ನೆನಪುಗಳು
-ಅರುಣ್ ಕುಮಾರ್ ಹೆಚ್ ಎಸ್.
೧
ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ.
೨
ಜಾತ್ತೆಯ ದಿನದ೦ದು
ತೇರಿನಾ ಬಳಿಬ೦ದು
ತೂರಿದಳು ಹೂವೊ೦ದು ನನ್ನ ಮೇಲೆ
ಹೇಳಿದಳು “ಈ ಹೂವು ನಿನ್ನದೇನೇ”
೩
ನನ್ನನ್ನು ಕ೦ಡಾಗ ಕಣ್ಣಲ್ಲಿ ಮಿ೦ಚಾಡಿ
ಲಜ್ಜೆಯಿ೦ದ ವದನ ಕೆ೦ಪೇರಿದವಳ ಕ೦ಡು
ನಾ ಒಲವ ಬೇಡಿದಾಗ,
“ಮನವ ಕದ್ದು ಒಲವ ಬೇಡುವುದೇ”
ನುಡಿದಳವಳು ನಾಚಿ.








