ನವಭಾರತ
-- ಮೋಹನ್ ಕೃಷ್ಣ ಟಿ.ಕೆ
ಸುವರ್ಣಾಕ್ಷರಗಳಲ್ಲಿ ಲಿಖಿತ ಇತಿಹಾಸವೀಗ ಗತಕಾಲದ ಗೊಡ್ಡು ಪುರಾಣ
ಸರ್ವತಂತ್ರ ಸ್ವತಂತ್ರ ಗಣತಂತ್ರವೀ ಭಾರತ
ಭ್ರಷ್ಟರನ್ನೇ ಆಯ್ಕೆಗೊಳಿಸುವ ದುರ್ಬಲ ಚುನಾವಣಾಪದ್ಧತಿ
ಓಟಿಗಾಗಿ ಪ್ರಜೆಗಳಿಗೆ ಕುಡಿಸಿದ್ದು ಧರ್ಮದ ಅಫೀಮು !
ಪರಂಪರಾಗತ ಗೊಡ್ಡು ಮೌಢ್ಯ ; ತೊಲಗಲ್ಲೊಲ್ಲದು ಜಾತಿ ಜಾಡ್ಯ
ಶೋಷಣೆ-ದಮನ ಸಮಾಜದಲ್ಲಿ ಅಂತರ್ಗತವಾದ ನಡೆ
ಅಪ್ಪ ಹಾಕಿದ ಆಲದ ಮರ; ಸಂಸ್ಕೃತಿ ಆಚಾರದ ಕಬ್ಬಿಣದ ಪರದೆ
ಪ್ರಜಾಪ್ರಭುತ್ವದಲ್ಲಿ ಧಿಕ್ಕಾರದ ಕೂಗಿಗೆ ನಿರಂಕುಶತ್ವದ ಮೂಗುದಾರ !
ಶಾಂತಿ- ಸಹಬಾಳ್ವೆ ಬೋಧಿಸಿದ ಮಹಾತ್ಮನಿಗೆ ನಮ್ಮ ಕೊಡುಗೆ ಏನು ?
ಜೀವ ತೆಗೆಯಲು ಒಂದು ಗುಂಡು; ಸ್ವಾರ್ಥಿ ಮರ್ತ್ಯಲೋಕದಿಂದ ಮುಕ್ತಿ !









ಜಾತಿ,
ಜಾತಿ, ಧರ್ಮದ ಹೆಸರು ಹೇಳಿ ಜನರನ್ನು ಮರುಳುಗೊಳಿಸುವ ನಾಯಕರು ಮತ್ತು ವಿದ್ಯಾವ೦ತರಾಗಿದ್ದೂ ಬುದ್ಧಿವ೦ತರಾಗದೆ ಪ್ರತೀ ಬಾರಿ ಮೋಸಹೋಗುವ ಜನ- ಇದೊ೦ದು ವಿಷವರ್ತುಲ. ಇದರಿ೦ದ ಹೊರಬರುವ ಧೈರ್ಯ ಮಾಡಿದ೦ದೆ ಜನತೆಗೆ ಹಾಗೂ ದೇಶಕ್ಕೆ ನವಪರ್ವಕಾಲದ ಆರ೦ಭ.
ಮೃಣಾಲಿನಿ ಉದಯ ಕುಮಾರ್