- ಗುರು ಬಬ್ಬಿಗದ್ದೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಒಮ್ಮಿಂದೊಮ್ಮೆಲೇ ಸಂತೋಷದಲ್ಲಿ ತೇಲಾಡುತ್ತಾರೆ
ತಲೆಯ ಮೇಲೆ ಆಕಾಶವೇ ಬಿದ್ದಂತೆ ವರ್ತಿಸುತ್ತಾರೆ
ಯಾರ್ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಾರೆ
ಇನ್ಯಾರನ್ನೋ ಅದಕ್ಕಾಗಿ ಶಿಕ್ಷಿಸುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಹಕ್ಕಿಯಂತೆ ಹಾರಾಡುತ್ತಾರೆ
ರೆಕ್ಕೆ ಕಳಚಿ ಒದ್ದಾಡುತ್ತಾರೆ
ನಂಬಿದವರಿಗೆ ಕೈ ಕೊಡುತ್ತಾರೆ
ಸಣ್ಣ ವಿಷಯಗಳಿಗೆ ಕೋಪಗೊಳ್ಳುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ತಮಗರಿವಿಲ್ಲದೇ ಪ್ರೀತಿಯಲ್ಲಿ ಬೀಳುತ್ತಾರೆ
ಆ ಪ್ರೀತಿಯನ್ನೇ ದೇವರೆನ್ನುತ್ತಾರೆ
ಕೊನೆಗೂ ಅವನಿಗೆ ಐ ಲವ್ ಯು
ಹೇಳಲಾರದೇ ಹೋಗುತ್ತಾರೆ
ಅಪ್ಪ ನೋಡಿದ ಹುಡುಗನನ್ನು ಮದುವೆಯಾಗುತ್ತಾರೆ
ಓ ಗೆಳೆಯ,ಈ ಹುಡುಗಿಯರೇ ಹೀಗೆ
ಕನಸುಗಳ ಗೋಪುರ ಕಟ್ಟುತ್ತಾರೆ
ಮನಸುಗಳ ಮಹಡಿಯನ್ನೇರುತ್ತಾರೆ
ಸ್ವಾಭಿಮಾನದ ಹುಸಿ ನಾಟಕವನ್ನಾಡುತ್ತಾರೆ
ಸಿಹಿಯಲ್ಲಿ ಕಹಿಯನ್ನು ಬೆರೆಸುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ತರಗತಿಯಲ್ಲಿ ಮೊದಲ ಸಾಲಿನಲ್ಲಿ ಕುಳಿತಿರುತ್ತಾರೆ
ಕಲಿಯುಗದ "ಗಾಂಧಿ" ತಾವೇ ಎನ್ನುತ್ತಾರೆ
ಮಾತೆತ್ತಿದರೆ ಅಭ್ಯಾಸ ಅಭ್ಯಾಸ ಎನ್ನುತ್ತಾರೆ
ತುಂಟ ನಗುವಿನಲ್ಲಿ ಲೋಕ ಮರೆಸುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಮನೆಯಲ್ಲಿ ಮೈ ಪೂರ್ತಿ ಬಟ್ಟೆ ಧರಿಸುತ್ತಾರೆ
ಬೀದಿಯಲ್ಲಿ ಬಿಚ್ಚೋಲೆ ಗೌರಮ್ಮನಂತಿರುತ್ತಾರೆ
ಹುಡುಗರನ್ನು ಕಂಡಾಗ ಅನಗತ್ಯ ನಾಚುತ್ತಾರೆ
ತಾವು ನಕ್ಕು ಹುಡುಗರನ್ನು ಅಳಿಸಿಬಿಡುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಕಾಲೇಜಿನಲ್ಲಿ ಬೇಗನೆ ಗ್ರಂಥಾಲಯಗಳಿಗೆ ಬರುತ್ತಾರೆ
ಕೋಶ ತಿರುವಿ ಭಾಷೆ ಕಲಿಯುತ್ತಾರೆ
ಪ್ರೀತಿ ಪ್ರೇಮಗಳನ್ನು ದ್ವೇಷಿಸುತ್ತಾರೆ
ಮನದಲ್ಲಿ ಯಾರನ್ನೋ ಪ್ರೀತಿಸುತ್ತಿರುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಬೇರೆಯವರಿಗೆ ಧಾರಾಳ ಉಪದೇಶ ನೀಡುತ್ತಾರೆ
ಕೊನೆಗೂ ಆತನೇ ನನ್ನ ಪ್ರೇಮಿ ಎನ್ನಲಾರದೆ ಕೊರಗುತ್ತಾರೆ
ತಮ್ಮ ಜೀವನಕ್ಕೆ ತಾವೇ ಮುಳ್ಳಾಗುತ್ತಾರೆ
ಪಾಲಿಗೆ ಬಂದದ್ದು ಪಂಚಾಮ್ರತ ಎನ್ನುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ









