Ayodhya ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಿಸಲಿದೆ ಕಾಂಗ್ರೆಸ್ ಸರಕಾರ

Ayodhya Guest House ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಆಗುತ್ತಿರುವಂತೆಯೇ ಕಾಂಗ್ರೆಸ್ ಆಡಳಿತ ಕರ್ನಾಟಕ ರಾಜ್ಯದ ಎಲ್ಲ ರಾಮನ ದೇವಸ್ಥಾನಕ್ಕೆ Ram Mandir ಮುಂದಾಗಿದೆ ಮಾತ್ರವಲ್ಲದೆ, ಅಯೋಧ್ಯೆಯಲ್ಲಿ  ಕರ್ನಾಟಕ ಸರಕಾರದ ವತಿಯಿಂದ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅತಿಥಿಗೃಹ Guest House ನಿರ್ಮಾಣಕ್ಕೆ ಮುಂದಾಗಿದೆ.

ಉತ್ತರ ಪ್ರದೇಶ ಸರಕಾರ ಜಮೀನು ನೀಡಿದರೆ ಮಾತ್ರ ಈ ಅತಿಥಿಗೃಹ ನಿರ್ಮಾಣ ಆಗಬಹುದು. ಈ ಬಗ್ಗೆ ಸರಕಾರ ಪ್ರಸ್ತಾವನೆ ಸಿದ್ದಪಡಿಸಿದೆ.ಮುಂಬರುವ ಆಯವ್ಯಯದಲ್ಲಿ ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ಮುಜರಾಯಿ ಇಲಾಖೆಯ ಮೂಲಕ ಮಠ ಮಂದಿರಗಳಿಗೆ ಸಹಾಯ ಅನುದಾನ, ದೇವಸ್ಥಾನಗಳ  ಅಭಿವೃದ್ಧಿಗೆ ಅನುದಾನ ಮೀಸಲಿಡಲು ಸರಕಾರದ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ. ಫೆಬ್ರುವರಿ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಜೆಟ್ ಮಂಡಿಸಿದಾಗ ಹಿಂದೂ ಆಸ್ತಿಕರನ್ನು ಓಲೈಸುವ ಹೊಸ ಯೋಜನೆಗಳ ಘೋಷಣೆ ಆಗಲಿದೆ.

ಅಂಜನಾದ್ರಿ, ಮೈಸೂರು ಜಿಲ್ಲೆ ನಂಜನಗೂಡು ನಂಜುಂಡೇಶ್ವರ, ಕೊಪ್ಪಳ ಜಿಲ್ಲೆ ಹುಲಿಗೆಮ್ಮ, ಮೈಲಾರ ಲಿಂಗ ಸೇರಿ ಇತರ ಪ್ರಮುಖ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಈಗಾಗಲೇ ಮುಜರಾಯಿ ಸಚಿವರು ಹೇಳಿದ್ದರು. ರಾಜ್ಯದ ಪ್ರಮುಖ ದೇವಾಲಯಗಳ ಅಭಿವೃದ್ಧಿಗೆ ಯೋಚಿಸಲಾಗಿದ್ದು ಚಾಮುಂಡಿ ಬೆಟ್ಟ, ಸವದತ್ತಿ ಯಲ್ಲಮ್ಮ, ಅಂಜನಾದ್ರಿ, ಹುಲಿಗೆಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ‌ ಅಧಿಕೃತ ಘೋಷಣೆ ಆಗಲಿದ್ದು, ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲು ಸರಕಾರ ಸಿದ್ಧತೆ ನಡೆಸಿರುವುದು ಮಾಹಿತಿ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ 2024-25ನೇ ವರ್ಷ ಆಯವ್ಯಯ ಪೂರ್ವ ಸಿದ್ದತಾ ಸಭೆಗಳನ್ನು ನಡೆಸುತ್ತಿದ್ದು, ಈಗಾಗಲೇ ಹಲವು ಇಲಾಖೆಗಳ ಒಂದು ಸುತ್ತಿನ ಸಭೆ ಮುಕ್ತಾಯಗೊಂಡಿದೆ. ಮುಜರಾಯಿ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆಗ ಸಂಬಂಧಿಸಿದಂತೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯದ ಪುರಾತನ ಮತ್ತು ಜನಾಕರ್ಷಣೆಯ ಹಿಂದೂ ದೇವಲಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಸಿದ್ಧಪಡಿಸಲು ಸೂಚನೆ ನೀಡಿದ್ದರು.

ಆನ್ ಲೈನ್ ಕಂಪೆನಿಗೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಪರಿಹಾರ ಕೋರ್ಟ್

ಕಾಂಗ್ರೆಸ್ ಸರಕಾರದ ಈಗಿನಪ್ರಸ್ತಾವನೆ ಪ್ರಕಾರ ತಲಾ ಒಂದು ಕೋಟಿ ಯಂತೆ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ರಾಮಮಂದಿರಗಳ ಅಭಿವೃದ್ಧಿ ಮಾಡಲು ಯೋಜನೆ ತಯಾರಿಸಲಾಗುತ್ತಿದೆ.

ಶ್ರೀರಾಮ ಜನ್ಮಭೂಮಿ ಹೋರಾಟ ಅಭಿಯಾನದ ಮೂಲಕ ಭಾರತೀಯ ಜನತಾ ಪಾರ್ಟಿ ಕೇರಳ, ತಮಿಳುನಾಡು ರಾಜ್ಯಗಳನ್ನು ಹೊರತುಪಡಿಸಿ ದೇಶದಾದ್ಯಂತ ದೊಡ್ಡ ಪ್ರಮಾಣದ ಜನ ಬೆಂಬಲ ಪಡೆದಿರುವುದು ಈಗ ಇತಿಹಾಸ. ವಿಶ್ವ ಹಿಂದೂ ಪರಿಷತ್ ಆರಂಭಿಸಿದ ಭಿಯಾನವನ್ನು ಅನಂತರ ಭಾರತೀಯ ಜನತಾ ಪಾರ್ಟಿ ತನ್ನ ಅಜೆಂಡವಾಗಿ ಮಾಡಿಕೊಂಡಿತ್ತು. ಇದರಿಂದ ಬಿಜೆಪಿಗೆ ರಾಜಕೀಯ ಲಾಭವೂ ಆಗಿತ್ತು, ಹಲವು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಾಯ್ತು. ಅಂತಹ ರಾಜ್ಯಗಳಲ್ಲಿ ಒಂದು ಕರ್ನಾಟಕ.

ಕರ್ನಾಟಕ ರಾಜ್ಯದಲ್ಲಿ  ಬಿಜೆಪಿ ಮುಖಂಡ ಯಡ್ಯೂರಪ್ಪ ಅವರ ಪ್ರಭಾವ ಮತ್ತವರ ಲಿಂಗಾಯಿತ ಸಮುದಾಯದ ಬೆಂಬಲವು ರಾಜ್ಯದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಸಹಾಯ ಮಾಡಿತ್ತು.

ಬಿಜೆಪಿ ಹಿಂದೂ ಓಟ್ ಬ್ಯಾಂಕನ್ನು ಗಟ್ಟಿಗೊಳಿಸುತ್ತಾ ಬರುತ್ತಿದ್ದರೆ ಕಾಂಗ್ರೆಸ್ ಗೊಂದಲದ ಗೂಡಾಗಿ ಉಳಿಯಿತು. ರಾಹುಲ್ ಗಾಂಧಿ ಜನಿವಾರ ಧರಿಸಿ ದೇವಸ್ಥಾನ ಭೇಟಿ ನೀಡಿದಾಗ ಎಡಬಿಡಂಗಿ ಪ್ರಗತಿಪರರು ಕಾಂಗ್ರೆಸ್ ಪಕ್ಷವನ್ನು ಸಾಫ್ಟ್ ಹಿಂದೂತ್ವ ಎಂದು ದೂಷಿಸುವ ಮೂಲಕ ಕಾಂಗ್ರೆಸ್ ಪಕ್ಷ ಇನ್ನಷ್ಟು ಧೂಳೀಪಟ ಆಗುವಂತೆ ಮಾಡಿದರು.

ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿದ ಸೀತಾರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಜನವರಿ 22ರಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದರು. ಅದಕ್ಕು ನಮ್ಮೂರಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಆಗಾಗ ಹೇಳುತ್ತಿರುತ್ತಾರೆ.

ಈಗೀಗ ಸಿದ್ದರಾಮಯ್ಯನವರ ಭಾಷಣದ ಧಾಟಿ ಬದಲಾಗಿದೆ. ಬೆಂಗಳೂರು ಗಾಂಧಿ ಭವನದಲ್ಲಿ ಇತ್ತೀಚೆಗೆ ಕನ್ನಡ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾನು ದೇವರಿಲ್ಲವೆಂದು ಹೇಳಲ್ಲ. ಕಾಯಕ ಮಾಡುವಲ್ಲಿ, ಸತ್ಯ ನುಡಿಯುವಲ್ಲಿ ದೇವರನ್ನು ಕಾಣಬೇಕಿದೆ. ನಾವು ಮಾಡುವುದೆಲ್ಲವನ್ನೂ ದೇವರು ನೋಡುತ್ತಿರುತ್ತಾನೆ. ಆದ್ದೆರಿಂದ ಸುಳ್ಳು ಹೇಳಬಾರದು, ಸತ್ಯವೇ ದೇವರು. ಸತ್ಯವೇ ಸ್ವರ್ಗ,ಮಿಥ್ಯವೇ ನರಕ. ಸ್ವರ್ಗ ನರಕಗಳೆಲ್ಲವೂ ಇಲ್ಲೇ ಇವೆ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.

ಮುಂದಿನ ಬಜೆಟಿನಲ್ಲಿ ಕಾಶಿ ಯಾತ್ರೆ, ಚಾರ್ ಧಾಮ್ ಯಾತ್ರೆ. ಮಾನಸ ಸರೋವರ ಯಾತ್ರೆ , ಭಾರತ್ ಗೌರವ್ ಯಾತ್ರೆಗಳ ಅನುದಾನದಲ್ಲಿ ಹೆಚ್ಚಳ ಆಗಲಿದೆ.

ಕಳೆದ ಆಯವ್ಯಯದಲ್ಲಿ ಕೂಡ ಎರಡು ಹಿಂದೂ ದೇವಾಲಯಗಳ ಅಭಿವೃದ್ಧಿ ಅನುದಾನ ನೀಡಿದ್ದ, ಸಿದ್ದರಾಮಯ್ಯನವರು ತಮ್ಮ ಹಿಂದಿನ ನಾಸ್ತಿಕ ಸಿದ್ಧಾಂತವನ್ನು ಬದಿಗಿಟ್ಟು ಪೂರ್ಣ ಪ್ರಮಾಣದ ಆಸ್ತಿಕನಾಗಿ ಕಾಣಿಸಿಕೊಳ್ಳುತ್ತಿದ್ದು, ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮದೆ ಆದ ಹಿಂದೂ ಪರ ಅಜೆಂಡ ಜಾರಿ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣವೇ ಬಿಜೆಪಿಯ ಪ್ರಚಾರದ ಕೇಂದ್ರ ಬಿಂದು ಆಗಿರುವುದರಿಂದ ಸಿದ್ದರಾಮಯ್ಯ ಸರಕಾರ ಹೊಸ ವೇಷ ತೊಡಲಿದೆ.

Sangolli-Rayanna ಕುರುಬ  ಎನ್ನದೆ ರಾಯಣ್ಣನ ದೇಶಪ್ರೇಮಕ್ಕಾಗಿ ಸ್ಮರಿಸಿ, ಗೌರವಿಸಿ

 

 

 

 

 

 

 

Leave a Reply

Your email address will not be published. Required fields are marked *