B.K.Hariprasad: ಸೊರಕೆ ಹೊಸ ಹರಕೆಯ ಕುರಿಃ ಹರಿಪ್ರಸಾದರನ್ನು ಮೂಲೆಗುಂಪು ಮಾಡಲು ಸಾಧ್ಯವೇ ?

ವಿಶೇಷ ವರದಿ

ಮಂಗಳೂರುಃ  ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯೋಗದ ನಂತರ ಇದೀಗ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಹಿರಿಯ ಕಾಂಗ್ರೆಸ್ ಮುಖಂಡ ಹಿಂದುಳಿದ ವರ್ಗಗಳ ನೇತಾರ ಬಿ.ಕೆ. ಹರಿಪ್ರಸಾದ್ ಅವರಿಗೆ ವಿರುದ್ಧವಾಗಿ ಪಕ್ಷದಲ್ಲಿ ಬೆಳೆಸುವ ಯತ್ನಗಳು ನಡೆದಿವೆ ಎಂದು ಆಂಗ್ಲ  ಮಾಧ್ಯಮಗಳು ವರದಿ ಮಾಡಿವೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವರ ಹೆಸರನ್ನು ಪಕ್ಷದ ಹೈಕಮಾಂಡಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಬಿಲ್ಲವ (ಈಡಿಗ) ಸಮುದಾಯಕ್ಕೆ ಸೇರಿದ ಉಡುಪಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸೋತಿರುವ ವಿನಯ ಕುಮಾರ ಸೊರಕೆ ಅವರ ಹೆಸರು ಪ್ರಮುಖವಾಗಿದೆ.

ಕೆಪಿಸಿ ಕಾರ್ಯಾಧ್ಯಕ್ಷರ ಹುದ್ದೆಗಳಲ್ಲಿ ಬದಲಾವಣೆ ಮಾಡಲು ಉದ್ದೇಶಿಸಲಾಗಿದ್ದು, ರಾಮಲಿಂಗ ರೆಡ್ಡಿ ಸೇರಿದಂತೆಕೆಲವರು ಸಚಿವರಾಗಿದ್ದು, ಇನ್ನಿತರರು ಇತರ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದ್ದಾರೆ. ಕೆಲವು ಸಚಿವರನ್ನು ಮುಂಬರುವ ಲೋಕಸಭಾ ಚುನವಾಣೆಯಲ್ಲಿ ಕಣಕ್ಕಳಿಸುವ ಲೆಕ್ಕಚಾರವನ್ನು ಕಾಂಗ್ರೆಸ್ ಹೊಂದಿದೆ.

ಕೆಪಿಸಿಸ ಕಾರ್ಯಾಧ್ಯಕ್ಷರಾಗಿರುವ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಮತ್ತು ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಬದಲಿಗೆ ಹೊಸಬರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಲೆಕ್ಕಚಾರದಲ್ಲಿ ಕಾಂಗ್ರೆಸ್ ನಾಯಕತ್ವ ಇದೆ. ಮಂಬರುವ ಲೋಕಸಭಾ ಚುನವಾಣೆಯಲ್ಲಿ ಇವರಿಬ್ಬರು ಅನುಕ್ರಮವಾಗಿ ಚಿತ್ರದುರ್ಗ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ರರ್ಧಿಸುವ ಸಾಧ್ಯತೆ ಇದೆ. ಹೀಗೆ ಖಾಲಿ ಆಗುವ ಕಾರ್ಯಾಧ್ಯಕ್ಷ ಹುದ್ದೆಗೆ ವಿನಯ ಕುಮಾರ್ ಸೊರಕೆ ಅವರನ್ನು ನೇಮಕ ಮಾಡಬೇಕೆಂಬ ಶಿಫಾರಸು ಮಾಡಲಾಗಿದೆ.

2013ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಅವರನ್ನು ಸಕಾರಣಗಳನ್ನು ನೀಡದೆ ಸಂಪುಟದಿಂದ ಕೈಬಿಟ್ಟು, ಉಡುಪಿಯ ಶ್ರೀಮಂತ ಕುಳ ಪ್ರಮೋದ್ ಮಧ್ವ ರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಹಿಂದೆಏಐಸಿಸಿ ಕಾರ್ಯದರ್ಶಿಯೂ ಆಗಿದ್ದ ವಿನಯಕುಮಾರ್ ಸೊರಕೆ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಲ್ಲ ಬೆಂಜ್ ಕಾರು ಸ್ನೇಹಿತರಂತೆ ಪ್ರಮೋದ್ ಮಧ್ವರಾಜ್ ಕೂಡ ಭಾರತೀಯ ಜನತಾಪಾರ್ಟಿ ಸೇರಿಕೊಂಡರು.

ಕರಾವಳಿಯ ಒಬ್ಬರನ್ನು ಕಾರ್ಯಾಧ್ಯಕ್ಷ ಮಾಡಬೇಕಿತ್ತು. ವಿಧಾನಸಭಾ ಚುನವಾಣೆಗ ಮೊದಲೇ ಮಾಡಬಹುದಿತ್ತು ಅನಂತರ ಕೂಡ ಮಾಡಬಹುದಿತ್ತು. ಕರಾವಳಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ರಾಗಲು ತುದಿಗಾಗಲಲ್ಲಿ ನಿಂತವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಮಾಜಿ ಸಚಿವ ಬಿ.ರಮಾನಾಥ ರೈ ಯವರು. ಸಿದ್ದರಾಮಯ್ಯ ಅವರು ರಮಾನಾಥ ರೈ ಅವರನ್ನು ಮೂಲೆಗುಂಪು ಮಾಡಿ ವಿನಯ ಕುಮಾರ ಸೊರಕೆ ಅವರನ್ನು ಕಾರ್ಯಧ್ಯಕ್ಷ ಮಾಡಲು ಹೊರಟಿರುವುದು ಸ್ವಾಗತಾರ್ಹ ವಿಚಾರವೇ ಆದ್ರೆ ಮುಹೂರ್ತ ಮಾತ್ರ ಸರಿಯಾಗಿ ಕೂಡ ಬರುತ್ತಿಲ್ಲ ಎನ್ನುತ್ತಾರೆ ರಾಜಕೀಯ ಪಂಡಿತರು.

ನಾಲ್ಕುದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವವವರು ಬಿ.ಕೆ.ಹರಿಪ್ರಸಾದ್. ದೇಶದಾದ್ಯಂತ ಓಡಾಡಿ ಪಕ್ಷದ ಕೆಲಸ ಮಾಡಿದವರು. ಮಾಜಿ ಸಚಿವ ವಿನಯ ಕುಮಾರ ಸೊರಕೆಯವರು ಉಡುಪಿಯಿಂದ ಮಂಗಳೂರಿಗೆ ಭೇಟಿ ನೀಡಬೇಕಾದರೆ ಮಲ್ಲಿಕಟ್ಟೆ ಬ್ಲಾಕ್ ಅಧ್ಯಕ್ಷರ ಅನುಮತಿ ಕೇಳಬೇಕಾಗುತ್ತದೆ.

 

Leave a Reply

Your email address will not be published. Required fields are marked *