AIDS HIV: ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನ ! ಏಡ್ಸ್ ಹರಡುವಿಕೆ ಇಳಿಕೆ

HIV AIDS AIDS DAY

AIDS HIV  ಬೆಂಗಳೂರು, ಡಿಸೆಂಬರ್ 1 :  AIDS DAY: HIV ಏಡ್ಸ್ ರೋಗ​ ಸೋಂಕಿತರಲ್ಲಿ ಕರ್ನಾಟಕ  ರಾಜ್ಯ 9ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್​ (HIV) ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ದ ಅಂಕಿಅಂಶಗಳ ಪ್ರಕಾರ ಏಡ್ಸ್​ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು 9ನೇ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. ಕರ್ನಾಟಕದಲ್ಲಿ ಹೆಚ್​ಐವಿ ಟೆಸ್ಟ್​ ಪಾಸಿಟಿವಿಟಿ ರೇಟ್​ ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್​ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,431 ಏಡ್ಸ್‌ ರೋಗಿಗಳು AIDS cases

ಇತ್ತ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ 10,431ಯಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ. ಕಳೆದ 17 ವರ್ಷಗಳಲ್ಲಿ ಜಿಲ್ಲೆಯಲ್ಲಿ 7,49,494 ಮಂದಿ ಪರೀಕ್ಷೆಗೆ ಒಳಗಾದವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಮಾಹಿತಿ ಒದಗಿಸಿದರು.

ಉತ್ತರ ಕನ್ನಡದಲ್ಲಿ ಏಳು ತಿಂಗಳಲ್ಲಿ 86 ಜನರಿಗೆ ಎಚ್‌ಐವಿ ಸೋಂಕು HIV Infection

ನಿರಂತರ ಜಾಗೃತಿಯ ಪರಿಣಾಮ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸೋಂಕು ಹರಡುವ ಪ್ರಮಾಣ ಶೇ. 0.01 ಕ್ಕಿಂತ ಇಳಿಕೆ ಕಂಡಿದೆ.

ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆಯ AIDS DAY  ಹಿನ್ನೆಲೆಯಲ್ಲಿ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಎಚ್‌ಐವಿ ಏಡ್ಸ್ ಕುರಿತ ಮಾಹಿತಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ 86 ಎಚ್‌ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. 2022-23 ನೇ ಸಾಲಿನಲ್ಲಿ 105 ಸೋಂಕಿತರನ್ನು ಪತ್ತೆ ಹಚ್ಚಲಾಗಿತ್ತು ಎಂದು ಜಿಲ್ಲಾ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಮಾಹಿತಿ ನೀಡಿದೆ. ರಾಜ್ಯದಲ್ಲಿ ಎಚ್‌ಐವಿ ಸೋಂಕು ಹರಡುವ ಪ್ರಮಾಣ ಶೇ. 0.04 ರಷ್ಟಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಅತಿ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

AIDS DAYಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13 ಐಸಿಟಿಸಿ ಕೇಂದ್ರಗಳಿದ್ದು, ಶಿರಸಿ ಹಾಗೂ ಕಾರವಾರದಲ್ಲಿ ಎಆರ್‌ಟಿ ಕೇಂದ್ರಗಳಿವೆ. 2 ಡಿಎಸ್‌ಆರ್‌ಸಿ ಕೇಂದ್ರಗಳಿವೆ. 3 ಎನ್‌ಜಿಒಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿವೆ. 2022-23 ರಲ್ಲಿ ಜಿಲ್ಲೆಯಲ್ಲಿ 79213 ಜನರನ್ನು ಪರೀಕ್ಷೆ ಮಾಡಲಾಗಿ 99 ಸೋಂಕಿತರು ಪತ್ತೆಯಾಗಿದ್ದರು. ಅದೇ ಅವಧಿಯಲ್ಲಿ 23,480 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿ 6 ಸೋಂಕಿತರು ಪತ್ತೆಯಾಗಿದ್ದರು. 2008 ರಿಂದ ಇದುವರೆಗೆ ಜಿಲ್ಲೆಯಲ್ಲಿ 3488 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ 1809 ಜನ ಸದ್ಯ ಎಆರ್‌ಟಿ ಕೇಂದ್ರಗಳಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

HIV AIDS ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್​ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದರು.

ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್​ (HIV) ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ದ ಅಂಕಿಅಂಶಗಳ ಪ್ರಕಾರ ಏಡ್ಸ್​ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು (Karnataka) ಒಂಬತ್ತನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ ನಂತರ ಮಿಜೋರಾಂನಲ್ಲಿ ಶೇ 1.13, ಮೇಘಾಲಯದಲ್ಲಿ ಶೇ 0.58, ದೆಹಲಿಯಲ್ಲಿ ಶೇ 0.41, ತ್ರಿಪುರ ಮತ್ತು ಚಂಡೀಗಢ ತಲಾ ಶೇ 0.38, ಆಂಧ್ರ ಪ್ರದೇಶದಲ್ಲಿ ಶೇ 0.37, ಮಣಿಪುರದಲ್ಲಿ ಶೇ 0.33, ಮತ್ತು ಕರ್ನಾಟಕದಲ್ಲಿ ಶೇ 0.29 ರಷ್ಟು ಜನರಿಗೆ ಹೆಚ್​ಐವಿ ಸೋಂಕು ತಗುಲಿದೆ. ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಸಲಾಗುತ್ತದೆ.

ಇದನ್ನು ಓದಿ- ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯ

ನಂತರದ ಸ್ಥಾನದಲ್ಲಿ ದಕ್ಷಿಣ ಭಾರತ ರಾಜ್ಯಗಳಿವೆ. 2021ರ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಶೇ 0.67ರಷ್ಟು, ತೆಲಂಗಾಣದಲ್ಲಿ ಶೇ 0.47 ರಷ್ಟು ಮತ್ತು ಕರ್ನಾಟಕದಲ್ಲಿ ಶೇ0.46 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್​ಐವಿ ಟೆಸ್ಟ್​ ಪಾಸಿಟಿವಿಟಿ ರೇಟ್​ (TPR) ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್​ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

HIV AIDS DAYದೇಶದಲ್ಲಿ ಹೆಚ್ಚಾಗಿ HIV AIDS ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್​ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದರು. ಹೆಚ್ಚಾಗಿ ಈಶಾನ್ಯ ರಾಜ್ಯಗಳ ವಯಸ್ಕರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ. ಮಿಜೋರಾಂನಲ್ಲಿ ಶೇ2.70, ನಾಗಾಲ್ಯಾಂಡ್‌ನಲ್ಲಿ ಶೇ1.36 ಮತ್ತು ಮಣಿಪುರದಲ್ಲಿ ಶೇ1.05 ರಷ್ಟು ಜನರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ.

ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇನ್ನು ಐದಾರು ವರ್ಷಗಳಲ್ಲಿ ಸೊನ್ನೆಯ ದಿನ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ  ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ.

ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ರೋಗಿಗಳೊಂದಿಗೆ  ಮಾತನಾಡಿದರೆ ರೋಗ ಬರುತ್ತದೆ ಎಂದು. ಆದರೆ ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ  ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ   ಕಾಯಿಲೆ ತಡೆಗಟ್ಟಲು ಸಾಧ್ಯ. ಆಮೇಲೆ ಅನುಭವಿಸುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದರೆ ಇದು  ವಾಸಿಯಾಗದ ರೋಗ. ಇಷ್ಟೆಲ್ಲಾ ವಿಜ್ಞಾನದ ಬೆಳವಣಿಗೆಯಾದರೂ ಏಡ್ಸ್, ರೋಗಕ್ಕೆ ಮಾತ್ರ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದರು.

ಸಮುದಾಯ ಗಳು ಮುನ್ನಡೆಸಲಿ ಎಂಬ ಧ್ಯೇಯವಾಕ್ಯದೊಂದಿಗೆ  ಈ ವರ್ಷದ ಏಡ್ಸ್ ದಿನಾಚರಣೆ AIDS DAY ಹಮ್ಮಿಕೊಳ್ಳಲಾಗಿದೆ. 2017 ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದರು.

ಏಡ್ಸ್ ಪೀಡಿತರೊಂದಿಗೆ ಸಿಎಂ ಮಾತುಕತೆ

ಸಮಾರಂಭದಲ್ಲಿ ಭಾಗವಹಿಸಿದ್ದ ಏಡ್ಸ್ ತಗಲಿರುವ ವ್ಯಕ್ತಿಯೊಂದಿಗೆ  ಮಾತನಾಡಿದ ಸಿಎಂ  ಕಾಯಿಲೆ ಬಂದ ನಂತರ 26 ವರ್ಷಗಳ ಕಾಲ ಬದುಕಿದ್ದಾರೆ ಹಾಗೂ ಧೈರ್ಯವಾಗಿದ್ದಾರೆ ಎಂದು ಸಭಿಕರಿಗೆ  ತಿಳಿಸಿದರು. ಆಂಜಿಯೋಪ್ಲಾಸ್ಟಿಯಾಗಿದ್ದರೂ ಧೈರ್ಯವಾಗಿ   ಅದನ್ನು ಎದುರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಎಪಿಎಸ್ ಅಧ್ಯಕ್ಷ ಅಭಯ್ ಸಿಂಗ್, ಸಂಜನಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಐದು ವರ್ಷಗಳಲ್ಲಿ ಕರ್ನಾಟಕ AIDS ಏಡ್ಸ್ ಮುಕ್ತವಾಗಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಂದಿನ ಐದು ವರ್ಷಗಳಲ್ಲಿ ಭಾರತದ ದೇಶ, ಕರ್ನಾಟಕ ಏಡ್ಸ್ ಮುಕ್ತ ದೇಶ /ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಇದ್ದ ವಿಶ್ವ ಏಡ್ಸ್ ದಿನ AIDS DAY 2023 ಮತ್ತು 25 ನೇ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

HIV AIDS ಹೆಚ್ ಐ ವಿ ಮುಕ್ತ ಸಮಾಜವಾಗಿಸುವುದು ಎಲ್ಲರ ಜವಾಬ್ದಾರಿ :

ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು.2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆಯಾಗಿದೆ. ಎಂದರು.

HIV AIDS ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು

ಈ ಸಾಂಕ್ರಾಮಿಕ ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇನ್ನು ಐದಾರು ವರ್ಷಗಳಲ್ಲಿ ಸೊನ್ನೆಯ ದಿನ ಬರಲಿ ಎಂದು ಹಾರೈಸುತ್ತೇನೆ. ಭಾರತ ಏಡ್ಸ್ ಪ್ರಕರಣಗಳಲ್ಲಿ  ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ. ನಾವು ಹೆಚ್ಚು ಜಾಗೃತರಾಗುವುದು ಅವಶ್ಯ. ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ. ರೋಗಿಗಳೊಂದಿಗೆ  ಮಾತನಾಡಿದರೆ ರೋಗ ಬರುತ್ತದೆ ಎಂದು. ಆದರೆ ಹಾಗಾಗುವುದಿಲ್ಲ. ಹೆಚ್ಚಾಗಿ ರಕ್ತದ ಮೂಲಕವಾಗಿ ಹರಡುತ್ತದೆ. ಇದು ಜನರಿಗೆ  ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ   ಕಾಯಿಲೆ ತಡೆಗಟ್ಟಲು ಸಾಧ್ಯ. ಆಮೇಲೆ ಅನುಭವಿಸುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದರೆ ಇದು  ವಾಸಿಯಾಗದ ರೋಗ. ಇಷ್ಟೆಲ್ಲಾ ವಿಜ್ಞಾನದ ಬೆಳವಣಿಗೆಯಾದರೂ ಏಡ್ಸ್, ರೋಗಕ್ಕೆ ಮಾತ್ರ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದರು.HIV AIDS

ಸಮುದಾಯ ಗಳು ಮುನ್ನಡೆಸಲಿ ಎಂಬ ಧ್ಯೇಯವಾಕ್ಯದೊಂದಿಗೆ  ಈ ವರ್ಷದ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 2017 ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದರು.

HIV AIDS ಹೆಚ್ ಐ ವಿ ಮುಕ್ತ ಸಮಾಜವಾಗಿಸುವುದು ಎಲ್ಲರ ಜವಾಬ್ದಾರಿ :

ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು.2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ.

 

HIV AIDS ಏಡ್ಸ್ ಎಂದರೇನು?

HIV AIDS ಏಡ್ಸ್- ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. ಏ-ಪಡೆದ (A-ಅಂದರೆ ACQUIRED) ಅಂದರೆ.; ವಂಶ ಪರಂಪರೆಯದಲ್ಲ.ಐ-(I-ಅಂದರೆ IMMUNE) ಅಂದರೆ.,ರೋಗನಿರೋಧ ಶಕ್ತಿಡಿ -(D- ಅಂದರೆ DEFICIENCY ) ಅಂದರೆ ಕೊರತೆ ಎಸ್-( S-ಅಂದರೆ SYNDROME,) ಅಂದರೆ., ನಿರ್ದಿಷ್ಟ ರೋಗದ ಲಕ್ಷಣಗಳು. ಹೆಚ್ ಐವಿ ಯು ಮಾನವದೇಹದ ರೋಗಗಳೊಡನೆ ಹೋರಾಡುವ ನಿರೋಧ ವ್ಯವಸ್ಥೆಯನ್ನು ನಾಶಮಾಡುವುದು. ಕ್ರಮೇಣ ದೇಹದ ನಿರೋಧ ವ್ಯವಸ್ಥೆಯು ಶಿಥಿಲವಾಗಿ ರೋಗಗಳನ್ನು ಎದುರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಈ ಹಂತದಲ್ಲಿ ಆ ವ್ಯಕ್ತಿಗೆ ಅನೇಕ ರೋಗಗಳು ಬರುವವು.

ಹೆಚ್ ಐವಿ ಹರಡುವ ವಿಧಾನ

ಒಬ್ಬ ವ್ಯಕ್ತಿಯು ಹೆಚ್ ಐವಿ ಯ HIV AIDS  ಸೋಂಕನ್ನು ಕೆಳಗಿನ ಮಾರ್ಗದಲ್ಲಿ ಪಡೆಯುವನು.

ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಒಬ್ಬ ವ್ಯಕ್ತಿಯು ಇನ್ನೊಬ್ಬ ಹೆಚ್ ಐವಿ ಸೋಂಕಿತವ್ಯಕ್ತಿ ಯೊಂದಿಗೆ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ತಗಲುವುದು.

ಸಕ್ರಮವಾಗಿ ಕ್ರಿಮಿ ಶುದ್ಧ ವಾಗದ ಸೂಜಿ ಮತ್ತು ಇತರೆ ಆಸ್ಪತ್ರೆಯ ಉಪಕರಣಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಶಸ್ತ್ರ ಕ್ರಿಯೆಯ ಉಪಕರಣಗಳಾದ ಸ್ಕ್ಯಾಪಲ್, ಸೀರಂಜು ಅಥವ ಇನ್ನಿತರ ಕೆಲ ಉಪಕರಣಗಳನ್ನು ಸೋಂಕಿತನಿಗೆ ಬಳಸಿದ ಮೇಲೆಕ್ರಿಮಿ ಶುದ್ಧ ಮಾಡದೆ ಬೆರೊಬ್ಬರ ಮೇಲೆ ಉಪಯೋಗಿಸಿದರೆ ಅವು ಸೋಂಕನ್ನು ಹರಡಬಹುದು. .

ಸುರಕ್ಷಿತವಲ್ಲದ ರಕ್ತ ಪೂರ್ಣಮಾಡುವುದರಿಂದ ಒಬ್ಬ ವ್ಯಕ್ತಿಗೆ ಹೆಚ್ ಐವಿ ಸೋಂಕಿರುವವರ ರಕ್ತವನ್ನು ಮರಪೂರಣ ಮಾಡಿದರೆ ಸೋಂಕು ಹರಡುವುದು.

ಸೋಂಕಿತ ತಾಯಿ ತಂದೆಯರಿಂದ ಮಗುವಿಗೆ: ಒಬ್ಬ ಹೆಚ್ ಐವಿ ಸೊಂಕಿತ ತಾಯಿಯು ಗರ್ಭಿಣಿಯಿದ್ದಾಗಲೆ ಅಥವ ಜನನ ಸಮಯದಲ್ಲಿ ಸೋಂಕು ಹರಡಬಹುದು. ಎದೆ ಹಾಲು ಕೂಡಾ ಸೋಂಕು ಹರಡುವ ಮಾಧ್ಯಮವಾಗಬಹುದು.

 

ಹೆಚ್ ಐವಿ ಹೀಗೆ ಹರಡುವುದಿಲ್ಲ

ಕೈಕುಲುಕುವುದರಿಂದ

ಸೋಂಕಿತರೊಂದಿಗೆ ಊಟಮಾಡುವುದರಿಂದ.

ಲಘುವಾಗಿ ಮುದ್ದಿಸುವುದರಿಂದ

ಗಾಳಿಯಿಂದ, ಅಥವ ಕೆಮ್ಮಿನಿಂದ, ಮತ್ತು ಸೀನುವುದರಿಂದ

ನೀರು ಮತ್ತು ಆಹಾರದಿಂದ

ಬೆವರು ಮತ್ತು ಕಣ್ಣೀರಿನಿಂದ

ತಟ್ಟೆ, ಲೋಟ ಮತ್ತು ಪಾತ್ರೆಗಳನ್ನು ಸೋಂಕಿತರೊಂದಿಗೆ ಹಂಚಿಕೊಳ್ಳುವುದರಿಂದ

ಸೋಂಕಿತರನ್ನು ಮುಟ್ಟುವುದರಿಂದ, ಅಪ್ಪಿಕೊಳ್ಳುವುದರಿಂದ

ಸೋಂಕಿತರು ಬಳಸಿದ ಸ್ನಾನದ ಮನೆ ಮತ್ತು ಕಕ್ಕಸನ್ನು ಉಪಯೋಗಿಸುವುದರಿಂದ

ಸೋಂಕಿತರ ಉಡುಪನ್ನು ತೊಡುವುದರಿಂದ

ಸೋಂಕಿತರ ಜೊತೆ ಇರುವುದರಿಂದ

ಸೊಳ್ಳೆ ನೊಣ ಮತ್ತು ಇತರ ಕೀಟಗಳಿಂದ

HIV AIDS ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳ (ಲೈಂಗಿಕವಾಗಿ ಹರಡುವ ರೋಗಗಳು) ನಡುವೆ ಸಂಬಂಧ ವಿದೆಯಾ ?

ಹೆಚ್ ಐವಿ ಮತ್ತು ಇತರೆ ಲೈಂಗಿಕ ರೋಗಗಳು ಪರಸ್ಪರ ಪರಿಣಾಮ ಬೀರುವವು. ಹೆಚ್ ಐವಿ ಇರುವ ವ್ಯಕ್ತಿಗೆ ಲೈಂಗಿಕ ರೋಗಗಳಿದ್ದರೆ ಹೆಚ್ ಐವಿ ಹರಡುವ ಅಪಾಯ ಹೆಚ್ಚಾಗುವುದು.

ಸಿನೆಮಾ ಥೇಟರಿನ ಸೀಟಿನಲ್ಲಿಂದ ಚುಚ್ಚಬಹುದಾದ ಸೂಜಿಗಳು ಹೆಚ್ ಐವಿ ಹರಡುತ್ತವೆಯೇ.?

ಹೆಚ್ ಐವಿ ಸೋಂಕು ಈ ರೀತಿಯಲ್ಲಿ ಹರಡಲು, ಸೂಜಿಯು ಹೆಚ್ಚಿನ ಮಟ್ಟದಲ್ಲಿ ವೈರಸ್ಸಿನಿಂದ ಸೋಂಕಿತವಾದ ರಕ್ತದಿಂದ ಕೂಡಿರಬೇಕು.

ಹೆಚ್ ಐವಿ ಸೋಂಕು ಹಚ್ಚೆ ಹಾಕಿಸಿಕೊಳ್ಳುವುದರಿಂದ, ದೇಹವನ್ನು ಚುಚ್ಚಿಸಿಕೊಳ್ಳುವುದರಿಂದ, ಅಥವ ಕ್ಷೌರಿಕರಿಂದ ಬರವುದು ಸಾಧ್ಯವೇ ?

ಉಪಕರಣವು ರಕ್ತದಿಂದ ಮಲಿನವಾಗಿದ್ದರೆ ಅದನ್ನು ಕ್ರಿಮಿಶುದ್ಧ ಮಾಡದಿದ್ದರೆ ಇನ್ನೊಬ್ಬರಿಗೆ ಬಳಸಿದಾಗ ಹೆಚ್ ಐವಿ ಹರಡುವ ಸಾಧ್ಯತೆ ಇದೆ. ಆದರೂ ಹಚ್ಚೆಹಾಕುವವರು ಅಥವ ದೇಹದ ಭಾಗವನ್ನು ಚುಚ್ಚುವವರು “ ಸಾರ್ವತ್ರಿಕ ಎಚ್ಚರಿಕೆ” ಯಿಂದ ಪ್ರಕ್ರಿಯೆಯನ್ನು ಅನುಸರಿಸಬೇಕು. ಅದು ರಕ್ತದಿಂದ ಹರಡುವ ಸೋಂಕುಗಳಾದ ಹೆಚ್ ಐವಿ ಮತ್ತು ಹೆಪಿಟೈತೆಸ್. ಬಿ ಗಳನ್ನು ತಡೆಯುವುದು.

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯ ವಿದೆಯಾ?

ಆರೋಗ್ಯ ಸೇವೆ ನೀಡುವವರು ಹೆಚ್ ಐವಿ ಪಾಜಿಟಿವ್ ರವರ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಅಪಾಯವಾಗುವ ಸಂಭವ ತೀರಾ ಕಡಿಮೆ. ವಿಶೇಷವಾಗಿ ಅವರು ಸಾರ್ವತ್ರಿಕ ಆರೋಗ್ಯ ರಕ್ಷಣಾ ಪ್ರಕ್ರಿಯೆಗಳನ್ನು ಪಾಲಿಸಿದರೆ. ಅವರಿಗೆ ಆಗಬಹುದಾದ ಮುಖ್ಯ ಅಪಾಯವೆಂದರೆ ಅಕಸ್ಮಾತ್ತಾಗಿ ಮಲಿನವಾದ ಸೋಂಕಿತ ಸೂಜಿ ಮತ್ತು ಉಪಕರಣಗಳಿಂದ ಗಾಯವಾದರೆ ಮಾತ್ರ ಕಷ್ಟ.

ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು HIV AIDS ತಗುಲುವ ಸಾಧ್ಯತೆ ಇದೆಯಾ ?

ವೈದ್ಯರಲ್ಲಿಗ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಬಹಳ ಕಡಿಮೆ. ವೃತ್ತಿಪರರಾದ ಅವರು ಸೋಂಕನ್ನು ನಿಯಂತ್ರಿಸುವ ಎಲ್ಲ ಎಚ್ಚರಿಕೆ ತೆಗೆದುಕೊಂಡಿರುವರು.

ಕಣ್ಣಿಗೆ ರಕ್ತದ ಹನಿಗಳು ಚಿಮ್ಮಿದರೆ ಹೆಚ್ ಐವಿ ಸೋಂಕು ತಗಲುವುದೆ ?

ಈ ರೀತಿಯಾಗಿ ವೈದ್ಯರಲ್ಲಿಗೆ ಮತ್ತು ದಂತಚಿಕತ್ಸೆಗೆ ಹೋದಾಗ ಹೆಚ್ ಐವಿ ಸೋಂಕು ತಗುಲುವ ಸಾಧ್ಯತೆ ಹರಡುವ ಸಂಭವ ಬಹು ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ. ಬಹಳ ಕಡಿಮೆ ಸಂಖ್ಯೆಯ ಜನ ಈ ರಿತಿಯ ಸೋಂಕಿಗೆ ಒಳಗಾಗಿದ್ದಾರೆ

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಇದೆಯಾ ?

ಯಾರಾದರೂ ಕಚ್ಚಿದಾಗ ಹೆಚ್ ಐವಿ ಬರುವ ಸಾಧ್ಯತೆ ಬಹು ಅಸಹಜ. ಇಂಥಹ ಪ್ರಕರಣಗಳು ಎಲ್ಲೋ ಒಂದೆರಡು ವರದಿಯಾಗಿವೆ. ತೀವ್ರವಾಗಿ ಅಂಗಾಂಶಗಳು ಮತ್ತು ಮಾಂಸ ಖಂಡಗಳು ಹರಿದು ಜೊತೆಗೆ ರಕ್ತವೂ ಬಂದಿದ್ದರೆ ಮಾತ್ರ ಇದು ಸಾಧ್ಯ.

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜೊತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿ ಕೊಂಡರೆ ಹೆಚ್ ಸೋಂಕು ಬರುವುದೆ ?

ಮಾದಕ ವಸ್ತುವನ್ನು ಚುಚ್ಚಿಕೊಳ್ಳುವಾಗ ಇತರರ ಜತೆ ಅದೇ ಸೂಜಿಯನ್ನು ಕ್ರಿಮಿಶುದ್ಧ ಮಾಡದೆ ಹಂಚಿಕೊಂಡರೆ ಹೆಚ್ ಸೋಂಕು ಬರುವ ಸಾಧ್ಯತೆ ಇದೆ. ಸೂಜಿಯಲ್ಲಿ ಸೋಂಕಿತ ರಕ್ತವಿದ್ದು ಅದು ರಕ್ತಪ್ರವಾಹವನ್ನು ಸೇರುವುದು. ಆದ್ದರಿಂದ ಸೋಂಕಿತರು ಬಳಸಿದ ಸೂಜಿಯನ್ನು ಉಪಯೋಗಿಸಿದರೆ ವೈರಸ್ ಹರಡುವುದು.

ನಾನು ಗಭಿಣಿಯಾದಾಗಲೇ ಮತ್ತು ನಂತರ ಎದೆ ಹಾಲು ನೀಡಿದರೆ ಮಗುವಿಗೆ ಸೋಂಕು ನ್ನು ಹರಡುವುದೇ?

ಸೋಂಕಿತ ಗರ್ಭಿಣಿಯು ಇನ್ನೂ ಜನಿಸದ ಮಗುವಿಗೆ ಅಥವ ಹುಟ್ಟಿದ ಕೂಡಲೆ ಹೆಚ್‌ಐವಿ ಸೋಂಕನ್ನು ಹರಡಬಹುದು. ಅಲ್ಲದೆ ಎದೆಹಾಲು ಕುಡಿಸುವುದರಿಂದಲೂ ಸೋಂಕು ಹರಡುವುದು. ಮಹೀಳೆಗೆ ಸೋಂಕು ಇದೆ ಎಂದು ಗೊತ್ತಾದಾಗ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುವುದು. ಅಲ್ಲದೆ ಹೆರಿಗೆಯನ್ನೂ ಸಹಾ ಸಿಸೆರಿಯನ್ ವಿಧಾನದಲ್ಲಿ ಮಾಡಿಸಿ ಕೊಂಡು ಮತ್ತು ಎದೆ ಹಾಲನ್ನು ಕುಡಿಸದಿದ್ದರೆ ಸೋಂಕು ತಗುಲುವುದುನ್ನು ತಡೆಯಬಹುದು.

ರಕ್ತವನ್ನು ಪಡೆಯುವುದು ಇಲ್ಲವೆ ದಾನ ಮಾಡುವುದರಿಂದ ಹೆಚ್ ಐವಿ ಬರುವ ಅಪಾಯವಿದೆಯಾ?

ಕೆಲವು ಜನ ರಕ್ತ ಮರುಪೂರಣ ದಿಂದ ಹೆಚ್ ಐವಿ ಸೋಂಕಿತರಾಗಿದ್ದಾರೆ. ಆದರೆ ಈಗ ರಕ್ತ ಮರುಪೂರಣ ಮಾಡುವಾಗ ಎಲ್ಲ ರಕ್ತದ ಮಾದರಿಗಳನ್ನು ಸಂಪೂರ್ಣ ತಪಾಸಣೆ ಮಾಡುತ್ತಾರೆ ಆದ್ದರಿಂದ ರಕ್ತದಾನ ಮಾಡುವಾಗ ಇಲ್ಲವೆ ಪಡೆಯುವಾಗ ಸೋಂಕು ತಗುಲುವುವ ಸಾದ್ಯತೆ ಇಲ್ಲ.

 

Leave a Reply

Your email address will not be published. Required fields are marked *