Adi Dravida ಮಂಗಳೂರುಃ ಇಲ್ಲಿನ ಪ್ರತಿಷ್ಠಿತ ನೇಶನಲ್ ಇನ್ಸಿಟ್ಯೂಟ್ ಆಪ್ ಟೆಕ್ನಲಾಜಿ- ಕರ್ನಾಟಕ (ಎನ್ಐಟಿಕೆ) ಜಲ ಸಂಬಂಧಿ ಸಂಶೋಧನೆಗಾಗಿ ಪಿಎಚ್ ಡಿ ಪದವಿ ಪಡೆದಿರುವ ಡಾ. ಸಹಜ್ ಕೆ.ವಿ ಅವರನ್ನು ಭಾನುವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ರಾಜ್ಯ ಆದಿ ದ್ರಾವಿಡ ಸಮಾವೇಶದಲ್ಲಿ ಅವರ ಶೈಕ್ಷಣಿಕ ಸಾಧನೆಗಾಗಿ ಅಭಿನಂದಿಸಲಾಗುವುದು.
ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ ಆಲಂಗಾರು ಮತ್ತು ವಿಮಲ ಕೆ. ದಂಪತಿಯ ಸುಪುತ್ರರಾಗಿದ್ದು, ಅತಿಥಿ ಉಪನ್ಯಾಸಕರಾಗಿ ಪಾರ್ಟ್ ಟೈಂ ಉದ್ಯೋಗಿಯಾಗಿದ್ದು, ಉಳಿದ ಸಮಯ ವಿವಿಧ ಸಂಘಟನೆಗಳ ಮೂಲಕ ಸಮಾಜ ಮುಖಿ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.
ಪಣಂಬೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಗಾಂಧಿನಗರ ಗೋಕರ್ಣನಾಥ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಎಂಟೆಕ್ ಪದವಿ ಪೂರೈಸಿದ್ದಾರೆ.