- ಗೋಪೀನಾಥ ರಾವ್
ಈ ಬಾರಿ ಲಂಡನ್ನಿನಲ್ಲಿ ನಡೆದ ವಿಶ್ವ ಜ್ಯೂನಿಯರ್ ಬೂಗಿವೂಗಿ ಸ್ಪರ್ಧೆಯಲ್ಲಿ ಯು ಎ ಇ ನಿವಾಸಿ ಕನ್ನಡ ಹುಡುಗಿ ಕುಮಾರಿ ಅನೂಷಾ ಪ್ರಥಮ ಸ್ಥಾನ ಗಿಟ್ಟಿಸಿ ವಿಶ್ವಮಾನ್ಯಳಾಗಿದ್ದಾಳೆ.
ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಾವಿತ್ರಿ ಉದಯ್ ದಂಪತಿಗಳ ಮಗಳಾದ ಒಂಭತ್ತರ ಹರೆಯದ ಕುಮಾರಿ ಅನೂಷಾ ತನ್ನ ಐದನೇ ವರ್ಷದಿಂದ ನೃತ್ಯಗುರು ಶ್ರೀ ಹರಿಹರನ್ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಕೈಗೊಂಡು ಕಠಿಣ ಸ್ಪರ್ಧೆಯ ಈ ಶೃಂಖಲೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಈ ಬಹುಮಾನ ಗೆದ್ದುಕೊಂಡಿದ್ದಾಳೆ.
ಶಾರ್ಜಾ ಅವರ್ ಓನ್ ಇಂಗ್ಲಿಷ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಅನೂಷಾ ನೃತ್ಯವಲ್ಲದೆ ಸಂಗೀತ, ಕಲೆ, ಪೈಂಟಿಂಗ್, ಛದ್ಮ ವೇಷ ಮತ್ತು ಆಟೋಟ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಬಹುಮಾನಗಳನ್ನು ಗೆದ್ದಿರುತ್ತಾಳೆ. ಈ ವರ್ಷ ಜನವರಿಯಲ್ಲಿ ಅಬುಧಾಬಿಯಲ್ಲಿ ನಡೆದ ಬೂಗಿ ವೂಗಿ ಗಲ್ಫ್ ಪ್ರಾಂತ್ಯದ ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳೆರಡರಲ್ಲೂ ವಿಜೇತೆಯಾದ ಅನೂಷಾ, ಪೀಪಲ್ಸ್ ಸೆಂಟರ್ ಲೀಸ್ಟರ್, ಇಂಗ್ಲೆಂಡಿನಲ್ಲಿ ಸೆಪ್ಟೆಂಬರ್ ನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದು, ಸೀನಿಯರ್ ವಿಭಾಗದಲ್ಲಿ ಯು ಕೆ ಯ ಸ್ಪರ್ಧಿಗೆ ಪ್ರಥಮ ಸ್ಥಾನ ಸಿಕ್ಕಿತ್ತು. ಫೈನಲ್ ಹಂತದಲ್ಲಿ ಯು ಎ ಇ, ಯು ಕೆ, ಯು ಎಸ್ ಎ ಹಾಗೂ ದಕ್ಷಿಣ ಆಫ್ರಿಕಾದ ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ತಲಾ ನಾಲ್ಕು ಸ್ಪರ್ಧಿಗಳು ಭಾಗವಹಿಸಿದ್ದರು.
ಕೇವಲ ಒಂಭತ್ತರ ಹರೆಯದಲ್ಲಿ ಈ ಉತ್ತಮ ಪ್ರದರ್ಶನ ನೀಡಿರುವ ಅನೂಷಾ ಇದೀಗ ತನಗೆ ತಾನೇ ಕೊರಿಯಾಗ್ರಫಿ ಮಾಡಿಕೊಳ್ಳುತ್ತಿದ್ದು ನೃತ್ಯಪ್ರಪಂಚದಲ್ಲಿ ಭರವಸೆಯ ಕಲಾವಿದೆಯಾಗಿ ರೂಪುಗೊಳ್ಳುತ್ತಿದ್ದಾಳೆ. ಅವಳ ಪ್ರತಿಭೆಗೆ ಸೂಕ್ತ ಅವಕಾಶ ಹಾಗೂ ಇನ್ನಷ್ಟು ಮಾನ್ಯತೆಗಳು ದೊರಕಲಿ ಎಂದು ಹಾರೈಸುತ್ತಾ ಕನ್ನಡಧ್ವನಿ ಬಳಗ ಕುಮಾರಿ ಅನೂಷಾಳನ್ನು ಅವಳ ಈ ಉಜ್ವಲ ಸಾಧನೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತದೆ.
ಅಂತೆಯೇ ಮಗಳ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಮತ್ತು ನಿರಂತರ ಪ್ರೋತ್ಸಾಹವನ್ನಿತ್ತು ಇತರರಿಗೆ ಮಾದರಿಯಾಗಿರುವ ಉದಯಕುಮಾರ್ ದಂಪತಿಗಳನ್ನೂ ಕನ್ನಡಧ್ವನಿ ಬಳಗ ಅಭಿನಂದಿಸುತ್ತದೆ.
| Attachment | Size |
|---|---|
| anusha.jpg | 20.6 KB |









ಅನೂಷಾ
ಅನೂಷಾ ಹಾಗೂ ಅವಳ ಹೆತ್ತವರಿಗೆ ಅಭಿನ೦ದನೆಗಳು. ವಿಶ್ವಕನ್ನಡಿಗರೆಲ್ಲಾ ಹೆಮ್ಮೆ ಪಡುವ೦ತಹಾ ಸಾಧನೆಯಿದು. ಮು೦ದೆಯೂ ಇ೦ತಹ ಹಲವು ಪ್ರಶಸ್ತಿಗಳು ಅನೂಷಾಳಿಗೆ ಲಭಿಸಲಿ ಎ೦ದು ಹಾರೈಸುತ್ತೇವೆ.
ಮೃಣಾಲಿನಿ ಕುಮಾರ್, ಉದಯ ಕುಮಾರ್ ಮತ್ತು ಏಕತಾ
ಆಕ್ಲ್ಯಾ೦ಡ್, ನ್ಯೂಜೀಲ್ಯಾ೦ಡ್