Ayushman 40 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ ಗಳ ವಿತರಣೆ

Ayushman ಭಾರತದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮ, ‘ಆಯುಷ್ಮಾನ್ ಭವ’ (Ayushman) ಅಭಿಯಾನವಾಗಿದ್ದು, ಇದುವರೆಗೆ 40 ಲಕ್ಷ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗಿದೆ.

ಆಯುಷ್ಮಾನ್ ಭವ ಪೋರ್ಟಲ್ (Ayushman portal) ಅನ್ನು  ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವರ್ಚುವಲ್ ರೂಪದಲ್ಲಿ 2023ರ ಸೆಪ್ಟೆಂಬರ್  13 ರಂದು ಗುಜರಾತ್‌ನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದರು.

ಆಯುಷ್ಮಾನ್ ಕಾರ್ಡ್‌ಗಳ ಲಭ್ಯತೆಯನ್ನು ಸುಲಭಗೊಳಿಸಲು, ಅಭಾ ಐಡಿಗಳನ್ನು ಸೃಷ್ಟಿಸಲು ಮತ್ತು ಪ್ರಮುಖ ಆರೋಗ್ಯ ಯೋಜನೆಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳಾದ ಕ್ಷಯರೋಗ ಮತ್ತು ಸಿಕಲ್ ಸೆಲ್ ನಂತಹ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು 2023ರ ಸೆಪ್ಟಂಬರ್ 17 ರಿಂದ ದೇಶದ ವಿವಿಧ ಭಾಗಗಳಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 2023. ಈ ಆರೋಗ್ಯ ಶಿಬಿರಗಳನ್ನು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದ್ದು, ಅವು ಜನರಿಗೆ ಜಾಗೃತಿ ಮೂಡಿಸಲು ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿವೆ.

2023ರ ಡಿಸೆಂಬರ್ 04 ರಿಂದ 2023ರ  ಡಿಸೆಂಬರ್ 10 ರವರೆಗಿನ ಈ ವಾರದಲ್ಲಿ, 73,963 ಆಯುಷ್ಮಾನ್ ಆರೋಗ್ಯ ಮಂದಿರ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ ಮತ್ತು 2023ರ ಸೆಪ್ಟಂಬರ್ 17ರಂದು ಈ ಅಭಿಯಾನದ ಆರಂಭವಾದಾಗಿನಿಂದ ಒಟ್ಟು 11,48,855 ಆಯುಷ್ಮಾನ್ ಆರೋಗ್ಯ ಮಂದಿರ ಆರೋಗ್ಯ ಮೇಳಗಳು ವರದಿಯಾಗಿವೆ.

Bharat Jodo Yatra: ಡಿಸಂಬರಿನಲ್ಲಿ 2 ನೇ ಹಂತದ ಭಾರತ್​ ಜೋಡೋ ಯಾತ್ರೆ

ಈ ಆರೋಗ್ಯ ಮೇಳಗಳು 8,25,14,633 ಜನರು ಭೇಟಿ ನೀಡಿದ್ದಾರೆ, ಆದರೆ 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 58,85,737 ಜನರು ಈ ಮೇಳಗಳಲ್ಲಿ ಭಾಗವಹಿಸಿದ್ದಾರೆ. 2023ರ ಸೆಪ್ಟಂಬರ್ 17 ರಿಂದೀಚೆಗೆ, ಸುಮಾರು 16 ಕೋಟಿ (16,03,17,875) ಜನರು ಕ್ಷಯರೋಗ, ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಮತ್ತು ಕ್ಯಾಟರಾಕ್ಟ್‌ ಸೇರಿ ಏಳು ಬಗೆಯ ರೋಗಗಳ ತಪಾಸಣೆಗೆ ಒಳಗಾಗಿದ್ದಾರೆ. 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 1,12,87,779 ಜನರು ಏಳು ರೋಗಗಳ ಉಚಿತ ತಪಾಸಣೆAಗೆ ಒಳಗಾಗಿದ್ದಾರೆ

ಸುಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್ ಸಿಗಳ) ಅಡಿಯಲ್ಲಿ ಈವರೆಗೆ 32,792 ಆರೋಗ್ಯ ಮೇಳಗಳನ್ನು ನಡೆಸಲಾಗಿದ್ದು, ಈವರೆಗೆ ಒಟ್ಟು 1,30,39,084 ಜನರು ನೋಂದಾಯಿಸಿಕೊಂಡಿದ್ದಾರೆ. 2023ರ ಸೆಪ್ಟಂಬರ್ 17 ರಿಂದೀಚೆಗೆ, ಸುಮಾರು 16 ಕೋಟಿ (16,03,17,875) ಜನರು ಕ್ಷಯರೋಗ, ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಮತ್ತು ಕ್ಯಾಟರಾಕ್ಟ್‌ ಸೇರಿ ಏಳು ಬಗೆಯ ರೋಗಗಳ ತಪಾಸಣೆಗೆ ಒಳಗಾಗಿದ್ದಾರೆ. 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 1,12,87,779 ಜನರು ಏಳು ರೋಗಗಳ ಉಚಿತ ತಪಾಸಣೆಗೆ ಒಳಗಾಗಿದ್ದಾರೆ.

ಸುಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್ ಸಿಗಳ) ಅಡಿಯಲ್ಲಿ ಈವರೆಗೆ 32,792 ಆರೋಗ್ಯ ಮೇಳಗಳನ್ನು ನಡೆಸಲಾಗಿದ್ದು, ಈವರೆಗೆ ಒಟ್ಟು 1,30,39,084 ಜನರು ನೋಂದಾಯಿಸಿಕೊಂಡಿದ್ದಾರೆ.

ಈವರೆಗೆ ಒಟ್ಟು 34,49,204 ಆಯುಷ್ಮಾನ್ ಕಾರ್ಡ ಗಳನ್ನು ಸೃಷ್ಟಿಸಲಾಗಿದೆ ಮತ್ತು 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 27,023 ಕಾರ್ಡ್ ಗಳನ್ನು ಸೃಷ್ಟಿಸಲಾಗಿದೆ. ಅಭಾ (ಆರೋಗ್ಯ ಐಡಿ) ಕಾರ್ಡ್ ಗಳ ಸೃಷ್ಟಿ ಒಟ್ಟಾರೆ 40,81,135 ಕಾರ್ಡ್ ವಿತರಣೆ ಮಾಡಲಾಗಿದೆ.

“ಆಯುಷ್ಮಾನ್ ಭವ’ ಉಪಕ್ರಮವು ಪ್ರತಿ ಗ್ರಾಮ/ಪಟ್ಟಣದಲ್ಲಿ ಗರಿಷ್ಠ ಎಲ್ಲಾ ಆರೋಗ್ಯ ಸೇವೆಗಳನ್ನು ಪೂರೈಸಲು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳ ಲಭ್ಯತೆಯನ್ನು ಒದಗಿಸಲು ಯೋಜಿಸಲಾಗಿದೆ. ‘ಆಯುಷ್ಮಾನ್ ಭವ’ ಉಪಕ್ರಮವು ‘ಆಯುಷ್ಮಾನ್ – ಆಪ್ಕೆ ದ್ವಾರ 3.0’, ‘ಆಯುಷ್ಮಾನ್ ಸಭಾಗಳು’, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ  ಆಯುಷ್ಮಾನ್ ಮೇಳಗಳು- ಮತ್ತು ವೈದ್ಯಕೀಯ ಕಾಲೇಜುಗಳು, ಸಿಎಚ್ ಸಿಗಳಲ್ಲಿ ವೈದ್ಯಕೀಯ ಶಿಬಿರಗಳು ಮತ್ತು ಅಂತಿಮವಾಗಿ ಗ್ರಾಮ/ನಗರ ಪಂಚಾಯ್ತಿ ಅಥವಾ ನಗರ ವಾರ್ಡ್ ಗಳು ‘ಆಯುಷ್ಮಾನ್ ಪಂಚಾಯತ್’ ಸ್ಥಾನಮಾನ ಹೊಂದುವುದು ಅಥವಾ ಗರಿಷ್ಠ ಸೇವೆಗಳನ್ನು ನೀಡಿ ‘ಆಯುಷ್ಮಾನ್ ನಗರ ವಾರ್ಡ್’ ಸ್ಥಾನಮಾನ ಪಡೆಯುವುದು ಸೇರಿದೆ.

AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

Leave a Reply

Your email address will not be published. Required fields are marked *