ಪರಿಪೂರ್ಣ ಕಲಾವಿದ ಕಾಸರಗೋಡು ಚಿನ್ನಾ
chinna.jpg

ಕಡಲತಡಿಯ ಕಾಸರಗೋಡಿನ "ಪದ್ಮಗಿರಿ" ಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡು ನಾಟಕ ಕಲೆಯಲ್ಲಿ ಸಾಧನೆ ಮಾಡಿರುವ ಸಾಧಕ ಕಾಸರಗೋಡು ಚಿನ್ನಾ ೧೯೫೭ ರಲ್ಲಿ ಕಲೆ ಸಂಸ್ಕೃತಿಯ ತವರೂರಾದ ಕಾಸರಗೋಡಿನಲ್ಲಿ ಜನಿಸಿ ಕಲಾಪರಂಪರೆಯ ಮಧ್ಯದಲ್ಲಿ ಬೆಳೆದು ನವರಸಗಳನ್ನು ಮೈಗೂಡಿಸಿಗೊಂಡವರು. ಉತ್ತಮ ನಾಟಕಕಾರ, ನಿರ್ದೇಶಕರಾಗಿ ಕಲಾ ಸಾಮ್ರಾಜ್ಯಕ್ಕೆ ಅತ್ಯುನ್ನತ ಮಟ್ಟದ ಕೊಡುಗೆ ನೀಡಿ ಕಲಾಸೇವೆ ಮಾಡಿಕೊಂಡು ಖ್ಯಾತಿ ಗಳಿಸಿದ ಅಪ್ಪಟ ಕನ್ನಡಿಗ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ್ ರಾವ್ ಎಸ್) ಕಲಾದೇವಿಯ ಆರಾಧನೆ ಮಾಡಿಕೊಂಡು ಜನರ ಮನದಲ್ಲಿ ಅಚ್ಚಳಿಯದೆ ಉಳಿದ ಕಲಾಕಾರ.

ಆದರ್ಶ ಫಿಲಂ ಇನ್ಸಿಟ್ಯೂಟ್ ನಲ್ಲಿ ಚಿನ್ನದ ಪದಕದೊಂದಿಗೆ  ಡಿ ಎಫ್. ಎ. ಪದವಿಯನ್ನು ಪಡೆದು ಕನ್ನಡ ತುಳು, ಕೊಂಕಣಿ, ಕೊಡವ, ಆಂಗ್ಲ, ಮಲಯಾಳಂ ಭಾಷೆಗಳಲ್ಲಿ ೫೦೦ಕ್ಕಿಂತಲೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಅಪಾರ ಅನುಭವಿ ನಟರಾಗಿದ್ದಾರೆ.

ಪ್ರಥಮಭಾರಿಗೆ ಅಭಿನಯಿಸಿದ ನಾಟಕ "ತಾಳಿ ಕಟ್ಟೋಕೆ ತಯಾರ್ " ನಂತರ ಪ್ರಮುಖ ನಾಟಕಗಳಾದ  - ಹೇಡಿಗಳು, ಮಣ್ಣಿನ ಬೊಂಬೆ, ಕೆಥಾರ್ಸಿಸ್, ಬಂದಾ ಬಂದಾ ಸರದಾರ, ಗಣಗಣರಾಜ್ಯ, ಮೊಹೆಂಜೊದಾರೊ, ಗುಲಾಮನ ನಗು, ಟಿಂಗರ್ ಬುಡ್ಡಣ್ಣ, ಆನಿ ಬಂತಾನಿ, ಸಿದ್ಧತೆ, ಇತ್ಯಾದಿ ಕನ್ನಡ ನಾಟಕಗಳೊಂದಿಗೆ, ತುಳು ನಾಟಕ - ಕೌನ್ಸಿಲರ್ ಕೊಗ್ಗಣ್ಣೆ, ಸಿಂಕ್ರನ ಕಿತಾಪತಿ, ಈ ಪ್ರಾಯೋಡ್ಲಾ ಬರವಾ, ನಿನ್ನ ಮೋಕೆದಾ, ಹಾಗೂ ಕೊಂಕಣಿ ನಾಟಕಗಳು - ದೋನಿ ಘಡಿ ಹಾಸ್ಸೂನು ಕಾಡಿ, ಜಾಕ್ ಪೋಟ್ ಜನ್ನಾ, ಶಾಂತಿನಿವಾಸ, ಚೋರುಗುರು ಚಾಂಡಾಲ ಶಿಷ್ಯು, ಧರ್ಮಂ ಶರಣಗಚ್ಚಾಮಿ. ವಿವಿಧ ಭಾಷೆಗಳ ನಾಟಕಗಳಲ್ಲಿಯ ಇವರ ನಟನಾ ಸಾಮರ್ಥ್ಯ  ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅಭಿವ್ಯಕ್ತಿ, ಮೂಡ್, ಎಕ್ಸ್ ಪ್ರೆಶನ್ಸ್ ಎಂಬ ಮೂಕಾಭಿನಯ "ಮೈಮ್" ಶೋವನ್ನು ಕರ್ನಾಟಕ, ಕೇರಳ, ಮಹಾರಾಷ್ಟ್ರ ಗಳಲ್ಲಿ ಅಭಿನಯಿಸಿದ್ದಾರೆ. ಗಲ್ಪ್ ರಾಷ್ಟ್ರದಲ್ಲಿ ಪೂರ್ಣಾವಧಿ ಮೂಕಾಭಿನಯವನ್ನು  ಅಭಿನಯಿಸಿ, ನಿರ್ದೇಶಿಸಿದ ಮೊದಲ ಭಾರತೀಯ.

ಲಾರಿಯ ಮೇಲೆ ನಾಟಕ ಮಾಡುವ ಮೂಲಕ ರಂಗಭೂಮಿಯ ಇತಿಹಾಸದಲ್ಲಿ ಪ್ರಥಮ ರಂಗ ಅಭಿಯಾನ ಕರ್ನಾಟಕ ಹಾಗೂ ಕೇರಳಗಳಲ್ಲಿ ೧೦೮ ಕ್ಕೂ ಅಧಿಕ ಪ್ರದರ್ಶನ ನೀಡಿದ ಸಾಹಸಿಗ.

ಗೀತ ಸಂಗೀತ ರಥ - ಸುಗಮ ಸಂಗೀತ ಕ್ಷೇತ್ರದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಖ್ಯಾತ ಗಾಯಕ ಮುದ್ದುಕೃಷ್ಣ ಅವರ ನೇತ್ರತ್ವದಲ್ಲಿ ಕರ್ನಾಟಕದ ಎಲ್ಲಾ ಸುಗಮ ಸಂಗೀತ ಕಲಾವಿದರ ಸಂಗಮದೊಂದಿಗೆ ಗಡಿಪ್ರದೇಶ ಕಾಸರಗೋಡಿನ ಮೂವತ್ತು ಪ್ರದೇಶಗಳಲ್ಲಿ ಒಂದು ಲಕ್ಷ ಜನ ವೀಕ್ಷಿಸಿದ "ಗೀತ ಸಂಗೀತ ರಥ"  ದ ಅಭಿಯಾನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಬೀದಿ ಮಕ್ಕಳಿಂದ ಬೀದಿ ನಾಟಕಗಳ ಅಭಿಯಾನ - "ತಿಧಿಗಿಣತೋಂ".
ಆಕಾಶವಾಣಿಯಲ್ಲಿ ೧೯೭೭ ರಿಂದ ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ  ಬಿ ಹೈಗ್ರೇಡ್ ಕಲಾವಿದನಾಗಿ ನೂರಾರು ನಾಟಕಗಳಲ್ಲಿ ಅಭಿನಯ.

ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಹಿಂದಿ ಧಾರಾವಾಹಿ "ತೆನ್ನಾಲಿ ರಾಮ"ದಲ್ಲಿ ಖುಲ್ಲನ್ ಪಾತ್ರದಲ್ಲಿ ಅಭಿನಯ, ಕಿರು ಚಲನಚಿತ್ರ - ಅಣ್ಣನ ಹೆಂಡತಿ, ಚಿನ್ನು, ಫಜೀತಿ, ಚಿರಸ್ಮರಣೆ ಕನ್ನಡ ಧಾರಾವಾಹಿಗಳಲ್ಲಿ ಅಭಿನಯ, ಈ ಟಿವಿ ಧಾರವಾಹಿ - ಬುರುಡೆ ಭವಿಷ್ಯದಲ್ಲಿ ಭೂತನಾಥ ಜಂಬೂದಿರಿ ಪಾತ್ರಧಾರಿ.  ಈಟಿವಿ ಯಲ್ಲಿ "ನಮ್ಮೂರ ಸವಿರುಚಿ"ಯಲ್ಲಿ ಕಾರ್ಯಕ್ರಮ ನಿರ್ವಾವಕ.

ಹಿಂದಿ ಟೆಲಿಚಿತ್ರ  "ಸಪ್ರೈಸ್" ನಿರ್ದೇಶನ

ನಟಿಸಿರುವ ಚಲಚಿತ್ರಗಳು - ಫಣಿಯಮ್ಮ, ಪ್ರಾಯ ಪ್ರಾಯ ಪ್ರಾಯ, ಕೆಂಡದ ಮಳೆ, ರಾವಣ ರಾಜ್ಯ, ದರೋಡೆಗಳ ನಡುವೆ, ಪ್ರೇಮಾಗ್ನಿ, ಆಸ್ಪೋಟ, ವೆಂಕಟೇಶ್ವರ ಮಹಿಮೆ, ಮೈಸೂರು ಮಲ್ಲಿಗೆ, ಸಾಗರದೀಪ ಓಂಕಾರ, ಬಂಗಾರ್ ಪಟ್ಲೇರ್ (ತುಳು) ಸ್ನೇಹಸಿಂಧೂರಂ (ಮಲಯಾಳಂ)

ಪ್ರಶಸ್ತಿಗಳು : ರಂಗಭೂಮಿಯವರು ಏರ್ಪಡಿಸಿದ ಅಖಿಲ ಭಾರತ ಮಟ್ಟದ ಕೊಂಕಣಿ ನಾಟಕ ಸ್ಪರ್ಧೆಯಲ್ಲಿ 'ಗಾಂಟಿ"ನಾಟಕಕ್ಕೆ ಉತ್ತಮ ನಟನೆ, ನಿರ್ದೇಶಕ ಸಹಿತ ೭ ಪ್ರಶಸ್ತಿಗಳು.

ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಕನ್ನಡ ನಾಟಕ "ಬಂದಾ ಬಂದಾ ಸರದಾರ " ನಟನೆಗೆ ದ್ವಿತೀಯ ಬಹುಮಾನ.

ರಾಜ್ಯಮಟ್ಟದ ನಾಟಕ ಸ್ಪರ್ಧೆ - ನಿರ್ದೇಶನ, ನಟನೆ, "ಗುಲಾಮನ ನಗು" ನಾಟಕಕ್ಕೆ ಪ್ರಥಮ ಬಹುಮಾನ ಇತರ ೬ ಪ್ರಶಸ್ತಿಗಳು.

ಉತ್ತಮ ನಟ ಪ್ರಶಸ್ತಿ - ಸರ್ಕಾರಿ ಕಾಲೇಜು ಕಾಸರಗೋಡು - ೧೯೭೩-೭೪

ವಿಶ್ವವಿದ್ಯಾಲಯ ಮಟ್ಟದ ಉತ್ತಮ ನಟ ಪ್ರಶಸ್ತಿ - ಕಲ್ಲಿಕೋಟೆ ವಿಶ್ವ ವಿದ್ಯಾಲಯ -೧೯೭೪
ದುಬಾಯಿ ತುಳು ಕೂಟದಿಂದ ಸನ್ಮಾನ - ೧೯೯೨

ಬಹೆರೈನ್ ಕನ್ನಡ ಸಂಘದ ಸನ್ಮಾನ - ೧೯೯೨

ಬಹೆರೈನ್ ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ದಲ್ಲಿ  ಸನ್ಮಾನ ೨೦೦೬

ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ - ೧೯೯೪

ಜೇಸಿ ಪ್ರಶಸ್ತಿ, ಪ್ರತಿಸೂರ್ಯ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ,
ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ - ೨೦೦೪

ಹಾಗೂ ಅಸಂಖ್ಯಾತ ಸಂಘ ಸಂಸ್ಥೆಗಳಿಂದ ಸನ್ಮಾನ.

ಸಂಚಾಲಕರಾಗಿ - ಗೀತಾವಿಹಾರ ಕಾಸರಗೋಡು(ರಿ), ಸ್ಪಂದನ - ಮಂಗಳೂರು

ನಿರ್ದೇಶಕರಾಗಿ - ಪ್ರಸಾಧನ -ಮಂಗಳೂರು, ರಂಗ ಚಿನ್ನಾರಿ, ಅಪೂರ್ವ ಕಲಾವಿದರು ಕಾಸರಗೋಡು.

ಸ್ಥಾಪಕ ಸದಸ್ಯರು - ಯವನಿಕಾ ಕಾಸರಗೋಡು

ಸಲಹೆಗಾರರು - ನೃತ್ಯನಿಕೇತನ-ಕಾಸರಗೋಡು
ಗೌರವಾಧ್ಯಕ್ಷರು - ಶ್ರೀ ವೆಂಕಟರಮಣ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಸಂಘ -

ಸಾಮಾಜಿಕ ಜವಾಬ್ದಾರಿ:

ಕಾರ್ಯದರ್ಶಿ - ಹೊರನಾಡ ಕನ್ನಡಿಗರ ಸಂಘ ಸಂಸ್ಥೆ ಒಕ್ಕೂಟ (ರಿ) ಬೆಂಗಳೂರು

ಕರ್ನಾಟಕ ನಾಟಕ ಆಕಾಡೆಮಿ ಸದಸ್ಯ - ೧೯೯೮-೨೦೦೧

ಕೇರಳ ನಾಟಕ ಆಕಾಡೆಮಿ ಸದಸ್ಯ - ೨೦೦೨ -೨೦೦೫

ಸಂಚಾಲಕತ್ವದಲ್ಲಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಕಂಪೆನಿ ನಾಟಕೋತ್ಸವ, ಕಾರ್ಮಿಕರ ನಾಟಕೋತ್ಸವ, ಹವ್ಯಾಸಿ ನಾಟಕೋತ್ಸವ, ಮಕ್ಕಳ ನಾಟಕ ಸ್ಪರ್ಧೆಗಳು, ತ್ರಿಭಾಷಾ ನಾಟಕೋತ್ಸವ(ಕನ್ನಡ, ತುಳು, ಕೊಂಕಣಿ) ಪಂಚಭಾಷಾ ನಾಟಕೋತ್ಸವ (ಕನ್ನಡ, ತುಳು, ಕೊಂಕಣಿ, ಕೊಡವ, ಮಲಯಾಳಂ)....

ಬಹುಮುಖ ಪ್ರತಿಭೆಯ ಕಾಸರಗೋಡು ಚಿನ್ನಾ ರವರಿಗೆ ಶಾರ್ಜಾ ಕರ್ನಾಟಕ ಸಂಘದ ಕಾರ್ಯಕ್ರಮಕ್ಕಾಗಿ ಅವರ ಭೇಟಿಯ ಈ ಸಂದರ್ಭದಲ್ಲಿ ಗಲ್ಫ್ ಕನ್ನಡಿಗರ ಅಭಿನಂದನೆಗಳು.

ಅಭಿನಂದನೆಯೊಂದಿಗೆ,

 "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ಗಣೇಶ್ ರೈ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

  ತಮ್ಮ

 

ತಮ್ಮ ಜೀವನವನ್ನು ಕಲಾಸಾಧನೆಗಾಗಿ ಮೀಸಲಿಟ್ಟಿರುವ ಚಿನ್ನಾ ಕಾಸರಗೋಡು ಅವರ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.  ಕಡಲತಡಿಯ ಪುಟ್ಟ ಊರಿನಲ್ಲಿದ್ದೂ ಕಡಲಾಚೆಗೂ ತಮ್ಮ ಸಾಧನೆಯ ಕ೦ಪನ್ನು ಹರಡಿರುವ ಇವರ ಭವಿಷ್ಯ ಇನ್ನಷ್ಟು  ಉಜ್ವಲವಾಗಿ, ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ.

 

ಮೃಣಾಲಿನಿ ಉದಯ ಕುಮಾರ್

Syndicate

Syndicate content