ಕಾಂಗ್ರೆಸ್ಸಿನ ಬಿಜೆಪಿ ಪ್ರೀತಿಃ ಬಿಜೆಪಿ ನೇಮಿಸಿದ ಹಿಂದುಳಿದ ವರ್ಗದ ಆಯೋಗದ ಮುಂದುವರಿಕೆ

caste Census

ಮಂಗಳೂರು, ನ. 24- ಸೋಶಿಯಲಿಸ್ಟ್, ಹಿಂದುಳಿದ ವರ್ಗಗಳ ಉದ್ಧಾರಕ ಎಂಬ ಆರೋಪಗಳನ್ನು ಹೊತ್ತಿರುವ ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ  ಭಾರತೀಯ ಜನತಾಪಾರ್ಟಿ ಸರಕಾರ ನೇಮಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಮುಂದುವರಿಸಿರುವುದು  ಆಡಳಿತ ರೂಢ ಪಕ್ಷದ ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್ ಪಕ್ಷ ಸೇರಿ ಲೋಕಸಭೆ ಚುನಾವಣೆ ಸ್ಪರ್ಧಿಸಲು ತುದಿಗಾಲ ಮೇಲೆ ನಿಂತಿರುವ ಬಿಜೆಪಿ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯ ಆಯೋಗದ ಅವಧಿ ನವೆಂಬರ್ 23ಕ್ಕೆ ಮುಕ್ತಾಯಗೊಂಡಿದ್ದು, ಇದೀಗ ಸರಕಾರ ಕಾಂಗ್ರೆಸ್ ಸರಕಾರ  ಅದೇ ಆಯೋಗವನ್ನು ಮುಂದುವರಿಸಿ ಅಧಿಸೂಚನೆ ಹೊರಡಿಸುವ ಮೂಲಕ ತನ್ನ ಫ್ಯಾಸಿಸ್ಚ್ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ.

ಪಂಚಾರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ  ಪ್ರಕ್ರಿಯೆ  ನಡೆಯುತ್ತಿದ್ದಂತೆಯೇ  ಬಹುಸಂಖ್ಯಾತ ಹಿಂದುಳಿದ ವರ್ಗಗಳ ವಿರೋಧವಾದ ನಿರ್ಣಯವನ್ನು ಕಾಂಗ್ರೆಸ್ ಸರಕಾರ ಕೈಗೊಂಡಿರುವುದು ಪಕ್ಷಕ್ಕೆ ರಾಜಕೀಯ ಹಿನ್ನಲೆಯಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಇದು ಬಾಧಕವಾಗಲಿದೆ.

ಈಗಾಗಲೇ ಸರಕಾರ ರಚನೆಯಾಗಿ ಆರು ತಿಂಗಳು ಕಳೆದರು ಕೂಡ ನಿಗಮ, ಮಂಡಳಿ, ಪ್ರಾಧಿಕಾರ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೇಮಕ ಮಾಡಲು ಸಿದ್ದರಾಮಯ್ಯ ಸರಕಾರ ಸುತರಾಂ ಸಿದ್ಧವಾಗಿಲ್ಲ. ನೇಮಕ ಮಾಡಿದರೂ ಮೊದಲ ಆದ್ಯತೆ ಶಾಸಕರಿಗೆ ಎಂದು ಪಕ್ಷ ದುರಂಹಕಾರ ಹೇಳಿಕೆಯನ್ನು ಬಹಿರಂಗವಾಗಿ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಚೊಂಬು ಮಾತ್ರ ಇನ್ನೇನು ದೊರೆಯುವುದಿಲ್ಲ ಎಂಬ ಸೂಚನೆಯನ್ನು ಈಗಾಗಲೇ ನೀಡಿದೆ.  ಶಾಸಕರಲ್ಲು ಕೂಡ ಬಹುತೇಕ ಮಂದಿ ಪಕ್ಷಾಂತರ ಮಾಡಿ ಬಂದವರೆ ಸ್ಥಾನಗಳನ್ನು ಬಾಚಿಕೊಳ್ಳಲಿದ್ಧಾರೆ ಎನ್ನಲಾಗುತ್ತಿದೆ.

ಪಕ್ಷದ ಕಾರ್ಯಕರ್ತರನ್ನು ಯಾವುದೇ ಹುದ್ದೆಗೆ ನೇಮಕ ಮಾಡುವ ಕಾಳಜಿ ಇಲ್ಲದಿದ್ದರೂ ಕಾಂಗ್ರೆಸ್ ಸರಕಾರಕ್ಕೆ ಮೋದಿಯವರ ಪಕ್ಷದ ಮೇಲೆ ವಿಶೇಷ ಪ್ರೀತಿ ಇರುವುದು ಇದೇ ಹೊಸತಲ್ಲ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಓಡಾಡುವ ಯಾವುದೇ ಬಿಜೆಪಿ ಮುಖಂಡರನ್ನು ಸಿಎಂ ನಿವಾಸಕ್ಕೆ ಕರೆದು ಹೂಗುಚ್ಛ ನೀಡುವ ಪರಿಪಾಠವನ್ನು ಈ ಸರಕಾರ ಕಳೆದು ಐದಾರು ತಿಂಗಳಿನಿಂದ ನಡೆಸುತ್ತಿದೆ.

ಅದೇ ರೀತಿಯಲ್ಲಿ ಬಿಜೆಪಿ ನೇಮಿಸಿದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಸದಸ್ಯರನ್ನು ಕಾಂಗ್ರೆಸ್ ಸರಕಾರ ಮುಂದುವರಿಸಿ ಆದೇಶ ನೀಡಿದೆ.  ಸಂಘ ಪರಿವಾರದ ಸೂಚನೆ ಮೇರೆಗೆ ಈ ಕೆಲಸ ಮಾಡಲಾಗಿದೆಯೇ ಎಂಬುದನ್ನು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರೇ ಖಚಿತಪಡಿಸಬೇಕು.

ಬೇರೆಯಾರು ಯೋಗ್ಯರು ಇಲ್ಲದಿದ್ದರೆ ಅಧ್ಯಕ್ಷರನ್ನು ಮುಂದುವರಿಸಲಿ, ಸದಸ್ಯರನ್ನುಮುಂದುವರಿಸುವ ಅಗತ್ಯ ಏನಿತ್ತು ಎಂದು ಹಲವರು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *