-ಇರ್ಶಾದ್ ಮೂಡಬಿದ್ರಿ, ದುಬೈ
ಯಾವುದೇ ಒಂದು ಧರ್ಮವಾಗಲಿ ಅದು ಹೊಡೆ ಬಡಿ ಕೊಲ್ಲು ಎಂದು ಕಲಿಸುವುದಿಲ್ಲ. ಪರಸ್ಪರ ಪ್ರೀತಿ-ಸಹಬಾಳ್ವೆಯನ್ನೇ ಕಲಿಸುತ್ತದೆ. ಅದು ಜನರಲ್ಲಿ ಶಾಂತಿಯನ್ನೇ ಹರಡು ಎಂದು ಬೋಧಿಸುತ್ತದೆ. ಆದರೆ ಇವತ್ತು ನಮ್ಮ ಧರ್ಮಗಳಲ್ಲಿ ಎರೆಡು ವರ್ಗಗಳು ಹುಟ್ಟಿಕೊಂಡಿವೆ. ಅದು ಶಾಂತಿಯನ್ನು ಬಯಸುವುದಿಲ್ಲ. ಅಶಾಂತಿಯನ್ನೇ ಬಯಸುತ್ತಾರೆ. ಉದಾಹರಣೆಗೆ ನಮ್ಮ ಮುಸ್ಲಿಮರಲ್ಲಿಯೇ ಎರೆಡು ವರ್ಗಗಳಿವೆ. ಒಂದು ವರ್ಗ ಕುರಾನ್ ತತ್ವಗಳನ್ನು ಅನುಸರಿಸುತ್ತಾ ಪ್ರವಾದಿಗಳ ಆದರ್ಶವನ್ನು ಪಾಲಿಸುತ್ತಾ ಸಾಗಿದರೆ ಇನ್ನೊಂದು ವರ್ಗ ಇಸ್ಲಾಂ ಧರ್ಮವನ್ನೇ ರಕ್ಷಣೆಗೆ ಹಿಡಿದಂತೆ ವರ್ತಿಸುತ್ತಿದ್ದಾರೆ. ಉಗ್ರವಾದವನ್ನೇ ಬೆಂಬಲಿಸುವ ಇವರು ಅಪಹರಣ, ಧಾಳಿ ಬಾಂಬ್ ಗಳೆಂದು ಇಸ್ಲಾಮಿನ ಮೂಲಭೂತ ತತ್ವಗಳನ್ನೇ ಕೊಲ್ಲುತ್ತಿದ್ದಾರೆ. ಇದು ಇಸ್ಲಾಮಿನ ದೃಷ್ಟಿಯಲ್ಲಿ ಹರಾಮ್ ಎನಿಸಿದೆ. ಇವತ್ತು ನಮ್ಮ ಜಿಲ್ಲೆಯ (ದಕ್ಷಿಣ ಕನ್ನಡ) ಉದಾಹರಣೆ ತೆಗೆದುಕೊಂಡರೆ ಇಲ್ಲಿ ಬಹುತೇಕ ಹಿಂದೂಗಳಿದ್ದಾರೆ. ಅವರ ಜೊತೆಗೆ ಮುಸ್ಲಿಮರು, ಕ್ರಿಶ್ಚಿಯನ್ನರು ಬೆರೆತುಕೊಂಡಿದ್ದಾರೆ. ನೂರಾರು ವರ್ಷಗಳಿಂದ ಅನ್ಯೋನ್ಯವಾಗಿ ಬಾಳಿಕೊಂಡು ಬಂದಿದ್ದಾರೆ. ವ್ಯಾಪಾರವಾಗಲಿ, ಹಬ್ಬಹರಿದಿನಗಳಾಗಲಿ ಅವರ ಜೊತೆಗೆ ನಾವು ಸಮಾನವಾಗಿ ಪಾಲ್ಗೊಂಡಿದ್ದೇವೆ. ಆದರೆ ಇದನ್ನು ಸಹಿಸದ ಒಂದು ವರ್ಗ ವಿಷಬೀಜ ಬಿತ್ತುತ್ತಿದೆ. ಧರ್ಮದ ರಕ್ಷಣೆ ಅನ್ನುವುದು ತಮ್ಮ ‘ಗುತ್ತಿಗೆ’ ಎಂಬಂತೆ ವರ್ತಿಸುತ್ತಿರುವ ಇವರು ಯಾವುದೆ ವಿನಾಶಕ್ಕೆ ಸಿದ್ಧರಾಗುತ್ತಾರೆ. ಸಮಾಧಾನದ ಸಂಗತಿ ಎಂದರೆ ಬಹುತೇಕ ಹಿಂದೂಗಳು ಇದನ್ನು ವಿರೋಧಿಸುತ್ತಾರೆ.
ಹಿಂದೂ ಧರ್ಮದ ರಕ್ಷಣೆ ಮಾಡುವ ಹೊಣೆ ಹೊತ್ತಿರುವ ಇವರಿಗೆ ಧರ್ಮದ ಅನೇಕ ವಿಷಯಗಳು ಕಣ್ಣಿಗೆ ಕಾಣುವುದಿಲ್ಲ. ಬಡತನ, ರೈತನ ಆತ್ಮಹತ್ಯೆ, ವರದಕ್ಷಿಣೆಯ ಪಿಡುಗು, ಮೈಮಾರಿ ಬದುಕುವ ಹೆಣ್ಣುಗಳ ದುಃಖ ಇವರಿಗೆ ಗೋಚರಿಸುವುದೇ ಇಲ್ಲ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಯ ಅವಸ್ಥೆ ನೋಡಿ. ಬ್ರಷ್ಟಾಚಾರದ ಕಳಪೆ ಕಾಮಗಾರಿಗೆ ಅವು ಎದ್ದು ಹೋಗಿವೆ. ಹೊಂಡಗಳ ನಡುವೆ ವಾಹನ ಚಲಾಯಿಸುವುದೇ ಕಷ್ಟ. ಆದರೆ ಇವರು ಕಳಪೆ ಕಾಮಗಾರಿಯನ್ನು ವಿರೋಧಿಸುವುದಿಲ್ಲ. ಅಲ್ಲಿಯ ಹಳ್ಳ-ಹೊಂಡಗಳನ್ನು ಕನಿಷ್ಟ ಮಣ್ಣು ಹಾಕು ಮುಚ್ಚುವುದೂ ಇಲ್ಲ, ಅದು ಅವರಿಗೆ ಸಮಸ್ಯೆಯಾಗಿ ಕಾಣುವುದೇ ಇಲ್ಲ.
ಇವತ್ತು ದಕ್ಷಿಣ ಕನ್ನಡದ ಕ್ರೈಸ್ತರು ನಾಡಿಗೆ ದೊಡ್ಡ ದೇಣಿಗೆಯನ್ನೇ ನೀಡಿದ್ದಾರೆ. ನೂರಾರು ವಿದ್ಯಾಕೇಂದ್ರಗಳು, ಮಿಷನ್ ಆಸ್ಪತ್ರೆಗಳು, ವೃದ್ಧಾಶ್ರಮಗಳು ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿವೆ. ಆದರೆ ಆ ಋಣಕ್ಕೆ ಇಂದು ಏಸುಕ್ರಿಸ್ತನ ಪ್ರತಿಮೆಯ ಕೈಕಾಲುಗಳನ್ನೇ ಕತ್ತರಿಸಿ ಹಾಕಿದ್ದಾರೆ. ಮೇರಿ ಮಾತೆಗೆ ಕಲ್ಲು ಹೊಡೆದು ಹಲ್ಲೆ ಮಾಡಿದ್ದಾರೆ. ಲೋಕ ಕಲ್ಯಾಣಕ್ಕೆ ಪ್ರಾರ್ಥಿಸುವ ಕ್ರೈಸ್ತ ಸಹೋದರರಿಗೆ ಹಿಂಸೆ ನೀಡಿದ್ದಾರೆ. ಇದು ನಿಜಕ್ಕೂ ದುಃಖದಾಯಕ ಸಂಗತಿ. ಇಂತಹ ಘಟನೆಗಳು ಮುಂದೆ ಘಟಿಸಬಾರದು. ಮುಸ್ಲಿಮರ ಗೋಹತ್ಯೆ, ಕ್ರಿಶ್ಚಿಯನ್ನರ ಮತಾಂತರ ಅಪರಾಧವಾದರೆ ಅದಕ್ಕೆ ಮುಕ್ತ ಚರ್ಚೆಯಾಗಬೇಕು, ಮತ್ತು ನೇರಮಾತುಗಳಿಂದ ದಿಟ್ಟವಾಗಿ ಎದುರಿಸಿ ವಿರೋಧಿಸುವ ಧೋರಣೆ ತಾಳಬೇಕು. ಅದಕ್ಕೆ ಸದಾ ಸ್ವಾಗತವಿದೆ.
ಮುಸ್ಲಿಂ ಧರ್ಮ ಇನ್ನೊಂದು ಧರ್ಮವನ್ನು ಗೌರವಿಸು ಎಂದರೆ ಕ್ರೈಸ್ತಧರ್ಮ ನಿನ್ನ ವೈರಿಗಳನ್ನು ಪ್ರೀತಿಸು ಎನ್ನುತ್ತದೆ. ಹಿಂದೂ ಧರ್ಮ -ಕಲಬೇಡ ಕೊಲಬೇಡ ಎನ್ನುತ್ತದೆ. ಈ ತತ್ವಗಳನ್ನು ನಾವು ಪಾಲಿಸಬೇಕಾಗಿದೆ. ಸಾರೇ ಜಹಾಂ ಸೇ ಅಚ್ಛಾ ಎನ್ನುವ ನಮ್ಮ ದೇಶ ಕುವೆಂಪು ಅವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಆದರೆ ಇಂದು ಆ ತೋಟದ ಹೂವುಗಳ ಮೇಲೆ ಮತಾಂಧತೆಯ ಕೀಟಗಳು ಧಾಳಿ ಮಾಡಿವೆ. ಅದನ್ನು ಹೀಗೇ ಬಿಟ್ಟರೆ ನಮ್ಮ ಸಂಪೂರ್ಣ ತೋಟವನ್ನೇ ಹಾಳುಗೆಡವುತ್ತವೆ. ಈ ಕೀಟಗಳನ್ನು ನಾವು ದೂರಮಾಡಬೇಕು. ಸುಂದರ ತೋಟದ ಕಂಪು ಇಂಪು ಸದಾ ಹಸಿರಾಗಿರಬೇಕು. ನಮ್ಮ್ ಹೋದೋಟ ಮತ್ತೊಮ್ಮೆ ನಗಬೇಕು. ಅದಕ್ಕೆ ಹಿಂದೂ ಕ್ರೈಸ್ತ ಮುಸಲ್ಮಾನರು ಜೊತೆಗೂಡಬೇಕು. ಬನ್ನಿ ನಾವೆಲ್ಲರೂ ಜೊತೆಯಾಗಿ ನಡೆಯೋಣ, ಕೈಹಿಡಿದು ದೇಶಕಟ್ಟುವ ಪಥದಲ್ಲಿ ಸಾಗೋಣ. ಜೈಹಿಂದ್, ಜೈ ಕರ್ನಾಟಕ ಮಾತೆ.
(ಕಳೆದ ವಾರ ದುಬೈಯಲ್ಲಿ ಸರ್ವಮತ ಖಂಡನಾ ಸಭೆಯಲ್ಲಿ ಲೇಖಕರು ಮಂಡಿಸಿದ ಭಾಷಣದ ಸಾರ)









Naanu eno elli obba REAL
Naanu eno elli obba REAL manushya sigtane anta ee article odide ! But, I was really shocked , the way it is written ! Hello Mr. problem is not with any religion, try to understand this. Problem is with people supporting SIMI, Terrorists just because of they're from your community. Already it is supported in this article saying GOHATYA and CASTE CONVERSION are open for discussion, my foot ! If anything happens to Hindus, it is open for discussion but same happenes to other communities, that is JUSTIFIED! Wake-up man, unfortunate thing if whether it is actor, writer or common man justify each of these TERROR ATTACKS, after eating this country's money, food and s...g here but the allegiance is for thie religion irrespective of country. WE ARE NOT LIKE THEM, WE PLACE OUR STATE AND COUNTRY ABOVE THE RELIGION !
For that if some Gandhi had to be killed, so be it ! Don't spread your bullshit !
Jai Karnataka, JAI HIND !
Thank you Ms. Mranalini. I
Thank you Ms. Mranalini. I think you have missed the point that he is talking about Al Qaida only in the first paragraph. While talking about the Bajrang issue, he is singling them out and not referring to any of the Indian terrorist organisations. Try to read between the lines before trusting each and every one.
sarva mata sahabaalveyannu
sarva mata sahabaalveyannu pratipaadisuva bhaashanada saara haagu adara bagge banda vimarshegalannu Odide. Lekhana ugravaadada viruddavaagiddaru adannu jana sariyaagi odade kevala ondu ghataneya hinneleyalli arthaisikondu katu maatugalannu barediddaare. E lekhanada modala para muslim ugravaadigalannu virodhisiruvudu Irshad avara souhaardamaya vyaktitvavannu pratibimbiside. Taavu beledu banda sthala pavitravaagirabeku, Sneha, sahane mattu mukta vichaara vinimayadinda samasyegalannu parihaara maadabeku ennuva manobhaava prashansaneeya. Kaddiyannu guddavaagisi himsegilidalli samasye jatilavaaguttadeye horatu parihaara sigadu. Kannige kannu keluva pravruttiyinda ellaru kurudaraaguvudu satya. Mataantarada samasyeya hindiruva badatana, ajnaana mattu asahaayakatanagalannu vishleshisi adakke parihaara kandu hididalli samasyeye illavaaditu. Pratiyondu dharmada naayakaru anuyaayigala kashtagalige sariyaagi spandisidalli, bereyavara amishagalige marulaaguva sandharbhave baradu.
ಮೃಣಾಲಿನಿ ಉದಯ ಕುಮಾರ್
yake hindugalu protest
yake hindugalu protest madidre mathra thappu ulidhavru yenu madidru sariya? adhannu hindhugalu sahisuthirabeka? you are so biased. kidi illadhe benki baruvudilla. yake mathanthara madabeku? sumne yaru church halugedavudilla avru thappu madidhare adke meethi meeridhakke yellaru protest madidhu. christians yenu madidhare adhu yaru heluvudilla. orissa dhalli yenu madthidhare swalp kannu bittu nodi mother theresa madidu adhanne mathantha madisidhu asteya.
I think you are completely
I think you are completely biased Mr.Irshad. If the group does not do at least this, Hinduism will be a minority soon. Also, why are you blind to the SIMI type Muslim organisations now uncovered throughout Mangalore, Udupi and other parts of Karnataka? Try to mend your people first before preaching to others. All the respect I had for your Kavanas has disappeared because of this one speech of yours.