Billava: ಆರ್ಯ ಈಡಿಗ ಸಂಘದ ಬೆಳ್ಳಿ, ಚಿನ್ನದ ಹಬ್ಬ ಎಲ್ಲಿ ನಡೆಯಿತು? ಹರಿಪ್ರಸಾದ್ ಪ್ರಶ್ನೆ

Billava: ಹುಬ್ಬಳ್ಳಿ,ಡಿ.9- ಆರ್ಯ ಈಡಿಗ Ediga ಸಂಘದ  75 ವರ್ಷಗಳ ಅಮೃತ ಮಹೋತ್ಸವ ಅಂತ ಹೇಳುತ್ತಾರೆ. ಸಂಘದ ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಯಾವಾಗ ಮಾಡಿದ್ರು, ಎಲ್ಲಿ ಮಾಡಿದ್ರು ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಅಹಿಂದ ವರ್ಗದ ಧೀಮಂತ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಬೆಳಗಾವಿ ವಿಧಾನಮಂಡಲದ ಅಧಿವೇಶನದ ಅನಂತರ ಹುಬ್ಬಳ್ಳಿಗೆ ಆಗಮಸಿದ ಹರಿಪ್ರಸಾದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಡಿಗ ಸಮಾವೇಶಕ್ಕೆ ಹೋಗುವುದಿಲ್ಲ

ತನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಬಾಲ್ ರೀತಿಯಲ್ಲಿ ತುಳಿದಷ್ಟು ಮೇಲೆ ಪುಟಿಯುತ್ತೇನೆ. ತನ್ನನ್ನು ರಾಜಕೀಯವಾಗಿ ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ತುಳಿದಷ್ಟು ಮೇಲೆ ಪುಟಿಯುತ್ತೇನೆ ಎಂದವರು ಹೇಳಿದರು

ಬೆಂಗಳೂರಲ್ಲಿ ಈಡಿಗ- Billava ಸಮಾವೇಶ ನಡೆಯುತ್ತಿದೆ ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಕುತಂತ್ರದಿಂದ ಸಮಾವೇಶ ಆಯೋಜನೆ ಇದರಲ್ಲಿ ಸಿಎಂ, ಡಿಸಿಎಂ ಭಾಗಿಯಾಗುತ್ತಿದ್ದಾರೆ. ಆದರೆ ನಾನು ಈ ಸಮಾವೇಶಕ್ಕೆ ಹೋಗುತ್ತಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ಸೇಂದಿ, ಸಾರಾಯಿ ನಿಷೇಧ ಆದಾಗ ಈ ಸಂಘದಲ್ಲಿ ಇದ್ದವರು ಏನು ಮಾಡಲಿಲ್ಲ. ನಮ್ಮ ಸಮಾಜದ ಆರು ಸ್ವಾಮೀಜಿಗಳಿದ್ದಾರೆ. ಈ ಪೈಕಿ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಈ ಕಾರ್ಯಕ್ರಮಕ್ಕೆ ಹೋಗ್ತಿರೋ ಸಿಎಂ ಮತ್ತು ಡಿಸಿಎಂ ಗೆ ನಾನು ಶುಭ ಹಾರೈಸುತ್ತೇನೆ. ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ನಾನು ಪಾಲ್ಗೊಳ್ಳುತ್ತಿದ್ದೆ. ರಾಜಕೀಯ ಪ್ರೇರಿತ ಸಮಾವೇಶಗಳಲ್ಲಿ ನಾನು ಭಾಗಿಯಾಗಲ್ಲ. ಇದೊಂದು ರಾಜಕೀಯ ಪ್ರೇರಿತ ಆಗಿದೆ ಕಾರಣ ರಾಜಕೀಯ ಕುತಂತ್ರದ ಸಮಾವೇಶ ಆಗಿದೆ. ಈ ಸಮಾವೇಶದಲ್ಲಿ ಸಂಘದವರು ಬೇಡಿಕೆಗಳನ್ನು ಇಡಲಿ. ಸರ್ಕಾರ ಅದನ್ನು ಬಗೆಹರಿಸಲಿ ಎಂದರು.

ಈಡಿಗ, ಬಿಲ್ಲವ Ediga– Billava, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವ. ಈಡಿಗ ಸಮಾಜದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಇದೆ. 70 ಲಕ್ಷ ಜನರಿದ್ದಾರೆ ಎಂದು ತಿಮ್ಮೇಗೌಡರು ಹೇಳುತ್ತಾರೆ. ಆದರೆ, ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ. ಯಾಕೆ ಕನಿಷ್ಟ 1 ಲಕ್ಷ ಮಂದಿಯನ್ನು ಸದಸ್ಯರನ್ನು ಮಾಡಿಲ್ಲ. ಕಳೆದ ಕೆಲವು ವರ್ಷಗಳಿಂದ ಹೊಸ ಸದಸ್ಯರ ಸೇರ್ಪಡೆ ಆಗುತ್ತಿಲ್ಲ. ಯುವ ಮುಖಂಡರಿಗೆ ಅವಕಾಶ ನೀಡುತ್ತಿಲ್ಲ.

ಜಾತಿ ಜನಗಣತಿCaste Census ಗೆ ಹಿಂದಿನಿಂದಲೂ ಪ್ರಬಲ ಜಾತಿಗಳು ವಿರೋಧ ಮಾಡ್ತಾನೆ ಬಂದಿವೆ. ಹಾವನೂರು ಕಮಿಷನ್ ರಿಪೋರ್ಟ್ ಬಂದಾಗ ಶಾಸಕರೊಬ್ಬರು ಅದರ ವರದಿ ಸುಟ್ಟಿದ್ದರು. ಆದರೆ ದೇವರಾಜ್ ಅರಸು ವರದಿ ಜಾರಿಗೆ ತಂದಿದ್ದರು ಹಿಂದುಳಿದ ವರ್ಗದಲ್ಲಿ ಎಷ್ಟೋ ಜಾತಿಗಳಿವೆ. ಆದರೆ, ಮೀಸಲಾತಿ ಲಾಭ ಪಡೆಯುತ್ತಿರೋದು ಮಾತ್ರ ಕೆಲವೇ ಜಾತಿಗಳು. ಹೀಗಾಗಿ ಅರಸು ಮಾದರಿಯಲ್ಲಿ ಜಾತಿ ಜನಗಣತಿ ವರದಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರದ್ದು ತಿರುಕನ ಕನಸು. ಬಿಜೆಪಿಯವರು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆಪರೇಷನ್ ಕಮಲದಲ್ಲಿ ಬಿಜೆಪಿ ಮಾಸ್ಟರ್ ಡಿಗ್ರಿ ತಗೊಂಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಚನ್ನಾಗಿ ನಡೀತಾ ಇದೆ

ವಿಧಾನಪರಿಷತ್ ನಲ್ಲಿ ಸಭಾಧ್ಯಕ್ಷರು ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಆದಷ್ಟು ಪ್ರಯತ್ನ ಮಾಡ್ತಾ ಇದ್ದಾರೆ ಪ್ರಶ್ನೆಗಳು ಆದಷ್ಟು ಬರ್ತಾ ಇವೆ. ಚರ್ಚೆ ಇನ್ನೊಂದು ವಾರ ನಡೆಯಲಿದೆ ಎಂದರು.Hariprasad

ಡಿಕೆಶಿ ಸಿಎಂ, ಮ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ ಅವರು , ” ಸ್ವಾಮೀಜಿಗಳು ಹೇಳಿದ ಮೇಲೆ ನಾವೇನು ಹೇಳಲಿಕ್ಕೆ ಆಗುವುದಿಲ್ಲ”. ಸ್ವಾಮೀಜಿ ಅವರ ಇಂಗಿತ ಹೇಳಿದ್ದಾರೆ. ಅದಕ್ಕೆ ತಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ

ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನೊಣವಿನಕೆರೆ ಕಾಡಾಸಿದ್ಧೇಶ್ವರ ಮಠಾಧ್ಯಕ್ಷರಾಗಿರುವ ಡಾ. ಕರಿವೃಷಭ ದೇಶೀಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಅವರು ಶ್ರೀಮಠದ ಪರಮ ಭಕ್ತ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ. ಅವರು ಮುಖ್ಯಮಂತ್ರಿ ಆಗಲಿ ಎಂಬುದು ನಮ್ಮ ಆಶೀರ್ವಾದ ಕೂಡ ಇದೆ ಎಂದು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಾವು ಭಗವಂತನಲ್ಲಿ ಸಂಕಲ್ಪ ಕೂಡ ಮಾಡಿದ್ದೇವೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದ ಸ್ವಾಮೀಜಿ. ಸರ್ಕಾರ ಮೀಸಲಾತಿ ಪ್ರಕಟಿಸುವುದು ಉತ್ತಮ. ಅದು ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಮಠದ ಪರಮಭಕ್ತರಾಗಿರುವ ಡಿಕೆಶಿ ತುಮಕೂರು ಜಿಲ್ಲೆಯ ತಿಪಟೂರಿನ ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪರಮ ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ಆಗಾಗ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿರುತ್ತಾರೆ. ಯಾವುದೇ ಪ್ರಮುಖ ನಿರ್ಧಾರ ತಳೆಯುವ ಮುನ್ನ ಅವರು ಶ್ರೀಗಳ ಬಳಿ ಕೇಳಿಯೇ ಮುಂದುವರಿಯುತ್ತಾರೆ. ಪ್ರತಿಯೊಂದು ಕಾರ್ಯತಂತ್ರ ರೂಪಿಸುವ ಮುನ್ನವೂ ಶ್ರೀಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

ವಿಧಾನಸಭಾ ಚುನಾವಣೆ ವೇಳೆ ನೊಣವಿನಕೆರೆ ಅಜ್ಜಯ್ಯನಿಗೆ ನಮಿಸಿದ ಬಳಿಕವೇ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಫಾರಂ ಹಂಚಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದ ಬಳಿಕ ದಿಲ್ಲಿಗೆ ಹೈಕಮಾಂಡ್ ಗೆ ತೆರಳುವ ಮುನ್ನ ಅವರು ಇಲ್ಲಿಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರು ಅವರನ್ನು ಪ್ರಶ್ನಿಸಿದಾಗ, ಇದರಲ್ಲಿ ವಿಶೇಷವೇನೂ ಇಲ್ಲ. ಮೊದಲಿನಿಂದಲೂ ಇಲ್ಲಿಗೆ ಬರುವಂತೆ ಬಂದಿದ್ದೇನೆ . ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದಷ್ಟೇ ತಿಳಿಸಿದ್ದರು.

ಮಠದ ಪರಮಭಕ್ತರಾಗಿರುವ ಡಿಕೆಶಿ ತುಮಕೂರು ಜಿಲ್ಲೆಯ ತಿಪಟೂರಿನ ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪರಮ ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ಆಗಾಗ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿರುತ್ತಾರೆ. ಯಾವುದೇ ಪ್ರಮುಖ ನಿರ್ಧಾರ ತಳೆಯುವ ಮುನ್ನ ಅವರು ಶ್ರೀಗಳ ಬಳಿ ಕೇಳಿಯೇ ಮುಂದುವರಿಯುತ್ತಾರೆ. ಪ್ರತಿಯೊಂದು ಕಾರ್ಯತಂತ್ರ ರೂಪಿಸುವ ಮುನ್ನವೂ ಶ್ರೀಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

ಈಡಿಗ ಸಮಾವೇಶಕ್ಕೆ ವಿಮಾನ ಟಿಕೇಟ್, ಐರಾವತ ಬಸ್ ನೀಡಿದರು ನೀರಸ ಪ್ರತಿಕ್ರಿಯೆ

ವಿಧಾನಸಭಾ ಚುನಾವಣೆ ವೇಳೆ ನೊಣವಿನಕೆರೆ ಅಜ್ಜಯ್ಯನಿಗೆ ನಮಿಸಿದ ಬಳಿಕವೇ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಫಾರಂ ಹಂಚಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದ ಬಳಿಕ ದಿಲ್ಲಿಗೆ ಹೈಕಮಾಂಡ್ ಗೆ ತೆರಳುವ ಮುನ್ನ ಅವರು ಇಲ್ಲಿಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರು ಅವರನ್ನು ಪ್ರಶ್ನಿಸಿದಾಗ, ಇದರಲ್ಲಿ ವಿಶೇಷವೇನೂ ಇಲ್ಲ. ಮೊದಲಿನಿಂದಲೂ ಇಲ್ಲಿಗೆ ಬರುವಂತೆ ಬಂದಿದ್ದೇನೆ . ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದಷ್ಟೇ ತಿಳಿಸಿದ್ದರು.

ಇದೇ ವೇಳೆ ನೊಣವಿನಕೆರೆ ಅಜ್ಜಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಲಿಂಗಾಯಿತ ಸಚಿವ ಎಂ.ಬಿ. ಪಾಟೀಲ್ ಅವರು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದಿದ್ದಾರೆ.

ನೋಟಿಸ್ ವಿಚಾರದಲ್ಲಿ ತಾರತಮ್ಯ ಮಾಡಬಾರದಿತ್ತು. ನಾನು ಒಬ್ಬ ಹಿಂದುಳಿದವನು (Billava) ಅಂತಾ ನೋಟಿಸ್ ಕೊಡುತ್ತೀರಾ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ ಹರಿಪ್ರಸಾದ್, ಕೆಲವರು ಹೈಕಮಾಂಡ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಾರೆ. ನಾನು ಯಾವತ್ತು ಹೈಕಮಾಂಡ್ ನಿರ್ಧಾರ ಪ್ರಶ್ನೆ ಮಾಡಿದವನಲ್ಲ. ಕೆಲವರು ಕುತಂತ್ರ ಮಾಡಿದಾಗ ಅದನ್ನ ಪ್ರಶ್ನೆ ಮಾಡುತ್ತೇನೆ ಎಂದರು.  Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ಅಲ್ಲದೆ, ನನ್ನ ನೋಟಿಸ್​ಗೆ ನಾನು ಉತ್ತರ ಕೊಟ್ಟಾಗಿದೆ. ಬಳಿಕ ಎರಡು ಸಿಡಬ್ಲ್ಯೂಸಿ ಸಭೆಯಲ್ಲೂ ಭಾಗಿಯಾಗಿದ್ದೇನೆ. ಆದರೆ ಇವರು ಮಾಡುತ್ತಾ ಇರುವುದೇನು? ಇವರಿಗೆ ಯಾರು ಸ್ವಾತಂತ್ರ್ಯ ಕೊಟ್ಟಿಲ್ಲ. ಮನಸ್ಸಿಗೆ ಬಂದ ಹಾಗೆ ಇವರು ಮಾಡಲು ಆಗಲ್ಲ. ಪಕ್ಷದ ನಿಯಮ ಇದೆ ಅದರ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ಹಂತ ಇದೆ ಅಲ್ಲಿವರೆಗೂ ತಡೆದುಕೊಳ್ಳುತ್ತೇವೆ. ಅದಾದ ಬಳಿಕ ಭಾರಿ ಕಷ್ಟ ಆಗುತ್ತದೆ ಎಂದರು.

Kannada dhvani for Mangalore News Bangalore News

Leave a Reply

Your email address will not be published. Required fields are marked *