ಬಾಸು - ಸೊಳ್ಳೆ
tvsnew.JPG

- ತಳಕು ಶ್ರೀನಿವಾಸ, ಮುಂಬೈ


ನಾನೊಂದು ಸೊಳ್ಳೆ
ಎಲ್ಲರ ರಕ್ತವ ಹೀರಿ ಬದುಕುವ
ಹಿಡಿಮುಷ್ಟಿಗಳ ಏಟಿಗೆ ತತ್ತರಿಸಿ ಬೀಳುವ
ಸೊಳ್ಳೆ - ಕೆಲವರ ಮಾತಲಿ ತೊಳ್ಳೆ
ನನ್ನದು ರಕ್ತಾಬೀಜಾಸುರನ ಸಂತತಿ
ನನ್ನ ಕೊಂದರೇನು ...

ನನ್ನ ಸಂತತಿ ಅವರ ಸಂತತಿ ನಿಮ್ಮ ಬಿಡುವರೇನು?

ನರಪೇತಲ,
ರಕ್ತ ಮಾಂಸ ಹೀನ
ದಷ್ಟಪುಷ್ಟ ತನುಸಿರಿ
ಹಣ್ಣು ಹಂಪಲು ತಿಂಡಿ ತಿನಿಸು
ಸಿಹಿಯಾದರೇನು ಕಹಿಯಾದರೇನು
ಯಾವುದನೂ ನಾ ಬಿಡದಿರೆನು
ಎಲ್ಲವನೂ ಕ್ಷಣದಲಿ ಹೀರಿ ಬಿಡುವೆನು

ಕೇಳುವಿರೇ
'ನಿನಗ್ಯಾಕೀ ದುರುಬುದ್ಧಿ?
ಜಗವ ಹೀರಿ ಹಿಪ್ಪೆ ಮಾಡುವ ಕೆಟ್ಟಬುದ್ಧಿ'
ನಾನೇನು ಮಾಡಲಿ
ನನಗೆ ಕಲಿಸಿದ ಗುರುಗಳ ಕೇಳಿ
ಹೀರುವುದೇ ನಮ್ಮ ಕಸುಬು
ಹೀರದಿದ್ದರೆ ಕೊಡಬೇಕು ಸಬೂಬು
ಅವರೇ ನನ್ನ ಗುರು
ಹೀರುವುದೇ ಅವರ ಕಸುಬು
ನನಗೂ ಇಹರು ಹೆಂಡತಿ ಮಕ್ಕಳು
ಇನ್ಯಾರಿಹರು ಅವರನು ಸಾಕಲು

ನಮಗಿಬ್ಬರನೂ
ಮೇಲೇರಿಸಿದವರು ನೀವಲ್ಲವೇ?
ನಿಮ್ಮನು ಕಾಯಲು ನಿಯಮಿಸಿದುದು ನಮ್ಮನಲ್ಲವೇ?
ಕಾಯುವಾಗ ತರಲೆಗಳಿಗೆ
ಶಿಕ್ಷಿಸಬೇಕಲ್ಲವೇ?

ಏಕ್ ಮಚ್ಛರ್ ಆದ್ಮೀಕೊ ಹಿಜಡಾ ಬನಾ ದೇಗ
ಬಾಸು ಸೊಳ್ಳೆ
ನಾನವನ ಜವಾನ
ಇಬ್ಬರಿಗೂ ಒಬ್ಬನೇ ಯಜಮಾನ
ಅವನೇ ನಮ್ಮ ಅನ್ನದಾತ
ಅವನ ಮಾತ ಕೇಳದಿರಲಾದೀತ?

Syndicate

Syndicate content