Back stabbing ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ ಡಿ.ಕೆ. ಶಿವಕುಮಾರ್ ಇರಬಹುದೇ?

Back stabbing ಅಹಿಂದ ವರ್ಗದ ಧೀಮಂತ ಮುಖಂಡ ಬಿ.ಕೆ.ಹರಿಪ್ರಸಾದ್ (B.K.Hariprasad) ಬೆನ್ನಿಗೆ ಚೂರಿ (Back stabbing) ಹಾಕಿದ ಸ್ನೇಹಿತ ಸಿದ್ದರಾಮಯ್ಯರ ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ (D.K.Shivakumar) ಎಂಬುದನ್ನು ಉಪಮುಖ್ಯಮಂತ್ರಿಯವರೇ(DCM) ಸಾಬೀತುಮಾಡಿದ್ದಾರೆ.

ಇಂದು ಡಿಸೆಂಬರ್ 10ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾದ ಸಿದ್ದರಾಮಯ್ಯ ಕೃಪಾಪೋಷಿತ ತಿಮ್ಮೇಗೌಡರ ಈಡಿಗ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ ಮುಖಂಡ ಬಿ.ಕೆ.ಹರಿಪ್ರಸಾದ್ (B.K.Hariprasad) ಬೆನ್ನಿಗೆ ಚೂರಿ (Back stabbing) ಹಾಕಿದ ಸ್ನೇಹಿತ ತಾನೇ ಎಂದು ಸಾಬೀತು ಮಾಡಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ  ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿದ ಸ್ನೆಹಿತರೇ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿಕೆ ನೀಡಿದ್ದರು. ನಾಲ್ಕು ದಶಕಗಳ ರಾಜಕೀಯದಲ್ಲಿ ತನಗೆ ವಿರೋದ ಪಕ್ಷಗಳಿಂದಾಗಲಿ ಇಡಿ, ಐಟಿಯಿಂದಾಗಲಿ ತೊಂದರೆ ಆಗಲಿಲ್ಲ. ಆದರೆ, ಸ್ನೇಹಿತರಾದವರೇ ಬೆನ್ನಿಗೆ ಚೂರಿ ಹಾಕಿದಾಗ ಸಹಿಸಲು ಕಷ್ಟ ಆಗುತ್ತದೆ ಎಂದಿದ್ದರು.

ಸದನದ ಹೊರಗೆ ಕೂಡಹೇಳಿಕೆ ನೀಡಿದ ಹರಿಪ್ರಸಾದ್ ಬೆನ್ನಿಗೆ ಚೂರಿಗೆ ಹಾಕುವ ಸಂಸ್ಕೃತಿ ರಾಜಕೀಯದಲ್ಲಿ ಈಗಲೂ ಇದೆ ಎಂದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮೇರೆಗೆ ಲಿಕ್ಕರ್ ಲಾಬಿಯ ತಿಮ್ಮೇಗೌಡ, ಹಾಲಿ ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವ ವಿನಯ ಕುಮಾರ ಸೊರಕೆ ಅವರು ಸೇರಿಕೊಂಡು ಮುಖಂಡ ಬಿ.ಕೆ.ಹರಿಪ್ರಸಾದ್ ಅರ ವಿರುದ್ಧವಾಗಿ ಆಯೋಜಿಸಲಾದ ಈಡಿಗ ಸಮಾವೇಶದಲ್ಲಿ  ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದಾರೆ.

ಹಿಂದುಳಿದ ವರ್ಗದಲ್ಲಿ ಕುರುಬರ ಅನಂತರ ಪ್ರಬಲ ಸಮುದಾಯವಾದ ಈಡಿಗ, ಬಿಲ್ಲವ, ನಾಮಧಾರಿ ಸಮುದಾಯವನ್ನು ಒಡೆದು ರಾಜಕೀಯ ಮಾಡಲು  ಸಿದ್ದರಾಮಯ್ಯ ಆಯೋಜಿಸಿದ ರಾಜಕೀಯ ಕುತಂತ್ರದ ಈಡಿಗ ಸಮಾವೇಶದಲ್ಲಿ ಭಾಗವಹಿಸಿ ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ ಅವರು ತಮ್ಮ  ರಾಜಕೀಯವನ್ನು ಬಹಿರಂಗಗೊಳಿಸಿದ್ದಾರೆ.

 

 

Leave a Reply

Your email address will not be published. Required fields are marked *