ಸ್ವಾತಂತ್ರ್ಯೋತ್ಸವ
 •    •  
divya.jpg

                                  -ದಿವ್ಯಾ ರಾವ್ 

ಸ್ವಾತಂತ್ರ್ಯೋತ್ಸವದ  ಸಡಗರ ಸಂಭ್ರಮ
ತುಂಬಿದೆ ಭಾರತೀಯರ  ಮನೆ,  ಮನ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ
ಮೊಳಗುತಿದೆ ದೇಶಭಕ್ತಿಯ ಕಹಳೆ
ಸ್ಮರಿಸೋಣ ನಮ್ಮ ಪೂರ್ವಿಕರ  ತ್ಯಾಗ ಬಲಿದಾನ
ಸಲ್ಲಿಸುತ ವಿನಯಪೂರ್ವಕ ನಮನ

"ಅನೇಕತೆಯಲ್ಲಿ ಏಕತೆ"ಯ ಕಾಣುವ
ಪ್ರೀತಿ, ಸೌಹಾರ್ದತೆಯ ತವರು
ಸಾಮರಸ್ಯದ ನೆಲೆವೀಡು
ನಮ್ಮಯ ಭಾರತ ದೇಶ

ಪ್ರಗತಿಯ ರಥವೇರಿ
ಯಶಸ್ಸಿನ ಹಾದಿಯಲಿ
ಕೀರ್ತಿಯ ಜಯಭೇರಿ ಬೀರಲಿ
ಸಕಲ ಕ್ಷೇತ್ರಗಳಲ್ಲಿ  ಉನ್ನತಿಯ ಶಿಖರವೇರಲಿ
ಸುರಿಯಲಿ ಸಫಲತೆಯ ಸುರಿಮಳೆ

ರೂಪುಗೊಳ್ಳಲಿ ಸ್ವತಂತ್ರ ಭಾರತದ
ಸುವರ್ಣ ಭವಿಷ್ಯ
ವಿಶ್ವದಾದ್ಯಂತ ಪಸರಿಸಲಿ
ಭರತ ಖಂಡದ ಕೀರ್ತಿ ಪತಾಕೆ
ಭಾರತೀಯರೆಲ್ಲ ಒಂದಾಗಿ
ಒಕ್ಕೊರಳಿಂದ ಹಾಡೋಣ
ಭಾರತಾಂಬೆಯ ಜೈಕಾರ

ಜೈ ಭಾರತಾಂಬೆ !!

Syndicate

Syndicate content