ರಾಸ್ ಅಲ್ ಖೈಮಾದ ನಿಗೂಢ ಅರಮನೆ
 •    •  
nigoodha aramane.jpg

                          -ಅರ್ಶದ್ ಹುಸೇನ್


ಇಪ್ಪತ್ತು ವರ್ಷಗಳಿಂದ ಖಾಲಿ ಬಿದ್ದಿರುವ ಅರಮನೆಯಲ್ಲಿ ಭೂತವಿದೆಯೇ?
ನಿಗೂಢವಾಗಿರುವ ಪ್ರಶ್ನೆ

ಯು.ಎ.ಇ.ಯ ಒಂದು ಸಂಸ್ಥಾನವಾದ ರಾಸ್ ಅಲ್ ಖೈಮಾದಲ್ಲಿರುವ ಎ ದಿಯಾತ್ ಎಂಬಲ್ಲಿ ಹೋಗಿ ಅಲ್ ಕಾಸಿಮಿ ಅರಮನೆ ಎಲ್ಲಿ ಎಂದು ಯಾರನ್ನಾದರೂ ವಿಚಾರಿಸಿದರೆ ನೀವೇನೂ ಅದನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ, ಅದೇ ನಿಮ್ಮನ್ನು ಹುಡುಕಿಕೊಳ್ಳುತ್ತದೆ ಎಂದು ಸ್ಥಳೀಯರು ಉತ್ತರಿಸುತ್ತಾರೆ. ಇದೇಕೆ ಹೀಗೆ ಎಂದು ಕೊಂಚ ಕೆದಕಿದಾಗ ಹಲವಾರು ವಿವರಗಳು ದೊರಕುತ್ತವೆ.ದಿಯಾತ್ ಮುಖ್ಯರಸ್ತೆಯ ಬಗಲಲ್ಲೇ ಬೆಟ್ಟವೊಂದರ ತುದಿಯಲ್ಲಿ ಸ್ಥಾಪಿಸಲಾಗಿರುವ ಅತ್ಯಂತ ಮನಮೋಹಕ ಅರಮನೆಯಲ್ಲಿ ಈಗ ಯಾರೂ ವಾಸಿಸುತ್ತಿಲ್ಲ. ಒಡೆದ ಕನ್ನಡಿಯ ಕಿಟಕಿಗಳು, ತುಕ್ಕು ಹಿಡಿದಿರುವ ಬೃಹತ್ ಗೇಟು ಇಲ್ಲಿ ಯಾರೂ ವಾಸವಾಗಿಲ್ಲವೆಂಬುದನ್ನು ಖಚಿತಪಡಿಸುತ್ತವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಶೇಖ್ ಅಬ್ದುಲ್ ಅಜೀಜ್ ಅಲ್ ಕಾಸಿಮಿಯವರು ಐನೂರು ಮಿಲಿಯನ್ ದಿರ್ಹಾಂ ವೆಚ್ಚದಲ್ಲಿ ನಿರ್ಮಿಸಲಾಗಿದ್ದಂತಹ ಈ ಅರಮನೆಯಲ್ಲಿ ಬರ್ಕತ್ (ಅಭಿವೃದ್ಧಿ) ಇಲ್ಲವೆಂಬ ಕಾರಣದಿಂದ ಆಗಲೇ ತ್ಯಜಿಸಿದ್ದರು. ಅಂದಿನಿಂದ ಈ ಅರಮನೆ ಪಾಳು ಬಿದ್ದಿದೆ.

ಆದರೆ ಈ ಮನೆಯಿಂದ ಕುತ್ತಿಗೆ ಹಿಚುಕುತ್ತಿರುವಾಗ ಕೂಗುವ ಹೆಣ್ಣಿನ ಚೀತ್ಕಾರ ಹಾಗೂ ಅರಮನೆಯ ಮೇಲಿನಿಂದ ಚಿಕ್ಕ ಮಕ್ಕಳು ನಿಮ್ಮನ್ನು ನೋಡುತ್ತಿರುವಂತಹ ಭ್ರಮೆಹುಟ್ಟಿಸುವ ಸನ್ನಿವೇಶಗಳು ತಮಗೆ ಎದುರಾಗಿವೆ ಎಂದು ಅನತಿದೂರದಲ್ಲಿ ವಾಸವಾಗಿರುವ ಸ್ಥಳೀಯರಾದ ಖಾಲಿದ್ ಅಬ್ದುಲ್ಲಾ ವಿವರಿಸುತ್ತಾರೆ. ಈ ಹೆಣ್ಣು ಒಂದು ಜಿನ್ನ್ (ಭೂತ) ವಿರಬಹುದೆಂದು ಸ್ಥಳೀಯರು ಅನುಮಾನಿಸುತ್ತಾರೆ. ಈ ಜಿನ್ನ್ ಯಾವುದೇ ಮನುಷ್ಯ ರೂಪವನ್ನು ಧರಿಸಬಲ್ಲ ಶಕ್ತಿಯನ್ನು ಪಡೆದಿದೆ. ಈ ಅರಮನೆಯಲ್ಲಿ ಇನ್ನೂ ಹಲವಾರು ಜಿನ್ನ್ ಗಳು ವಾಸವಾಗಿರಬಹುದೆಂದು ಸ್ಥಳೀಯರು ಅನುಮಾನಿಸುತ್ತಿದ್ದಾರೆ. ದೂರದಿಂದ ಹಲವು ಬಾರಿ ಆ ಆಕೃತಿಗಳನ್ನು ನೋಡಿದ್ದೇನೆಂದೂ, ಅನೇಕಾರು ಬಾರಿ ಚಿತ್ರವಿಚಿತ್ರ ಸದ್ದುಗಳನ್ನು ಕೇಳಿದ್ದೇನೆಂದೂ ಆದರೆ ಒಳಗಡಿಯಿಡಲು  ಹೈರ್ಯವಾಗಲಿಲ್ಲವೆಂದು ಖಾಲಿದ್ ತಿಳಿಸಿದ್ದಾರೆ. ಕೆಲವೊಮ್ಮೆ ಈ ಮಕ್ಕಳು ರಾತ್ರಿಯವೇಳೆ ಬಂಗಲೆಯಿಂದ ಹೊರಬಂದು ನಿಮ್ಮ ಹೆಸರುಹಿಡಿದು ಕೂಗುವುದು ಕೇಳಿಸುತ್ತವೆ. ಅತ್ಯಂತ ಸ್ಫುಟವಾದ ಮಕ್ಕಳ ಧ್ವನಿಯಲ್ಲಿ ನಿಮ್ಮ ಹೆಸರು ಹಿಡಿದು ಕೂಗಿದರೂ ಹೊರಗಡಿಯಿಡುವ ಧೈರ್ಯ ಮಾತ್ರ ಬರಲಿಲ್ಲವಂತೆ ಈ ವಿಷಯಗಳನ್ನು ಪರಾಮರ್ಶಿಸಲು ಯು.ಎ.ಇ.ಯ ಪತ್ರಕರ್ತರೊಬ್ಬರು ಈಜಿಪ್ಟ್ ನ ಭೂತಾರಾಧಕರಾದ ತಾರಿಕ್ ಅಬ್ದುಲ್ಲಾ ಮೋನಿಮ್ ಇಬ್ರಾಹಿಂ ರೊಂದಿಗೆ ಅವರೊಂದಿಗೆ ಬಂಗಲೆಯ ಒಳಗಡಿಯಿರಿಸಿದ್ದರು.

ಬಂಗಲೆಯ ಒಳಗೆ ಇಪ್ಪತ್ತು ವರ್ಷಗಳ ಹಿಂದಿನ ಭವ್ಯತೆ ಅನುಭವಗಮ್ಯವಾಯಿತು. ಕುರಾನ್ ವಾಕ್ಯಗಳ ಕೆತ್ತನೆಯಿರುವ ಮಾರ್ಬಲ್ ಫಲಕ ಅವರನ್ನು ಸ್ವಾಗತಿಸಿತು. ಪತ್ರಕರ್ತರು ಕುರಾನ್ ವಾಕ್ಯವನ್ನು ಓದಿದ ಕೂಡಲೇ ಅನಾಚೂನವಾಗಿ ಮುಖ್ಯ ಹಾಲ್ ನಲ್ಲಿರುವ ದೊಡ್ಡ ಕ್ರಿಸ್ಟಲ್ ತೂಗುದೀಪಗಳಲ್ಲಿದ್ದ ಮೂರು ದೀಪಗಳಲ್ಲೊಂದು ಅಚಾನಕ್ಕಾಗಿ ಬೆಳಗಿತು. ಇನ್ನೆರೆಡು ಹಾಗೇ ಇದ್ದವು. ಆ ಬೆಳಕು ಪ್ರಾಂಗಣದ ಭವ್ಯತೆಯನ್ನು ಎತ್ತಿ ತೋರಿಸಿತು. ಅಷ್ಟಕೋನಾಕೃತಿಯ ಅರಮನೆಯ ಭವ್ಯತೆ ಎದ್ದು ಕಾಣುತ್ತಿತ್ತು. ಒಳಗಿ ಅನೇಕ ಕಲಾಕೃತಿಗಳಿದ್ದು ಅವುಗಳ ಕಣ್ಣುಗಳನ್ನು ಬಿಳಿಯ ಹಾಳೆಗಳಿಂದ ಮುಚ್ಚಿದ್ದುದು ಹಾಗೇ ಇತ್ತು. ಜಿನ್ನ್ ಗಳು ತಮ್ಮನ್ನು ನೋಡದೇ ಇರಲಿಕ್ಕೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಬ್ರಾಹಿಂ ತಿಳಿಸುತ್ತಾರೆ.

ಬಂಗಲೆಯೊಳಗಿನ ಹದ್ದು ಮೊದಲಾದ ಹಲವು ಕಲಾಕೃತಿಗಳ ತಲೆಯನ್ನು ತುಂಡರಿಸಿರುವುದು, ಗೋಡೆಯಿಂದ ಟೈಲ್ಸ್ ಗಳನ್ನು ಕಿತ್ತಿರುವುದು, ಮುಖ್ಯ ಪ್ರಾಂಗಣ ಹಾಗೂ ಶೌಚಾಲಯಗಳ ನೆಲಗಳಲ್ಲಿ ಗೆರೆಗಳಿರುವುದು, ಒಡೆದ ಮೊಟ್ಟೆಯ ಕವಚ, ಕೆಲವು ಕಟ್ಟಿಗೆ ತುಂಡುಗಳು ಈ ಅರಮನೆಗೆ ಕೆಲವರಾದರೂ ಚಿಕ್ಕಪುಟ್ಟ ಕಳ್ಳತನದ ಆಮಿಷ ಹೊಂದಿ ಬಂದಿರುವುದನ್ನು ಧೃಢೀಕರಿಸುತ್ತವೆ.  ಈ ಅರಮನೆಗೆ ಇದಕ್ಕೂ ಮೊದಲು ಆಫ್ರಿಕಾದಿಂದ ಹಲವು ಭೂತಾರಾಧಕರು ಹಾಗೂ ಸೌದಿ ಅರೇಬಿಯಾದಿಂದ ಕೆಲವು ಶೇಖ್ ಗಳು ಬಂದು ಭೂತೋಚ್ಛಾಟನೆ ಮಾಡಿರುವುದನ್ನು ಅಲ್ಲಲ್ಲಿ ಬಿದ್ದಿರುವ ಕುರಾನ್ ಪುಟಗಳ ಹಾಗೂ ಪ್ರಾಣಿಬಲಿ ನೀಡಿರುವ ಗುರುತುಗಳನ್ನು ಇಬ್ರಾಹಿಂ ತೋರಿಸಿದರು. ಆದರೆ ಈ ಪ್ರಯತ್ನಗಳು ನಿರರ್ಥಕವಗಿರಬಹುದು. ಹಾಗಾಗಿ ಇನ್ನೂ ಇಲ್ಲಿ ಯಾರೂ ವಾಸಮಾಡುತ್ತಿಲ್ಲ. ಸಧ್ಯಕ್ಕೆ ಕುತೂಹಲ ಕೆರಳಿಸಿರುವ ಈ ಅರಮನೆ ಆಸಕ್ತರಿಗೆ ಸೂಕ್ತ ಕಥಾವಸ್ತು.

Registration- Seminar on the

Registration- Seminar on the occasion of kannadasaahithya.com 8th year Celebration Dear blogger, On the occasion of 8th year celebration of Kannada saahithya. com we are arranging one day seminar at Christ college. As seats are limited interested participants are requested to register at below link. Please note Registration is compulsory to attend the seminar. If time permits informal bloggers meet will be held at the same venue after the seminar. For further details and registration click on below link. http://saadhaara.com/events/index/english http://saadhaara.com/events/index/kannada Please do come and forward the same to your like minded friends -kannadasaahithya.com balaga

Syndicate

Syndicate content