How Bangalore Kambala 2023 set record: Tulu Folk sport draws lakhs ದಾಖಲೆ ಬರೆದ ಬೆಂಗಳೂರು ಕಂಬಳದಲ್ಲಿ ಲಕ್ಷಾಂತರ ಜನರು ಭಾಗಿ

Bangalore Kambala

ರೆBangalore Kambala ಬೆಂಗಳೂರಿನ  ಅರಮನೆ ಮೈದಾನ Palece Groundದಲ್ಲಿ ಬೆಂಗಳೂರು ಕಂಬಳ Bangalore Kambala ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ‘ನಮ್ಮ ಕಂಬಳ’ Bangalore Kambala ಕೂಟದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಬೆಂಗಳೂರು ಕಂಬಳ ಹಲವು ದಾಖಲೆಗಳನ್ನು ಬರೆದಿದೆ.

ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಜನಪ್ರಿಯ ಕಂಬಳ ಕ್ರೀಡೆಯನ್ನು ಬೆಂಗಳೂರಿನಲ್ಲಿ ಅಂತಿಮ ದಿನವಾದ ರವಿವಾರ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಿಂದ ಬಂದ ಲಕ್ಷಾಂತರ ಜನರು ವೀಕ್ಷಣೆ ಮಾಡಿದರು. ಅಲ್ಲದೆ ಆಸ್ಟ್ರೇಲಿಯಾ ಸೇರಿದಂತೆ ನಗರದಲ್ಲಿ ವಾಸಿಸುವ ಹಲವು ವಿದೇಶಿಗರು ಕಂಬಳ ವೀಕ್ಷಿಸಿದ್ದು, ವಿಶೇಷವಾಗಿತ್ತು. ವಿದೇಶಿಗರಿಗೆಂದೇ ವಿಶೇಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ.ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು.ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ.

ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2 ದಿನಗಳ ಕಾಲ ನಡೆದ ರಾಜ ಮಹಾರಾಜ ಜೋಡುಕರೆ ಕಂಬಳದ ಫಲಿತಾಂಶ ಬಂದಿದೆ. ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಸ್ಪರ್ಧಿಸಿವೆ. ಅದರಲ್ಲಿ ಕನೆಹಲಗೆ ವಿಭಾಗದಲ್ಲಿ 7 ಜೊತೆ ಕೋಣಗಳು ಭಾಗವಹಿಸಿದ್ದು ಕಾಂತಾರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೋಣಗಳಾದ “ಅಪ್ಪು- ಕಿಟ್ಟು” ಗೆದ್ದಿರುವುದು ವಿಶೇಷವಾಗಿದೆ.

ಇನ್ನುಳಿದಂತೆ ಅಡ್ಡ ಹಲಗೆಯಲ್ಲಿ 6 ಜೊತೆ, ಹಗ್ಗ ಹಿರಿಯದಲ್ಲಿ 21 ಜೊತೆ, ನೇಗಿಲು ಹಿರಿಯಲ್ಲಿ 32 ಜೊತೆ, ಹಗ್ಗ ಕಿರಿಯದಲ್ಲಿ 31 ಜೊತೆ, ನೇಗಿಲು ಕಿರಿಯದಲ್ಲಿ 62 ಜೊತೆ ಕೋಣಗಳು ಕಂಬಳದ ಕರೆಗಿಳಿದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು. ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಈ ಕಂಬಳ ಮಹೋತ್ಸವ ಕೇವಲ ಕರಾವಳಿ ಭಾಗದ ಮಾತ್ರವಲ್ಲದೆ ಬೆಂಗಳೂರಿನ ಲಕ್ಷಾಂತರ ಮಂದಿಯೂ ನೋಡಿ ಆನಂದಿಸಿದರು. ತಾರಾ ಚಿತ್ರನಟರಾದ ಉಪೇಂದ್ರ, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಚಿತ್ರನಟರು, ಗಣ್ಯರು ಕಂಬಳ ವೀಕ್ಷಿಸಿ ಸಂತಸಪಟ್ಟರು. Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್

Bangalore Kambala result ಫಲಿತಾಂಶ ಹೀಗಿದೆ..

ಕನೆಹಲಗೆ(ನಿಶಾನಿಗೆ ನೀರು ಚಿಮ್ಮಿಸುವ ಹಲಗೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ”

ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )

ಅಡ್ಡ ಹಲಗೆ

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್

ಹಗ್ಗ ಕಿರಿಯ

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ

ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು: ಪಟ್ಟೆ ಗುರು ಚರಣ್

ನೇಗಿಲು ಕಿರಿಯ

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ

ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆಕನೆಹಲಗೆ07 ಜೊತೆಅಡ್ಡಹಲಗೆ: 06 ಜೊತೆಹಗ್ಗ ಹಿರಿಯ 21 ಜೊತೆನೇಗಿಲು ಹಿರಿಯ32 ಜೊತೆಹಗ್ಗ ಕಿರಿಯ 31 ಜೊತೆನೇಗಿಲು ಕಿರಿಯ 62 ಜೊತೆಒಟ್ಟು ಕೋಣಗಳ ಸಂಖ್ಯೆ159 ಜೊತೆ.

Bangalore Kambala ತುಳುನಾಡಿನ ವೈಭವ

ರಾಜ್ಯ ರಾಜಧಾನಿ, ಸಿಲಿಕಾನ್‌ ಸಿಟಿ ಬೆಂಗಳೂರಿನ ಅರಮನೆ ಮೈದಾನ ಅಕ್ಷರಶಃ ತುಳುನಾಡಿನ ವೈಭವಕ್ಕೆ ತೆರೆದುಕೊಂಡಿದೆ. ವಿಭಿನ್ನ ಭಾಷೆ, ಆಹಾರ ಪದ್ಧತಿ, ಸಂಸ್ಕೃತಿಯ ಕರಾವಳಿ ಕರ್ನಾಟಕದ ಹಿರಿಮೆಯನ್ನು ಬೆಂಗಳೂರಿನಲ್ಲಿ ಪ್ರಸ್ತುತಪಡಿಸಿದೆ.

ಸಾಂಪ್ರದಾಯಿಕ ಶೈಲಿಯ ಸ್ವಾಗತ ಗೋಪುರ, ಸಾಂಸ್ಕೃತಿಕ ಕಾರ್ಯಕ್ರಮದ ಮೈದಾನ ಮಧ್ಯದಲ್ಲಿ ಕಂಗೊಳಿಸುವ ಕಂಬಳ ಕೋಣದ ಪ್ರತಿಕೃತಿ, ಎತ್ತಿನ ಬಂಡಿ, ದೈವಾರಾಧನೆಯನ್ನು ಬಿಂಬಿಸುವ ದೈವಸ್ಥಾನ (ಸಾನ), ನಾಗನ ಕಟ್ಟೆ ಸೇರಿದಂತೆ ಹಲವು ವೈವಿಧ್ಯತೆಗಳಿದ್ದು, ಸಿಲಿಕಾನ್‌ ಸಿಟಿ ಜನರಿಗೆ ತುಳುನಾಡಿನ ವೈವಿಧ್ಯತೆಯನ್ನು ಪರಿಚಯಿಸಿತು.

ಬಂಟರ ನೇತೃತ್ವದಲ್ಲಿ ಅಬ್ಬರದ ಬೆಂಗಳೂರು ಕಂಬಳ

ಕಂಬಳ ಪ್ರಧಾನದ ವೇದಿಕೆಯ ಬಲಭಾಗದಲ್ಲಿ ಸುಧಾಕರ ಶೆಟ್ಟಿ ಕಾರ್ಕಳ ಇವರು ಸಂಗ್ರಹಿಸಿದ ತುಳುನಾಡಿನ ಹಳೇ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಒಂದು ಸಾವಿರಕ್ಕೂ ಅಧಿಕ ವಸ್ತುಗಳಿವೆ. ತುಳುನಾಡ ದೈವಾರಾಧನೆಗೆ ಸಂಬಂಧಪಟ್ಟ ಕಡ್ಸಲೆ, ಗಗ್ಗರ, ಸೊಂಟ ಪಟ್ಟಿ, ಪಂಚಲೋಹ ಮೂರ್ತಿ, ಕೈಬಳೆ, ಮೈಕಟ್ಟು, ಪಂಚಲೋಹದ ದೇವರ ಮೂರ್ತಿ ನೂರಾರು ಕಂಚಿನ ದೀಪಗಳು, ಮಣಿ, ಮರದ ಪೆಟ್ಟಿಗೆ, ಹಿತ್ತಾಳೆ ಚೆಂಬುಗಳು, ಕೈಸಟ್ಟಿ, ಸೇರು-ಪಾವು-ಕಳಸೆ, ಗೊರಬು, ಚೆನ್ನಮಣೆ, ಯಕ್ಷಗಾನ ದಿರಿಸು, ಪಲ್ಲಕ್ಕಿ, ಸುತ್ತುಪೌಳಿ ಕಂಬಗಳು, ಗೋದಿಗೆ ಕಂಬಳ, ಮಲ್ಲಕಂಬಗಳು, ನೊಗ, ನೇಗಿಲು, ಹಲಗೆ, ಬೆತ್ತ, ಪಣೆ ಹಗ್ಗ, ಹುಲಿಮುಖಗಳು ಮತ್ತು ದಿರಿಸು, ಮೈವಿಧ್ಯಮಯ ಬುಟ್ಟಿಗಳು ಗಮನಸೆಳೆದವು.

ನಾಗಬನ, ದೈವಸ್ಥಾನ:

ಹಳೇ ಪರಿಕರ ಪ್ರದರ್ಶನ ಮುಂಭಾಗದಲ್ಲೇ ಶಿಲಾಮಯ ನಾಗನ ಕಟ್ಟೆ, ಪಕ್ಕದಲ್ಲೇ ದೈವಸ್ಥಾನ, ದೈವಗಳ ಮೊಗ-ಮೂರ್ತಿ ಮಾದರಿ ಗಮನಸೆಳೆಯುತ್ತಿವೆ. ಕೆಲವರು ತಮ್ಮ ಮಕ್ಕಳ ಜತೆ ದೈವಸ್ಥಾನ (ಸಾನ)ದ ಒಳಗೆ ಹೋಗಿ ಮೊಗ- ಮೂರ್ತಿಗಳಿಗೆ ಕೈ ಮುಗಿದು ಹೊರ ಬರುತ್ತಿರುವ ದೃಶ್ಯ ಕಂಡು ಬರುತ್ತಿತ್ತು. ದೈವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲಎಂದು ಸ್ವಯಂ ಸೇವಕರು ಹೇಳುತ್ತಿದ್ದರೂ ಕೆಲವರು ಕುತೂಹಲ, ಭಯಭಕ್ತಿಯಿಂದ ಪ್ರವೇಶ ಮಾಡುತ್ತಿದ್ದರು.

Bangalore Kambala ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ

ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶನಿವಾರ ಸಂಜೆ ಬೆಂಗಳೂರು ಕಂಬಳ ಸಮಿತಿ ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.

Kambala ಕಂಬಳದ ಬೆತ್ತಗಳಿಗೆ ಭಾರೀ ಬೇಡಿಕೆ

ಬೆಂಗಳೂರಿಗರಿಂದ ಕಂಬಳದ ಬೆತ್ತಗಳಿಗೆ ಭಾರೀ ಬೇಡಿಕೆಯಿತ್ತು. ಕಂಬಳದ ತುಂಬಾ ತುಳುನಾಡಿನ ಸಾಂಪ್ರದಾಯಿಕ ಉಡುಪಾದ ಪಂಚೆ, ಟವೆಲ್ಲನ್ನು ತಲೆಗೆ ಪೇಟವಾಗಿ ಸುತ್ತಿಕೊಂಡು ಅದರೊಟ್ಟಿಗೆ ಒಂದು ಬೆತ್ತದ ಅಲಂಕಾರಿಕ ಬೆತ್ತವನ್ನು ಹಿಡಿದು ಸಾಗುತ್ತಿದ್ದ ದೃಶ್ಯ ಗಮನಸೆಳೆಯುತ್ತಿತ್ತು.

Bangalore Kambala
Bangalore Kambala

ಕರಾವಳಿ ಭಾಗದಲ್ಲಿ ಕೋಣಗಳ ಸಾಕಾಣಿಕೆಗೆ ಬೇಕಾದ ಪರಿಕರಗಳ ಮಾರಾಟ ಮಳಿಗೆಗಳು ಹಾಗೂ ಇತರೆ ಮಳಿಗೆಗಳಲ್ಲಿ ಬೆತ್ತಗಳನ್ನು ಮಾರಲಾಗುತ್ತಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರು ತಮ್ಮ ಮನೆಯಲ್ಲಿ ಒಂದು ಬೆತ್ತ ಇಟ್ಟುಕೊಳ್ಳಬೇಕು ಎಂದು ನಾಗರ ಬೆತ್ತವನ್ನು ಖರೀದಿಸುತ್ತಿದ್ದರು. ಮತ್ತೆ ಕೆಲವರು ತುಳುನಾಡಿನ ಕುಟುಂಬ ನಮ್ಮದು. ನಮ್ಮ ಮನೆಗೆ ಬೆತ್ತವೊಂದು ಬೇಕು ಎಂದು ವಿಚಾರಿಸಿ ಖರೀದಿಸುತ್ತಿದ್ದರು.

ಈ ಬೆತ್ತಗಳು 800 ರೂ.ನಿಂದ 2ಸಾವಿರ ರೂ.ವರೆಗೆ ಮಾರಾಟವಾದವು. ಅಷ್ಟು ಮಾತ್ರವಲ್ಲ ಕೋಣಗಳನ್ನು ಓಡಿಸುವವರೆಗೆ ನಾನಾ ಸ್ಪರ್ಧೆಗಳಲ್ಲಿ ಚಿನ್ನವನ್ನು ಬಹುಮಾನವಾಗಿ ನೀಡಲಾಗಿತ್ತು. ಈ ಚಿನ್ನವನ್ನು ಬೆತ್ತದ ಹಿಡಿಪಟ್ಟಿಯಾಗಿ ಬಳಸುವುದರ, ಜತೆಗೆ ಬೆಳ್ಳಿಯ ಹಿಡಿಪಟ್ಟಿಗಳುಳ್ಳ ಬೆತ್ತಗಳು ಕೂಡ ವಿಶೇಷವಾಗಿದ್ದವು. ಆದರೆ, ಚಿನ್ನ, ಬೆಳ್ಳಿ ಹಿಡಿಪಟ್ಟಿಯ ಬೆತ್ತಗಳನ್ನು ಬೆಂಗಳೂರು ಕಂಬಳದಲ್ಲಿ ಮಾರಾಟ ಮಾಡುತ್ತಿರಲಿಲ್ಲ. ದಾರದ ಹಿಡಿಯುಳ್ಳ ಬೆತ್ತಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಕೋಣ ಓಡಿಸುವವರು ಸ್ಟಾರ್‌ ಗಳು: ಸಿನಿಮಾದಲ್ಲಿ ಹೀರೋಗಳು ಡಯೆಟ್ ಮಾಡುತ್ತಾರೆ. ಹತ್ತಾರು ವರ್ಷಗಳ ಕಾಲ ಅವರು ಯೌವ್ವನವಾಗಿ ಕಾಣುತ್ತಾರೆ. ಅದಕ್ಕೆ ಸಾಕಷ್ಟು ಶ್ರಮ ಪಡುತ್ತಾರೆ. ಕಂಬಳ ಕರೆಯಲ್ಲಿ ಓಡುವವರು ನಟರಿಗೆ ಒಂದು ಕೈ ಮೇಲು. ನಾವು ಕೂಡ ನಿತ್ಯ ವಾಕಿಂಗ್ ಮಾಡುತ್ತೇವೆ. ಕಂಬಳದ ಸಮಯದಲ್ಲಿ ಮಾಂಸಾಹಾರ ತ್ಯಜಿಸುತ್ತೇವೆ. ಊಟ, ತಿಂಡಿಗಳನ್ನು ಲೆಕ್ಕಾಚಾರದಲ್ಲಿ ತಿನ್ನುತ್ತೇವೆ.

ದೇಹ ತೂಕ ಮತ್ತು ಆರೋಗ್ಯ ಸಮತೋಲನದಲ್ಲಿಟ್ಟುಕೊಳ್ಳಲು ಸಾಕಷ್ಟು ಶ್ರಮಿಸುತ್ತೇವೆ. ಹೀಗಾಗಿಯೇ ಹಗ್ಗದ ಓಟ, ನೇಗಿಲು ಓಟ, ಅಡ್ಡ ಹಲಗೆ ಓಟ, ಕೆನೆ ಹಲಗೆ ಓಟಗಳಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಸಾಧ್ಯವಾಗುವುದು. ಇದಕ್ಕಾಗಿ ನಾವು ಪ್ರಾಣವನ್ನು ಪಣಕ್ಕಿಡಬೇಕಾದ ಸಂದರ್ಭಗಳೂ ಇರುತ್ತವೆ ಎಂದು ತಡಂದಲೆ ಮೂಡಾಯಿಬೆಟ್ಟು ತಂಡದ ವಿಶ್ವನಾಥ್ ಹೇಳುತ್ತಾರೆ.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜನೆಯಾಗಿದ್ದು, ಕರಾವಳಿ ಭಾಗದ ಈ ಗ್ರಾಮೀಣ ಕ್ರೀಡೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಕರಾವಳಿಗರೂ ಸೇರಿ ಲಕ್ಷಾಂತರ ಮಂದಿ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಾಣವಾದ ಕಂಬಳ ಗದ್ದೆಯ ನೋಟ ಹೀಗಿದೆ.ಬೆಂಗಳೂರು ಕಂಬಳದಲ್ಲಿ ಕೋಣಗಳ ಓಟ ಮಾತ್ರವಲ್ಲ ಕರಾವಳಿ ಸಂಸ್ಕೃತಿಯೂ ಅನಾವರಣಗೊಂಡಿತ್ತು. ಕರಾವಳಿಯ ಸಂಸ್ಕೃತಿ, ಪರಂಪರೆ ಬಿಂಬಿಸುವ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಯಕ್ಷಗಾನ, ಹುಲಿವೇಷ ಸೇರಿದಂತೆ ಕರಾವಳಿ ಭಾಗದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

Leave a Reply

Your email address will not be published. Required fields are marked *