ನನ್ನ ನೆಗಡಿ
 •    •  
ಗೋಪಿನಾಥ್ ರಾವ್

-ಗೋಪೀನಾಥ ರಾವ್


ಅಡಿಗಡಿಗೆ ಗಡಿಗೆ ನೀರು
ಹೊತ್ತು ಬರುವ ಗಂಗೆ
ಕೆಂಪಾದ ಮೂಗು
ತಿಳಿಸುವ ಆಗು ಹೋಗು..
ಬಂದಾಗ ಕಣ್ಣಲ್ಲೂ ನೀರಿಳಿದು ಅತ್ತೆ
ಅತ್ತೆ ಬಂದಿಳಿದ ದಿನ
ನೆತ್ತಿಮೇಲಿಂದ ಇಳಿದಿತ್ತು
ಇಳಿದು ಬಾತಾಯಿ ಇಳಿದು ಬಾ
ಎಂದು ನಾನೆಲ್ಲಿ ಹೇಳಿದೆ?
ಕರೆಯದೇ ಬಂದ ಧಾರಾಳಿ
ಬಿಡುವಿಲ್ಲದೆ ಹಗಲು ರಾತ್ರಿ ಪಾಳಿ
ಕುಡಿಯುವ ನೀರು ವಿದ್ಯುತ್ತಿಗೆ ಬರ
ಎಲ್ಲೆಲ್ಲೂ ನೀರಿಲ್ಲವೆಂಬ ಹಾಹಾಕಾರ
ಮೊರೆಯಿಡುವ ಜನರಿರುವ ನಮ್ಮೂರ
ನರ ನಾರಿಯರೆಲ್ಲರನ್ನೂ
ಕೂಗಿಕರೆದು ತೋರಿಸುವ ಆಸೆ
ಕೊಡ ತನ್ನಿ ಅಣೆಕಟ್ಟ ಹಾಕಿ
ಹೇಗಾದರೂ ಮಟ್ಟ ಹಾಕಿ
ನಿಂತ ಮೇಲೆ
ಅತ್ತೆ ಬಂದು ಹೋದ ಮೇಲಿನ
ಪ್ರಶಾಂತತೆ ಸವಿಯುವ ಸೊಸೆಯಂತೆ
ಹಂತಹಂತವಾಗಿ ಮೇಲೇರಿದ ರಾಜಕಾರಣಿ
ಅಂತೂ ಹೋಗಿ ಮಂತ್ರಿ ಕುರ್ಚಿಯಲ್ಲಿ
ಕಾಲ್ಚಾಚಿ ಕುಳಿತ ಹಾಗೆ
ಏನು ಆರಾಮ ಏನು ಸುಖ!
ನನ್ನದೇ ಹೀಗಾಗಿದ್ದರೆ
ನಿನ್ನದಿನ್ನೇನು ಕಥೆಯೋ ಷಣ್ಮುಖ!

 

Dear Gopinath avare,  It

Dear Gopinath avare,

 It was beautiful poem about Negadi. Thanks for giving such nice poems to us.

Guru

 

 

Dr. Gurumurthy Hegde Post Doctoral Research Associate Department of ElectroDeanic and Computer Engineering Hong Kong University of Science and Technology Clear Water Bay, Kowloon, Hong Kong Tel (lab): (852) 2358 8528 Mobile: 64494008 Fax

Syndicate

Syndicate content