4 ಚಿನ್ನ ಸಹಿತ 7 ಮಾಸ್ಟರ್ಸ್ ಪದಕ ಗೆದ್ದ  ಬೆಂಗ್ರೆ ಆನಂದ್ ಅಮೀನ್

 

ಮಂಗಳೂರು, 6- ಧಾರವಾಡದಲ್ಲಿ ನ. 4 ಮತ್ತು 5ರಂದು ನಡೆದ ಕರ್ನಾಟಕ ಮುಕ್ತ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ಮಂಗಳೂರಿನ ಆನಂದ್ ಅಮೀನ್ ಬೆಂಗ್ರೆ ಅವರು 4 ಚಿನ್ನ ಸಹಿತ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಉತ್ತಮ ಕುಸ್ತಿಪಟು, ಕುಸ್ತಿ ಮತ್ತು ಈಜು ತರಬೇತುದಾರರು ಆಗಿರುವ ಆನಂದ್ ಅಮೀನ್ ಅವರು ನಿರಂತರವಾಗಿ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು 450ಕ್ಕೂ ಹೆಚ್ಚು ಪದಕಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಗೆದ್ದುಕೊಂಡಿದ್ದಾರೆ. ಇವgಗಳಲ್ಲಿ ಕೆಲವು ಕುಸ್ತಿ ಗೌರವಗಳು ಕೂಡ ಸೇರಿವೆ.

ಧಾರವಾಡದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಆನಂದ ಅಮೀನ್ ಅವರು 50 ಮೀ. 100 ಮೀ. ಮತ್ತು 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 50 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.50 ಮೀ ಮಿಡ್ಲೆ ರಿಲೇ ಮತ್ತು 50 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಮತ್ತು 50 ಮೀಟರ್ ಬಟರ್ ಫ್ಲೈನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಪ್ಯಾನ್ ಇಂಡಿಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಶನ್ ಸಹಕಾರದೊಂದಿಗೆ ಫೆಡರೇಶನ್ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯಯೇಶನ್, ಜಿಲ್ಲಾ ಮಾಸ್ಟರ್ಸ್ ಗೇಮ್ಸ್ ಅಸೋಸಿಯಯೇಶನ್ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು.

 

Leave a Reply

Your email address will not be published. Required fields are marked *