾಲೀಮು ಸಹ ನಡೆದಿತ್ತು. ಮೂರು ದಿನದ ಹಿಂದೆ ಶಿವಮೊಗ್ಗ ನಗರಕ್ಕೆ ಕರೆತಂದು ಮೆರವಣಿಗೆ ಮಾರ್ಗದಲ್ಲಿ ಬೆಳಗ್ಗೆ ಸಂಜೆ ತಾಲೀಮು ನಡೆಸಲಾಗುತಿತ್ತು. ನಿನ್ನೆ ಸಂಜೆ ಕೂಡ ತಾಲೀಮು ಮುಗಿಸಿ ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ 10 ಗಂಟೆ ಸುಮಾರಿಗೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದಾಳೆ.

ಗರ್ಭಿಣಿ ಆನೆ ಕರೆತಂದಿದ್ದಕ್ಕೆ ಒಂದೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ ಇನ್ನೊಂದೆಡೆ ನೇತ್ರಾವತಿ ಗರ್ಭ ಧರಿಸಿರುವ ಬಗ್ಗೆ ಯಾವುದೇ ಲಕ್ಷಣಗಳನ್ನು ಬಿಟ್ಟು ಕೊಡದಿರುವ ಬಗ್ಗೆ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ತಿಂಗಳು ಪ್ರೆಗ್ನೆನ್ಸಿ ಟೆಸ್ಟ್ ನಲ್ಲೂ ಸಹ ನೆಗೆಟಿವ್ ಬಂದಿತ್ತು ಎಂದಿದ್ದಾರೆ ಅಧಿಕಾರಿಗಳು.

ಮೈಸೂರಿನಲ್ಲು ದಸರಾ ಆನೆ ಲಕ್ಷ್ಮೀ ಮರಿ ಹಾಕಿದೆ

ಮೈಸೂರು ವರದಿ

ಮೈಸೂರು: ನಾಡಹಬ್ಬ ದಸರಾ (Mysuru Dasara) ಮೆರವಣಿಗೆಯಲ್ಲಿ ಭಾಗಿಯಾಗಲು ಬಂದಿರುವ ಗಜಪಡೆಯಲ್ಲಿ ‘ಲಕ್ಷ್ಮಿ’ (Lakshmi) ಹೆಸರಿನ ಆನೆಯು ಮಂಗಳವಾರ ರಾತ್ರಿ ಮರಿಗೆ (Baby Elephant) ಜನ್ಮ ನೀಡಿದೆ. ಇದು ಮೈಸೂರು ಅರಮನೆ ಆವರಣದಲ್ಲಿನ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ.

ಶಿಬಿರದಿಂದ ದಸರಾಗಾಗಿ ಕರೆತಂದಿರುವ ಗಜಪಡೆಯಿಂದ ಲಕ್ಷ್ಮಿ ಆನೆಯನ್ನು ಪ್ರತ್ಯೇಕ ಮಾಡಿದ್ದು, ಅರಮನೆಯ ಆವರಣದಲ್ಲಿಯೇ ನಿರ್ಬಂಧಿತ ಜಾಗದಲ್ಲಿ ಬಿಡಾರ ಮಾಡಲಾಗಿದೆ. ಲಕ್ಷ್ಮಿ ಮತ್ತು ಗಂಡು ಮರಿಯು ಆರೋಗ್ಯದಿಂದ ಇರುವುದಾಗಿ ತಿಳಿದು ಬಂದಿದೆ. ಮುಂದಿನ ಕೆಲವು ದಿನಗಳವರೆಗೂ ಲಕ್ಷ್ಮಿ ಆನೆಗೆ ತೊಂದರೆ ಕೊಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ದಸರಾ ಸಮಯದಲ್ಲಿ ಅರಮನೆ ಆವರಣದಲ್ಲಿಯೇ ಜನಿಸಿರುವ ಆನೆಯ ಮರಿಗೆ ಏನೆಂದು ಹೆಸರಿಡಬಹುದು ಎಂದು ಈಗ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಪುರಾಣದಲ್ಲಿ ಬರುವ ಪಾತ್ರಗಳು, ದೇವರ ನಾಮಗಳನ್ನು ಆನೆಗಳಿಗೆ ಇಟ್ಟಿರುವ ಪರಂಪರೆ ಇದೆ. ಈಗ ಲಕ್ಷ್ಮಿ ಪುತ್ರನನ್ನು ಏನೆಂದು ಕರೆಯಬಹುದು?

ಸೋಮವಾರ ಅರಮನೆ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಕುಶಾಲತೋಪಿನ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರ, ವಿಜಯ, ಲಕ್ಷ್ಮಿ, ನಿಶಾನೆ ಆನೆ ಅರ್ಜುನ ಸೇರಿದಂತೆ ಒಟ್ಟು 14 ಆನೆಗಳು ಭಾಗವಹಿಸಿದ್ದವು.

One Comment on “ಮರಿ ಹಾಕಿದ ದಸರ ಆನೆಗಳು ಮೈಸೂರು ವರದಿ”

Leave a Reply

Your email address will not be published. Required fields are marked *