ಪಣಂಬೂರು ಬೀಚ್‌ನಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತ್ಯು, ಆತ್ಮಹತ್ಯೆ ಶಂಕೆ..!

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.

ಪಣಂಬೂರು ಬೀಚ್‌ನಲ್ಲಿ ಬೆಂಗಳೂರಿನ ಜೋಡಿ ಶವ ರೂಪದಲ್ಲಿ ಪತ್ತೆಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ .

ಮೃತರನ್ನು ಲಕ್ಷ್ಮೀ (43), ಬೋರಲಿಂಗಯ್ಯ (50) ಮೃತಪಟ್ಟವರು ಎಂದು ತಿಳಿದು ಬಂದಿದ್ದು, ಇಬ್ಬರು ಬೆಂಗಳೂರು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.

ನಿನ್ನೆ ಬೆಂಗಳೂರಿನಿಂದ ಆಗಮಿಸಿದದ್ದ ಈ ಜೋಡಿ ಇಂದು ಮುಂಜಾನೆ 5 ಗಂಟೆ ಸುಆರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದಾರೆ.

ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೋಬೈಲ್ ಮತ್ತಿರ ಸೊತ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಇಬ್ಬರ ಶವಗಳನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪಣಂಬೂರು ಪೊಲೀಸರು ಈ ಬಗ್ಗೆ ತನಿಖೆ ನಡಸುತ್ತಿದ್ದಾರೆ.

Leave a Reply

Your email address will not be published. Required fields are marked *