ಲಿಪ್‌ಕಾರ್ಟ್ Flipkart ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ CIGFIL ಕಂಪನಿಗಳಿಗೆ 17,632 ರೂ. ದಂಡ ವಿಧಿಸಿ ಗ್ರಾಹಕರ Consumer ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಕಂಪನಿ ವಿರುದ್ಧ ಸೇವಾ ನ್ಯೂನ್ಯತೆ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪವಿತ್ತು. ಗ್ರಾಹಕ ಈರಣ್ಣ ಗುಂಡಗೋವಿ ಎಂಬವರು ಗ್ರಾಹಕ ಸಂರಕ್ಷಣಾ ಕಾಯಿದೆಯಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಈರಣ್ಣ ಗುಂಡಗೋವಿ ಅವರು ಫ್ಲಿಪ್‍ಕಾರ್ಟ್ ನಲ್ಲಿ ಆನ್‍ಲೈನ್ Onlineಮೂಲಕ 2023ರ ಜನವರಿ 14ರಂದು 2,632 ರೂ. ಮೌಲ್ಯದ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ ಥರ್ಮಸ್ ಅನ್ನು ಹಣ ಸಂದಾಯ ಮಾಡಿಯೇ ಆರ್ಡರ್ ಮಾಡಿದ್ದರು. ಅವರ ಕೈಗೆ ಪಾರ್ಸಲ್ ಸಿಕ್ಕಾಗ ಥರ್ಮಸ್ ಸರಿ ಇರದ ಕಾರಣ ಅದನ್ನು ಮರಳಿಸಿದ್ದರು.
ಕೋರಿಯರ್ ಸರ್ವಿಸ್ ಅವರಿಂದ ಥರ್ಮಸ್ ಹಿಂಪಡೆದಿದ್ದರು. ಆದರೆ, ಬದಲಾಗಿ ಹೊಸ ಥರ್ಮಸ್ ಕೊಡದೇ ಮತ್ತು ಅದರ ಹಣವನ್ನೂ ಮರಳಿ ನೀಡಿರಲಿಲ್ಲ. ಈ ಬಗ್ಗೆ ಈರಣ್ಣ ಅವರ ಮೂಬೈಲ್‍ಗೆ ಸಂದೇಶ ಬಂದಿತ್ತು.
ಕಂಪನಿಯು ಸೇವಾ ನ್ಯೂನ್ಯತೆ ಹಾಗೂ ಆರ್ಥಿಕ ನಷ್ಟ ಉಂಟಾಗಿದೆ ಎಂದು ಈರಣ್ಣ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಕಂಪನಿ ವಿಫಲವಾಗಿದೆ. ಆ ಮೂಲಕ ಅವರು ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ.
ಕಂಪನಿಯು ಈರಣ್ಣ ಅವರಿಗೆ ಥರ್ಮಸ್‍ನ ಮೌಲ್ಯ 2,632ರೂಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದ್ದಾರೆ. ಅಲ್ಲದೇ, ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ 10,000ರೂ. ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚಕ್ಕೆ 5,000 ನೀಡುವಂತೆ ಫ್ಲಿಪ್‍ಕಾರ್ಟ್ ಮತ್ತು ಸಿಆಯ್‍ಜಿ ಎಫ್ಆಯ್‍ಎಲ್ ಲಿಮಿಟೆಡ್ ಕಂಪನಿಗೆ ಆದೇಶಿಸಿ ತೀರ್ಪುನೀಡಿದ್ದಾರೆ.
One Comment on “ಆನ್ ಲೈನ್ ಕಂಪೆನಿಗೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಪರಿಹಾರ ಕೋರ್ಟ್”