ಭಾಜಪ-ಜಪ
srinivas.jpg

-ತಳಕು ಶ್ರೀನಿವಾಸ, ಮುಂಬೈ 

(ಇದೊಂದು ಅಣುಕು ಕವಿತೆ - ಕವಿ ಕೆ.ಎಸ್.ನ ಅವರ ಕ್ಷಮೆ ಕೋರಿ)

ಮದುವೆಯಾಗಿ ವಾರವಿಲ್ಲ

ನೋಡಿರಣ್ಣ ಹೇಗಿದೆ

ಕುಮಾರು ಕೂಗಿದಾಗಲೆಲ್ಲ ಓಡಿ ಬರುವ

ಯಡ್ಡಣ್ಣ ಹಿಂದೆ ಮುಂದೆ ನೋಡದೆ

ದೂಸರ ಮಾತನಾಡದೇ

ಅಪ್ಪ ಹೇಳಿದ ಆಲದ ಮರಕೆ

ಜೋತು ಬಿದ್ದ ಪೋರ

ಕುಮಾರಿ ಯಡ್ಡಿ ಕಥೆಯ ಕೇಳಿದೆ

ಮರು ಮಾತನಾಡದೇ

ಬಿದ್ದು ಬಿದ್ದು ಅಳುತಿಹ ನಾನು

ಬೊಜ್ಜದ ಸಜ್ಜಪ್ಪ ತಿನ್ನುತಿಹೆನು

ಭಾಜಪ ಜಪ-ಮರುಮದುವೆ

ಆಹಾ ನನ್ ಮದ್ವೆಯಂತೆ
ತುಂಬಾ ಜನ ಬರ್ತಾರಂತೆ
ಗೌಡ್ರಿಗೆ ಮಾತ್ರ ಸಂತೋಷ ಇಲ್ಲಂತೆ
ಮಗ್ನಿಗೇನೋ ಹೇಳಿದ್ರಂತೆ
ಮದ್ವೆ ಆಗಿ ನೋಡಂತೆ
ವಾರ ಆದ್ಕೂಡ್ಲೆ ಬೇಡ ಅಂತ ಹೇಳಿ
ಸೋಡಾಚೀಟಿ ಕೊಡು ಅಂದ್ರಂತೆ

Syndicate

Syndicate content