Airport: ಬಿಲ್ಲವರನ್ನು ಕ್ಯಾರೇ ಅನ್ನದ ಸಿದ್ದರಾಮಯ್ಯ

aairport koti chennaya

https://www.youtube.com/watch?v=uDLMrweqJjUಈಡಿಗ Ediga ಬಿಲ್ಲವ billava ಸಮುದಾಯವನ್ನು ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಕಡೆಗಣಿಸಿತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ನಾಡಿನ ಗಣ್ಯರ ಹೆಸರುಗಳನ್ನು ಇಡಬೇಕು ಎಂಬ ಆಗ್ರಹ, ಚರ್ಚೆಗಳು ನಿರಂತರವಾಗಿ ನಡೆದಿದ್ದವು. ಕೊನೆಗೂ ಗುರುವಾರ ವಿಧಾನಸಭೆಯಲ್ಲಿ ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಲ್ವರು ಗಣ್ಯಮಹನೀಯ ಹೆಸರುಗಳನ್ನು ಮರುನಾಮಕರಣ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.

ಗುರುವಾರ ”ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ ಮತ್ತು ಬೆಳಗಾವಿ” ಈ ನಾಲ್ಕು ವಿಮಾನ ನಿಲ್ದಾಣಗಳಿಗೆ(Airport) ಹೆಸರು ಅಂತಿಮಗೊಳಿಸಿ ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಯನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೂ ಕಳುಹಿಸಿ ಮನವಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ Airport

aairport koti chennayaಉತ್ತರ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಿರುವ ಗೋಕುಲ ರಸ್ತೆಯಲ್ಲಿನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನ ಹೆಸರು, ರಾಜ್ಯದ ದೊಡ್ಡ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಗಡಿ ಜಿಲ್ಲೆಯಾದ ‘ಬೆಳಗಾವಿ ವಿಮಾನ ನಿಲ್ದಾಣ’ಕ್ಕೆ ‘ಕಿತ್ತೂರು ರಾಣಿ ಚನ್ನಮ್ಮ’ರ ಹೆಸರು, ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ‘ಜಗಜ್ಯೋತಿ ಬಸವಣ್ಣ’ನವರ ಹೆಸರು ಹಾಗೂ ಇತ್ತೀಚೆಗೆ ಉದ್ಘಾಟನೆಗೊಂಡಿರುವ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ರಾಷ್ಟ್ರ ಕವಿ ಕುವೆಂಪು’ರ ಹೆಸರು ನಾಮಕರಣ ಮಾಡಲು ವಿಧಾನಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಬೇಕೆಂದು ಬಹಳ ಕಾಲದಿಂದ ಸರಕಾರದ ಮುಂದಿರುವ ಒತ್ತಾಯವಾಗಿದೆ. ಅದೇ ಅಧಿವೇಶನದಲ್ಲಿ ಬಿಜೆಪಿ ಶಾಸಕ ಮಾಜಿ ಸಚಿವ ಕಾರ್ಕಳದ ಸುನೀಲ್ ಕುಮಾರ್ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ ಫರೀದ್ ಅವರು ರಾಣಿ ಅಬ್ಬಕ್ಕ ಅವರ ಹೆಸರಿಡಬೇಕೆಂದು ಪೀಠದಿಂದ ಸಲಹೆ ನೀಡಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಈ ಕಡೆಗಣಮನೆ ಡಿ,10ರಂದು ಸಿದ್ದರಾಮಯ್ಯರ ಈಡಿಗ ಸಮಾವೇಶದಲ್ಲಿ ಭಾಗವಹಿಸಿದ ಸ್ವಘೋಷಿತ ಬಿಲ್ಲವ ಮುಖಂಡರೆನಿಸಿದ ಉದ್ಯಮಿಗಳಿಗೆ ಮತ್ತು ರಾಜಕಾರಣಿಗಳಿಗೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ. ಈಡಿಗರ ಸಮಾವೇಶದಲ್ಲಿ ಯಾವುದೇ ಘೋಷಣೆಯನ್ನಾಗಲಿ, ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಅದಾನವನ್ನಾಗಿ ಘೋಷಣೆ ಮಾಡಿರಲಿಲ್ಲ.

ಅಧಿವೇಶನ ನಡೆಯುತ್ತಿರುವ ಘೋಷಣೆ ಮಾಡಲಾಗುವುದಿಲ್ಲ ಎಂದ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಅದೇ ಅಧಿವೇಶನಗಳಲ್ಲಿ ಹಲವು ಘೋಷಣೆಗಳನನ್ನು ಮಾಡಿದ್ದಾರೆ. ಈಡಿಗ ಸಮುದಾಯಕ್ಕೆ ಏನಾದರು ನೀಡುವಂತಿಲ್ಲ ಎಂಬ ನಿಯಮಗಳು ಇರಬಹುದೇ ಎಂಬ ಸಂಶಯ ಜನರಲ್ಲಿ ಮೂಡಿಸುವಂತಿದೆ ಸರಕಾರದ ನಡೆ.

ವಿಮಾನ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಸಂಸದ ಈರಣ್ಣ ಕಡಾಡಿ ಅವರು ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ವಿವಿಧ ಏರ್‌ಪೋರ್ಟ್‌ಗಳಿಗೆ ಗಣ್ಯರ ಹೆಸರಿಡಲು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು.

A unanimous decision was taken in the Legislative Assembly on Thursday to recommend naming the Hubballi airport after Sangolli Rayanna, the Belagavi airport after Kittur Rani Chennamma, the Shivamogga Airport after Kuvempu, and the Vijayapura Airport after Jagajyoti Basaveshwara.

 

Leave a Reply

Your email address will not be published. Required fields are marked *