ಆಂತರಿಕ ಜಗಳದಿಂದ ಸಿದ್ದರಾಮಯ್ಯ ಸರಕಾರ ಪತನ ಆಗಲಿದೆಃ ನಳಿನ್

 

ಮಂಗಳೂರುಃ ಆಡಳಿತರೂಢ ಕಾಂಗ್ರೆಸ್ ಪ7 ಆಂತರಿಕ ಜಗಳದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ತನ್ನಿಂದ ತಾನೇ ಬಿದ್ದು ಹೋಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಸರಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ. ಬಿಜೆಪಿ ಶಾಸಕರ ಮೇಲೆ ಕೇಸುಗಳನ್ನು ದಾಖಲಿಸಿರುವುದನ್ನು ಖಂಡಿಸಲು ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಾಗಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರ ಮೂರು ಗುಂಪುಗಳು ಇವೆ. ಈಗಾಗಲೇ ಡಿನ್ನರ್ ರಾಜಕೀಯ ಆರಂಭವಾಗಿದ್ದು, ಶೀಘ್ರದಲ್ಲೇ ರೆಸಾರ್ಟ್ ರಾಜಕೀಯ ಆರಂಭವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಿದ್ದರಾಮಯ್ಯ ಸರಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್, ಕೋಲಾರದಲ್ಲಿ ಸಂಸದರನ್ನು ಅಗೌರವದಿಂದ ನಡೆಸಿಕೊಳ್ಳಲಾಯಿತು. ಬೆಳ್ತಂಗಡಿಯಲ್ಲಿ ಶಾಸಕರ ವಿರುದ್ಧ ಅರಣ್ಯ ಭೂಮಿ ವಿಚಾರದಲ್ಲಿ ಕೇಸುದಾಖಸಲಾಯಿತು. ಇದೀಗ ಸೋಶಿಯಲ್ ಮಿಡಿಯದಲ್ಲಿ ಪೋಸ್ಟ್ ಶೇರ್ ಮಾಡಿರುವುದಕ್ಕೆ ಮತ್ತೊಂದು ಕೇಸು ದಾಖಲಿಸಲಾಗಿದೆ ಎಂದರು.

 

 

2 Comments on “ಆಂತರಿಕ ಜಗಳದಿಂದ ಸಿದ್ದರಾಮಯ್ಯ ಸರಕಾರ ಪತನ ಆಗಲಿದೆಃ ನಳಿನ್”

Leave a Reply

Your email address will not be published. Required fields are marked *