- ಗುರು ಬಬ್ಬಿಗದ್ದೆ
ಮಾವ ನಿನ್ನ ಮನೆಗೆ, ಅಳಿಯನಾಗಿ ಬರಲೇ
ಮಗನಾಗಿ ಬರಲೇ, ಬೆಳಕಾಗಿ ಬರಲೇ
ನಿನ್ನ ಮಗಳ ಮೇಲೆ ಒಲವಾಗಿ ಬರಲೇ
ನದಿಯಾಗಿ ಬರಲೇ, ಪ್ರೀತಿ ಅಲೆಯನ್ನು ತರಲೇ ೧
ನೀನು ಹೆತ್ತ ಕುಡಿಯು ನನ್ನ ಜೀವ ಸೆಲೆಯ
ಅವಳ ಬಾಳ ನಗುವು ನನ್ನ ವನದ ಸುಮವು
ಅವಳ ಕಣ್ಣ ಕಾಂತಿ ನನಗೆ ಸೂರ್ಯಕಾಂತಿ
ನಿನ್ನ ಕರುಳ ಕಂದ, ನನ್ನ ಮನಕೆ ಚಂದ ೨
ನಿನಗೆ ಹೇಗೆ ಕರುಳೋ, ನನಗೆ ಭಾವ ಬಳ್ಳಿ
ಸುಖದು:ಖಗಳಲಿ ಇರುವೆ ನಾ ಅವಳ ಬಳಿ
ಮಾತು ಮಧುರ, ಮುಗ್ಧೆ ಅವಳು, ಪ್ರೀತಿಯ ಸಾಕಾರ
ನನ್ನ ಮನದ ಹದವನರಿತ ನನ್ನ ಬಾಳ ಮಂದಾರ ೩
ಅವಳಿಗೇಗೆ ಪಿತನು ನೀನು, ನನಗೆ ಕಣ್ಣು ಕೊಟ್ಟ ತಂದೆ
ನಿನ್ನ ಮನದ ಭಾವನೆ ಅರಿತೆ, ನಾನೇ ಅವಳ ತಾಯ್ತಂದೆ
ನೋವು ಕೊಡೆನು, ನೋಯಿಸೆನು ನಗುವೇ ಅವಳ ಬಾಳಲಿ
ಅವಳ ಭಾವ ಸೆಲೆಯ ಒಲಗೆ, ಸುಖವೇ ಮನದಿ ಕಾಣಲಿ ೪










ha ha ha very nice .....ee
ha ha ha very nice .....ee sambandada bagge yaaru kavana bardirlik`illa !!!!!!!!!! keep it up aliya . ``
Thumba channagide,
Thumba channagide, mava magala naduva kalpa,neya kuvarananthe.