ಪ್ರವಾಸ ಲೇಖನ-3
-ನಳಿನಿ ಸೋಮಯಾಜಿ
ಹೆಸರೇ ಹೇಳುವಂತೆ ಗಣಪನು ಕಲ್ಲುಗಳ ಮಧ್ಯೆ ಈ ಪ್ರದೇಶ ದಲ್ಲಿದ್ದಾನೆ. ಬ್ರಹ್ಮಾವರದಿಂದ ಬಾರಕೂರ ರಸ್ತೆ ಯಲ್ಲಿ ಮುಂದುವರೆದಾಗ ಬಾರಕೂರಿನಿಂದ ಸ್ವಲ್ಪ ಮುಂದೆ ಸಿರಿಯಾರ ಮತ್ತು ಸಾಯಿಬರಕಟ್ಟೆ ನಡುವೆ ಕುದುರೆಬೆಟ್ಟು ಎಂಬಲ್ಲಿ ಎಡ ಭಾಗದಲ್ಲಿ ತಿರುಗಿದರೆ ಕಲ್ಲುಗಣಪತಿಗೆ ಹೊಗುವ ಮಣ್ಣಿನರಸ್ತೆ ಸಿಗುತ್ತದೆ. ಈ ರಸ್ತೆಯಲ್ಲಿ ಮುಂದುವರೆದರೆ ಒಮ್ಮೆಗೆ ಕಲ್ಲುಗಳ ಗುಡ್ಡ ನಮಗೆ ಕಾಣುತ್ತದೆ.
ಬಯಲುಗಳ ಮಧ್ಯೆ ಈ ರೀತಿಯ ಕಲ್ಲುಗಳು ಒಂದಕ್ಕೊಂದು ತಾಗಿ ಸುಂದರ ತಾಣ ಒಂದನ್ನು ಪ್ರಕೃತಿವುಂಟು ಮಾಡಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಇಲ್ಲಿ ದೊಡ್ಡ ಕಲ್ಲುಗಳು ಒಂದಕ್ಕೊಂದು ಆಸರೆಯಾಗಿ ಗುಹೆಯ ನಿರ್ಮಾಣ ಮಾಡಿದೆ. ಹತ್ತಲು ಸುಲಭವಾಗಿದ್ದು ಗುಡ್ಡದ ತುದಿಯವರೆಗೆ ಹೋಗಬಹುದಾಗಿದೆ.
ಗುಡ್ಡದ ಒಂದು ಭಾಗದಲ್ಲಿ ಮೇಲೆ ಹತ್ತಿ ಹೋಗಲು ಮೆಟ್ಟಲುಗಳಿವೆ.ಇದು ಅಲ್ಲಿಯ ಸಣ್ಣ ಗುಡಿಗೆ ಹೋಗುವ ದಾರಿಯಾಗಿದೆ. ದೇವರ ಮೂಲದಲ್ಲಿ ಗಣಪತಿ, ಈಶ್ವರ ಹಾಗೂ ದೇವಿಯ ಉದ್ಭವವಾಗಿದೆ, ಹಾಗು ಇದು ತುಂಬಾ ಕಾರಣಿಕವಾದ ಸ್ಥಳ ಎಂಬುದು ಈ ಸ್ಥಳದ ಜನಾರ್ದನ ಆಡಿಗರ ಅಂಬೋಣ. ಈಗಲೂ ಅಲ್ಲಿ ದೇವ , ದೇವಿಯರ ವಿಗ್ರಹಗಳಿವೆ. ಗಣೇಶನ ಸಣ್ಣ ವಿಗ್ರಹವಿದ್ದರೂ ಮೂಲ ದೇವರು ಗುಡ್ಡೆಟ್ಟು ಪ್ರದೇಶಕ್ಕೆ ಹೋಗಿ ನೆಲೆಸಿದ್ದಾನೆ. ಇದಕ್ಕೊಂದು ಕಥೆಯನ್ನೇ ಅಡಿಗರು ಹೀಗೆ ಹೇಳುತ್ತಾರೆ.
ಗುಡ್ಡೆಟ್ಟಿನಿಂದ ಭಕ್ತರೊಬ್ಬರು ಗಣೇಶನ ದರ್ಶನಕ್ಕೆಂದೇ ಯಾವಾಗಲೂ ಕಲ್ಲುಗಣಪತಿಗೆ ಬರುತ್ತಿದ್ದರಂತೆ. ವಯಸ್ಸಾದ ಆವರಿಗೆ ಗುಡ್ಡಹತ್ತಲು ಕಷ್ಟವಾಗುತ್ತಿತ್ತಂತೆ. ಅವರ ಭಕ್ತಿಗೆ ಮೆಚ್ಚಿ ದೇವರು ತಾನೇ ಗುಡ್ಡೆಟ್ಟಿನಲ್ಲಿ ಬಂದು ನೆಲೆಸುವುದಾಗಿ ಆತನ ಕನಸಿನಲ್ಲಿ ಬಂದು ಹೇಳಿದನಂತೆ. ಅದೇ ರೀತಿ ತಾನು ಗುಡ್ಡೆಟ್ಟಿಗೆ ಹೋಗಿ ನೆಲೆಸಿದ್ದಾನೆ ಎನ್ನುತ್ತಾರೆ ಅಲ್ಲಿನ ಜನ.
ಗುಡ್ಡದ ಹಿಂಬಾಗದಲ್ಲಿ ನದಿಯೊಂದು ಹರಿಯುತ್ತದೆ. ಗುಡ್ಡದ ಒಳಗೆ ಸ್ಥಳ ತಂಪಾಗಿದ್ದು ಕುಳಿತು ವಿಶ್ರಮಿಸಲು ಬೇಕಾದಷ್ಟು ಸ್ಥಳವಿದೆ. ಪರ್ವತಾರೋಹಣ ಮಾಡುವ ಸಣ್ಣಮಕ್ಕಳಿಗೆ ಇದು ಮೊದಲ ತಾಣ ಎಂದರೆ ತಪ್ಪಾಗದು. ಇತ್ತೀಚೆಗೆ ಶಾಲಾ ಮಕ್ಕಳ ಒಂದು ಪ್ರವಾಸ ತಾಣವು ಇದಾಗಿದೆ. ಕಲ್ಲುಗಣಪತಿ ದೇವಸ್ಥಾನಕ್ಕೆ ಹೋಗಲು ಮೆಟ್ಟಲುಗಳಿವೆ. ಅಡಿಗ ಕುಟುಂಬದವರಾದ ಶ್ರೀಯುತ ಪುರುಷೊತ್ತಮ, ಶ್ರೀಧರ ಮತ್ತು ಲಕ್ಷ್ಮೀಶ ಅಡಿಗರ ಸೇವಾರ್ಥವಾಗಿದೆ. ಕಲ್ಲು ಗಣಪತಿ ಪ್ರದೇಶವು ಜನಾರ್ದನ ಅಡಿಗ ಕುಟುಂಬಕ್ಕೆ ಸೇರಿದೆ.










Very Good article on Sri
Very Good article on Sri Kshetra Kalluganapathy. Hats off to your effort to know the people on this place & thanks a lot. Keep it up & go ahead with some other new taanaas.