Chaitra Kundapura cash for ticket case: CCB complete investigation ಟಿಕೆಟ್‌ಗಾಗಿ ಹಣ ಪಡೆದ ಪ್ರಕರಣ: ಚೈತ್ರಾ ಕುಂದಾಪುರ ಕೇಸ್ ತನಿಖೆ ಪೂರ್ಣ

ಟಿಕೆಟ್‌ಗಾಗಿ ಹಣ ಪಡೆದ ಪ್ರಕರಣ: ಚೈತ್ರಾ ಕುಂದಾಪುರ ಕೇಸ್ ತನಿಖೆ ಪೂರ್ಣ

ಬೆಂಗಳೂರು ಃ ಢೋಂಗಿ ಹಿಂದೂತ್ವವಾದಿ ಬಾಡಿಗೆ ಭಾಷಣಗಾರ್ತಿ ಚೈತ್ರಾ ಕುಂದಾಪುರ ಮತ್ತು ಇತರ ಆರು ಮಂದಿಯ ಬಂಧನದ ಎರಡು ತಿಂಗಳ ಅನಂತರ ಬೆಂಗಳೂರು ಪೊಲೀಸ್ ಕಮೀಷನರೇಟ್ ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ವಂಚನೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದೆ.

ಆರೋಪಿಗಳು ಬಂಧನದಲ್ಲಿದ್ದು ಇದುವರೆಗೆ ಜಮೀನು ದೊರೆತ್ತಿಲ್ಲ. ನಿಗದಿತ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸುವಂತೆ ಬಿಜೆಪಿ ಕಡೆಯಿಂದಲೇ ಒತ್ತಡ ಇರುವುದರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.

ಭಾರತೀಯ ಜನತಾ ಪಾರ್ಟಿಮುಖಂಡ, ಇಂದಿರಾ ಕ್ಯಾಂಟೀನ್ ಗುತ್ತಿಗೆದದಾರ, ಉದ್ಯಮಿ ಗೋವಿಂದ್ ಬಾಬು ಪೂಜಾರಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಟಿಕೆಟ್‌ಗಾಗಿ ನಗದು ಹಗರಣದಲ್ಲಿ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿಸಿಬಿ ಪೊಲೀಸರ ತಂಡ 68 ಸಾಕ್ಷಿಗಳಿಂದ ಹೇಳಿಕೆ ಪಡೆದು ಆಡಿಯೋ, ವಿಡಿಯೋ ಮುಂತಾದ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.      ಕರ್ನಾಟಕ ಕರಾವಳಿಯಲ್ಲಿ ಪೊರ್ಕ್ ದರ ಹೆಚ್ಚಳ, ಹಂದಿ ಸಾಕಾಣೆ ಹಿನ್ನಡೆ

ಚೈತ್ರಾ ಕುಂದಾಪುರ ಸೇರಿ ಆರು ಮಂದಿ ಗೋವಿಂದ್ ಬಾಬುಗೆ ಉಡುಪಿಯ ಜಿಲ್ಲೆಯ Byndoor Assembly ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ 5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದ ತನಿಖೆಯನ್ನು ಸಿಬಿಬಿ ಪೊಲೀಸರು ಮುಕ್ತಾಯಗೊಳಿಸಿದ್ದಾರೆ. ಮುಂದಿನ ವಾರ ಸಿಸಿಬಿ ಪೊಲೀಸರು ಏಳು ಜನರ ವಿರುದ್ಧದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ನಿರೀಕ್ಷೆಯಿದೆ. ಚೈತ್ರಾ ಕುಂದಾಪುರ, ಶ್ರೀಕಾಂತ್, ಗಗನ್ ಕಡೂರ್, ವಿಜಯನಗರ ಮಠದ ಹಾಲಶ್ರೀ, ಧನರಾಜ್ ಮತ್ತು ಚನ್ನನಾಯಕ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸಜ್ಜಾಗಿದ್ದಾರೆ. ಆರೋಪಿಗಳಿಂದ 4.11 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

5 ಕೋಟಿ ಪಡೆದು ವಂಚನೆ

ದೂರುದಾರರಾದ ಉದ್ಯಮಿ ಗೋವಿಂದ್ ಬಾಬು ಅವರು ಚೈತ್ರಾ ಮತ್ತು ಗ್ಯಾಂಗ್ ಕಂತುಗಳಲ್ಲಿ 5 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. 5 ಕೋಟಿ ರೂಪಾಯಿ ನೀಡಿರುವ ಕುರಿತಾಗಿ ದಾಖಲೆಗಳನ್ನು ಕೂಡ ಬಾಬು ಪೂಜಾರಿ ಪೊಲೀಸರಿಗೆ ನೀಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಅವರ ತಂಡ ಬಿಜೆಪಿ ನಾಯಕರೊಂದಿಗೆ, ಬಿಜೆಪಿ ಹೈಕಮಾಂಡ್  ಮತ್ತು ಸಂಘ ಪರಿವಾರದ ಮುಖಂಡರ ಸಂಪರ್ಕ ಹೊಂದಿದ್ದಾರೆಂದು ನಂಬಿಸಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ B Form ಕೊಡಿಸುವ ಭರವಸೆ ನೀಡಿದ್ದರು. ಗೋವಿಂದ್ ಬಾಬು ಪೂಜಾರಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದ ನಂತರ ತನ್ನಿಂದ ಹಣ ಪಡೆದಿದ್ದ ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ವಿಶ್ವನಾಥ್ ಸಾವನ್ನಪ್ಪಿದ್ದು, ಮರುಪಾವತಿಸಲು ಸಾಧ್ಯವಿಲ್ಲ ಎಂದು ಆರೋಪಿಗಳು ನಂಬಿಸಿದ್ದರು.

ಹಣ ಹಿಂದಿರುಗಿಸಲು ಹಲವು ಸುತ್ತಿನ ಸಭೆ ನಡೆಸಿದರೂ ವಿಫಲ

ಹಣ ಹಿಂದಿರುಗಿಸಲು ಹಲವು ಸುತ್ತಿನ ಸಭೆ ನಡೆಸಿದರೂ ವಿಫಲವಾದ ಹಿನ್ನೆಲೆಯಲ್ಲಿ ಗೋವಿಂದ್ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಆ ಬಳಿಕ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸಿಸಿಬಿಗೆ ವಹಿಸಿ ತನಿಖೆ ನಡೆಸಲು ಆದೇಶ ನೀಡಿದ್ದರು.ಈ ಮಧ್ಯೆ, ಗೋವಿಂದ್ ಬಾಬು ಪೂಜಾರಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಂಚನೆ ಪ್ರಕರಣದ ತನಿಖೆಗೆ ಬೆಂಬಲ ಯಾಚಿಸಿದ್ದರು. ಚೈತ್ರಾ ಕುಂದಾಪುರ ಅವರು ಈ ಹಿಂದೆ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಈ ಪ್ರಕರಣದಲ್ಲಿ ಹಲವು ದೊಡ್ಡವರ ಕೈವಾಡವಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ಸರಕಾರದ ವೈಫಲ್ಯ

ಆದರೆ, ಕಾಂಗ್ರೆಸ್ ಸರಕಾರದ ಪೊಲೀಸ್ ಇಲಾಖೆ ಯಾವುದೇ ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯ ನಾಯಕರ ಕೈವಾಡ ಇರುವುದನ್ನು ಬಹಿರಂಗ ಮಾಡಲು ವಿಫಲವಾಗಿದೆ. ಉಡುಪಿ ಬಿಜೆಪಿ ಶಾಸಕರಾಗಿದ್ದವರ ಮಡದಿ ಸಾವು ಸಂಭವಿಸಿದಾಗ ಕಾಂಗ್ರೆಸ್ ಮುಖಂಡರು  ಅಪರಾಧ ಎಸಗಿದ  ಬಿಜೆಪಿ ಮುಖಂಡರನ್ನು ಬಚಾವ್ ಮಾಡಿದ ರೀತಿಯಲ್ಲಿ ಇಲ್ಲೂ ಕೂಡ ಬಿಜೆಪಿ ಮತ್ತು ಪರಿವಾರದ ಮುಖಂಡರನ್ನು ಬಚಾವ್ ಮಾಡಿರುವ ಸಾಧ್ಯತೆಗಳು ಕಾಣುತ್ತಿವೆ.

 

Leave a Reply

Your email address will not be published. Required fields are marked *