ಹಾಡಿದನು ಕವಿಯು
--ಅರುಣ್ ಕುಮಾರ್ ಹೆಚ್ ಎಸ್.
ನಲಿವ ಮುಗಿಲು ನನ್ನಿ ಮನವು
ನಿನ್ನೊಲವ ಬಾಂದಳದಲ್ಲಿ
ನಗುವ ಹೂವು ನಿನ್ನಿ ಒಲವು
ನನ್ನ ಮನದಂಗಳದಲ್ಲಿ
ನನ್ನ ಒಲುಮೆ
ಬತ್ತದಾ ಚಿಲುಮೆ
ನಿನ್ನ ಮದುರ ಕರೆಯಗಾನ
ನನಗೆ ಅಪ್ಯಾಯಮಾನ
ಕೋಟಿ ಕೋಟಿ ಮಿನುಗು ತಾರೆ
ನಿನ್ನ ಕಣ್ಣ ಹೊಳಪು
ಲಕ್ಷ ಲಕ್ಷ ದೀಪದಾರೆ
ನಿನ್ನ ಮನದ ಬಿಳುಪು
ಸೃಷ್ಠಿಯಾಟದಲ್ಲಿ ಮೆರಗು
ಸಂಬ್ರಮದ ಬೆರಗಿನ ಸುಗ್ಗಿ
ಕಳೆದುದು ಸೃಷ್ಠಿಕರ್ತನ ಕೊರಗು
ಹಾಡಿದನು ಕವಿಯೊಬ್ಬ ಹಿಗ್ಗಿ









