Bharath Bank ಕುತೂಹಲ ಮೂಡಿಸಿದ ಭಾರತ್ ಬ್ಯಾಂಕ್ ಚುನಾವಣೆ ಅಭ್ಯರ್ಥಿಗಳು ಯಾರು

ಮುಂಬಯಿ, ಅ.1- ಬಿಲ್ಲವ ಸಮುದಾಯದವರು Billavaa Community ಸ್ಥಾಪಿಸಿರುವ  ಭಾರತ್ ಕೊ ಅಪರೋಟಿವ್ ಬ್ಯಾಂಕ್ Bhaaraath Bank  ಆಡಳಿತ ಮಂಡಳಿಯ ಚುನಾವಣೆ Voting ಅ.2ರಂದು ನಡೆಯಲಿದ್ದು,  ಜಯ ಸಿ.ಸುವರ್ಣ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಚುನಾವಣೆ ವಿಪರೀತ ಕುತೂಹಲ ಮೂಡಿಸಿದೆ. ಭಾರತ್ ಬ್ಯಾಂಕ್  ಆಡಳಿತ ಮಂಡಳಿ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದ್ದು, ಅ. 2 ಗಾಂಧಿ ಜಯಂತಿ ರಜಾ ದಿನದಂಂದು ಮತದಾನ ನಡೆಯಲಿದೆ. ಜಯ ಸಿ. ಸುವರ್ಣ ಅವರ ಪುತ್ರ  ಸೂರ್ಯಕಾಂತ್ ಸುವರ್ಣ ಬೆಂಬಲಿತ ಪ್ಯಾನಲ್ ಜಯಗಳಿಸುತ್ತದೆಯೇ ಅಥವ ಬಿಲ್ಲವ ಅಬಿಲ್ಲವ ಅಸೋಸಿಯೇಷನ್ ಪ್ಯಾನೆಲ್ ಮೋಲುಗೈ ಸಾಧಿಸುತ್ತದಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೂವರು ಮಹಿಳೆಯರು ಸೇರಿದಂತೆ 19 ಮಂದಿ ನಿರ್ದೇಶಕರ ಆಯ್ಕೆಗz ಅಕ್ಟೊಬರ್ 2ರಂದು ಚುನಾವಣೆ ನಡೆಯಲಿದೆ. ಮತದಾನದಲ್ಲಿ ಭಾಗವಹಿಸಲು ಬಯಸುವ ಸದಸ್ಯರು ಬ್ಯಾಂಕ್ ಲಿಂಕ್ ತೆರೆದು ವಿವರ ಪಡೆಯಬಹುದು ಮತ್ತು ತಮ್ಮ ಸನಿಹದ ಮತದಾನ ಕೇಂದ್ರದಲ್ಲಿ ಮತದಾನ ಮಾಡಬಹುದು.

ಭಾರತ್ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ. ಜಯ ಸಿ. ಸುವರ್ಣ ರವರ ಪುತ್ರ ಸೂರ್ಯಕಾಂತ್ ಸುವರ್ಣ ಗುಂಪಿಗೆ ಇದು ಗೆಲ್ಲಲೇಬೇಕಾದ, ಗೆದ್ದು ತಮ್ಮ ಗದ್ದುಗೆಯನ್ನು ಇನ್ನಷ್ಟು

ಬಲಿಷ್ಠವಾಗಿಸಿಕೊಳ್ಳಬೇಕಾದ ಚುನಾವಣೆಯಾದರೆ, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಗುಂಪಿಗೆ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳುವ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಜಯ ಸಿ. ಸುವರ್ಣ ಪ್ಯಾನೆಲ್  ಅಭ್ಯರ್ಥಿಗಳು ಹೆಸರು ಈ ಕೆಳಗಿನಂತಿವೆಃ

ಸೋಮನಾಥ್ ಬಾಬು ಅಮೀನ್, ಅಶೋಕ್ ಮುತ್ತಪ್ಪ

ಕೋಟ್ಯಾನ್, ಜಯ ಐತಪ್ಪ ಕೋಟ್ಯಾನ್, ಚಂದ್ರಶೇಖರ್

ಸೋಮಪ್ಪ ಪೂಜಾರಿ, ನರೇಶ್ ಕೃಷ್ಣ ಪೂಜಾರಿ, ನಿರಂಜನ್

ಲಕ್ಷö್ಮಣ್ ಪೂಜಾರಿ, ಸಂತೋಷ್ ಕಾಂತಪ್ಪ ಪೂಜಾರಿ,

ದಯಾನಂದ್ ರಾಜು ಪೂಜಾರಿ, ಗಣೇಶ್ ದೇಜು ಪೂಜಾರಿ,

ಗಂಗಾಧರ್ ಜಾರಪ್ಪ ಪೂಜಾರಿ, ಹರೀಶ್ ವಿಠಲ್ ಪೂಜಾರಿ,

ಮೋಹನ್‌ದಾಸ್ ಗಿರಿಯ ಪೂಜಾರಿ, ಭಾಸ್ಕರ್ ಮುದ್ದು

ಸಾಲಿಯಾನ್, ನಾರಾಯಣ್ ಲೋಕಯ್ಯ ಸುವರ್ಣ,

ನಾರಾಯಣ್ ವೆಂಕಟಪ್ಪ ಸುವರ್ಣ, ಸುರೇಶ್ ಸುವರ್ಣ,

ಸೂರ್ಯಕಾಂತ್ ಜಯ ಸುವರ್ಣ.

ಮಹಿಳಾ ವಿಭಾಗ

ಆಶಾ ರಾಜೇಶ್ ಬಂಗೇರ, ಜಯಲಕ್ಷ್ಮೀ ಪ್ರೇಮಾನಂದ್

ಸಾಲಿಯಾನ್.

ಬಿಲ್ಲವ ಅಬಿಲ್ಲವ ಅಸೋಸಿಯೇಷನ್ ಪ್ಯಾನೆಲ್ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆಃ

ಎಲ್.ವಿ. ಅಮೀನ್, ನವೀನ್‌ಚಂದ್ರ ಆರ್.

ಅಮೀನ್, ಸುರೇಶ್ ಆರ್. ಅಂಚನ್, ಕೇಶವ್

ಕೆ. ಕೋಟ್ಯಾನ್, ಪುರುಷೋತ್ತಮ್ ಎಸ್.

ಕೋಟ್ಯಾನ್, ರವಿ ಜೆ. ಕೋಟ್ಯಾನ್, ಹರೀಶ್ಚಂದ್ರ

ಜಿ. ಕುಂದರ್, ನಾರಾಯಣ ಟಿ. ಪೂಜಾರಿ, ಜಯ

ವಿ. ಪೂಜಾರಿ, ಕೆ.ಬಿ. ಪೂಜಾರಿ, ರಿತೇಶ್ ಡಿ.

ಪೂಜಾರಿ, ಅನಿಲ್ ಬಿ. ಸಾಲಿಯಾನ್, ರಾಜ ವಿ.

ಸಾಲಿಯಾನ್, ರತ್ನಾಕರ್ ಎನ್. ಸಾಲಿಯಾನ್,

ರವೀಂದ್ರ ಆರ್. ಸುವರ್ಣ, ರೋಹಿತ್ ಎಂ.

ಸುವರ್ಣ, ವಿಜಯ್ ಕುಮಾರ್.

ಮಹಿಳಾ ವಿಭಾಗ ನೀತಾ ಎಂ. ಅಂಚನ್, ಶ್ರೀಮತಿ ಶಾರದಸೂರು ಕರ್ಕೇರ

Leave a Reply

Your email address will not be published. Required fields are marked *