Bharath Bank: ಭಾರತ ಬ್ಯಾಂಕ್ ಚುನಾವಣಾ ಫಲಿತಾಂಶ

 

ಮುಂಬಯಿ, ಅ.5- ಇಲ್ಲಿನ ಪ್ರತಿಷ್ಠಿತ  ಭಾರತ್ ಕೊ ಅಪರೋಟಿವ್ ಬ್ಯಾಂಕ್ Bhaaraath Bank  ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜಯ ಸಿ. ಸುವರ್ಣ ಅವರ ಪುತ್ರ  ಸೂರ್ಯಕಾಂತ್ ಸುವರ್ಣ ನೇತೃತ್ವದ ಪ್ಯಾನಲ್ ಜಯಗಳಿಸಿದೆ.

ಜಿದ್ದಾಜಿದ್ದಿನ ಚುನಾವಣೆಯಲ್ಲಿ ಬಿಲ್ಲವ ಅಸೋಸಿಯೇಷನ್ ಪ್ಯಾನೆಲ್ ಮೇಲುಗೈ ಸಾಧಿಸುವಲ್ಲಿ ವಿಫಲವಾಗಿದ್ದು, ಹನಾಯ ಸೋಲು ಅನುಭವಿಸಿದೆ.

ಇಬ್ಬರು ಮಹಿಳೆಯರು ಸೇರಿದಂತೆ 20 ಮಂದಿ ನಿರ್ದೇಶಕರ ಆಯ್ಕೆಗೆ ಮತದಾನ Voting ಅ.2ರಂದು ನಡೆದಿದ್ದು, ಸೆ.4ರಂದು ಮತಏಣಿಕೆ ನೆಡದು ಫಲಿತಾಂಶ ಪ್ರಕಟವಾಗಿದೆ. ಈ ಫಲಿತಾಂಶದ ಮೂಲಕ ಬ್ಯಾಂಕ್ ಆಡಳಿತದಲ್ಲಿ ಬದಲಾವಣೆ ಅಭಾಧಿತವಾಗಿದೆ.

ಭಾರತ್ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ. ಜಯ ಸಿ. ಸುವರ್ಣ ರವರ ಪುತ್ರ ಸೂರ್ಯಕಾಂತ್ ಸುವರ್ಣ ಗುಂಪಿಗೆ ಇದು ಗೆಲ್ಲಲೇಬೇಕಾದ ಚುನಾವಣೆ ಆಗಿತ್ತು.

ಇದನ್ನುಓದಿಃ

ಜಿದ್ದಾಜಿದ್ದಿನ ಭಾರತ್ ಬ್ಯಾಕ್ ಆಡಳಿತ ಮಂಡಳಿ ಚುನಾವಣೆ

ಹದಿನೇಳು ಸಾಮಾನ್ಯ ಸ್ಥಾನಗಳು, ಎರಡು ಮಹಿಳಾ ಸ್ಥಾನಗಳು ಮತ್ತು ಒಂದು ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸ್ಥಾನ ಹಾಗೂ ಇಬ್ಬರು ಸಹ ಸದಸ್ಯ (ಕೋ.ಆಪ್ಟೆಡ್) ಸ್ಥಾನ ಹೊಂದಿರುವ ಬ್ಯಾಂಕ್‍ನ ಒಟ್ಟು ಇಪ್ಪತ್ತೆರಡು ಸ್ಥಾನಗಳ ನಿರ್ದೇಶಕ ಮಂಡಳಿಗೆ ಸಹ ಸದಸ್ಯ ಸ್ಥಾನ ಹೊರತು ಪಡಿಸಿ ಸ್ಪರ್ಧೆಗೆ ಸುಮಾರು 49 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ 40 ಉಮೇದುವಾರರು ಸ್ಪರ್ಧಾ ಕಣದಲ್ಲಿದ್ದರು.

ಜಯ ಸಿ. ಸುವರ್ಣ ಪ್ಯಾನೆಲ್  ವಿಜಯಿ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆಃ

ಸೋಮನಾಥ್ ಬಾಬು ಅಮೀನ್, ಅಶೋಕ್ ಮುತ್ತಪ್ಪ ಕೋಟ್ಯಾನ್, ಜಯ ಐತಪ್ಪ ಕೋಟ್ಯಾನ್, ಚಂದ್ರಶೇಖರ್ ಸೋಮಪ್ಪ ಪೂಜಾರಿ, ನರೇಶ್ ಕೃಷ್ಣ ಪೂಜಾರಿ, ನಿರಂಜನ್ ಲಕ್ಷ್ಮಣ್ ಪೂಜಾರಿ, ಸಂತೋಷ್ ಕಾಂತಪ್ಪ ಪೂಜಾರಿ, ದಯಾನಂದ್ ರಾಜು ಪೂಜಾರಿ, ಗಣೇಶ್ ದೇಜು ಪೂಜಾರಿ, ಗಂಗಾಧರ್ ಜಾರಪ್ಪ ಪೂಜಾರಿ, ಹರೀಶ್ ವಿಠಲ್ ಪೂಜಾರಿ, ಮೋಹನ್‌ದಾಸ್ ಗಿರಿಯ ಪೂಜಾರಿ, ಭಾಸ್ಕರ್ ಮುದ್ದು ಸಾಲಿಯಾನ್, ನಾರಾಯಣ್ ಲೋಕಯ್ಯ ಸುವರ್ಣ, ನಾರಾಯಣ್ ವೆಂಕಟಪ್ಪ ಸುವರ್ಣ, ಸುರೇಶ್ ಸುವರ್ಣ, ಸೂರ್ಯಕಾಂತ್ ಜಯ ಸುವರ್ಣ.

ಮಹಿಳಾ ವಿಭಾಗ

ಆಶಾ ರಾಜೇಶ್ ಬಂಗೇರ, ಜಯಲಕ್ಷ್ಮೀ ಪ್ರೇಮಾನಂದ್ ಸಾಲಿಯಾನ್.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಃ ಮಧು ನೇಮಕವೇ ಕಾಂಗ್ರೆಸ್ ಮೊದಲ ಯಡವಟ್ಟು

 

Leave a Reply

Your email address will not be published. Required fields are marked *