ದುಬೈಯಲ್ಲಿ ಧ್ವನಿ ಕಲಾಸಂಭ್ರಮ: ಹಯವದನ ನಾಟಕ ಪ್ರದರ್ಶನ, ಸಾಧಕರಿಬ್ಬರಿಗೆ ಸನ್ಮಾನ
 •    •  
girish karnad.jpg

ಧ್ವನಿ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಕಲಾ ಕಾರ್ಯಕ್ರಮವಾಗಿ 20.06.2008 ನೇ ಶುಕ್ರವಾರ ಸಂಜೆ 5.30 ಕ್ಕೆ ದುಬೈನ ಭಾರತೀಯ ದೂತಾವಾಸ ಸಭಾಗೃಹದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗಿರೀಶ್ ಕಾರ್ನಾಡರ ಪ್ರಖ್ಯಾತ ನಾಟಕ "ಹಯವದನ"ವನ್ನು ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ರಂಗವೇರಿಸಲಾಗುವುದರ ಜೊತೆಗೆ ಪ್ರೊ ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ಕನ್ನಡದ ವಿಶಿಷ್ಠ ಸಾಧಕರಿಬ್ಬರಿಗೆ ಸನ್ಮಾನ ಕಾರ್ಯಕ್ರಮವೂ ಏರ್ಪಾಡಾಗಿದೆ.

ಇದೇ ಮೊದಲ ಬಾರಿಗೆ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ದುಬೈಯ ಈ ಕಾರ್ಯಕ್ರಮದಲ್ಲಿ ಆಗಮಿಸಿ ಭಾಗವಹಿಸುತ್ತಿರುವುದು ವಿಶೇಷ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜರಗನಹಳ್ಳಿ ಶಿವಶಂಕರ ಅವರಿಗೆ ಕಾವ್ಯ ಕ್ಷೇತ್ರದ ಸಾಧನೆಗಾಗಿ "ಧ್ವನಿ ಪುರಸ್ಕಾರ-2008" ನೀಡಿ ಗೌರವಿಸಲಾಗುವುದು. ಶ್ರೀನಿವಾಸ ಕಪ್ಪಣ್ಣ ಅವರಿಗೆ "ಧ್ವನಿ-ಶ್ರೀರಂಗ ರಂಗ ಪ್ರಶಸ್ತಿ" ನೀಡಿ ಗೌರವಿಸಲಾಗುವುದು.

ಕಳೆದ ವರ್ಷ ಈ ಪ್ರಶಸ್ತಿಯನ್ನು ರಂಗ ಕಲಾವಿದೆ ಬಿ ಜಯಶ್ರೀ ಅವರಿಗೆ ನೀಡಲಾಗಿತ್ತು.

ಉತ್ತಮ ನಾಟಕಗಳನ್ನು ದುಬೈಯಲ್ಲಿ ಪ್ರದರ್ಶಿಸಬೇಕು ಎನ್ನುವ ಲಕ್ಷ್ಯದಲ್ಲಿ ಕಳೆದವರ್ಷ ನಾಗಮಂಡಲ ನಾಟಕವಾಡಿದ್ದ ಧ್ವನಿ ಕಲಾವಿದರು ಈ ಬಾರ್ ಹಯವದನ ಆಡಿ ತೋರಿಸಲಿದ್ದಾರೆ. ಹಾಗೆಯೆ ನಾಟಕಕ್ಕೆ ಉಚಿತ ಪ್ರವೇಶವಿದ್ದು ರಂಗಾಸಕ್ತ ಯು.ಎ.ಇ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುವರು.

 

ಧ್ವನಿ

ಧ್ವನಿ ಪ್ರತಿಷ್ಠಾನ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ಶುಭ ಕೋರುತ್ತೇವೆ. ಮು೦ದಿನ ಸ೦ಚಿಕೆಗಳಲ್ಲಿ ಸಮಾರ೦ಭದ ವರದಿಯೊ೦ದಿಗೆ ಡಾ.ಚ೦ದ್ರಶೇಖರ ಕ೦ಬಾರರ ಮತ್ತು ಪ್ರಶಸ್ತಿ ವಿಜೇತರ ಸ೦ದರ್ಶನಗಳನ್ನೂ ನಿರೀಕ್ಷಿಸುತ್ತಿದ್ದೇವೆ.

ಮೃಣಾಲಿನಿ ಉದಯ ಕುಮಾರ್

Syndicate

Syndicate content