ದುಬೈಯಲ್ಲಿ ಗಿರೀಶ್ ಕಾರ್ನಾಡರ ನಾಟಕ -ಹಯವದನ- ಜೂನ್ ೨೦ ರಂದು
 •    •  
girish karnad.jpg

ಧ್ವನಿ ಪ್ರತಿಷ್ಠಾನದ ಕೊಡುಗೆ : ಉಚಿತ ಪ್ರವೇಶ

ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪೈಯಾರ್ ಕಳೆದ ಬಾರಿ ನಾಗಮಂಡಲ ನಾಟಕ ಪ್ರಸ್ತುತಪಡಿಸಿದ್ದು ಹಲವರಿಗೆ ನೆನಪಿರಬಹುದು. ಅತ್ಯಂತ ಸುಂದರ, ಹಾಗೂ ಉತ್ತಮ ನಿರ್ದೇಶನದ ನಾಟಕವನ್ನು ಅಂದು ಕನ್ನಡದ ಹಿರಿಯ ರಂಗಕಲಾವಿದೆ ಬಿ.ಜಯಶ್ರೀ ಅವರ ಸಮ್ಮುಖದಲ್ಲಿ ಜರುಗಿತ್ತು.

ಈ ವರ್ಷ ಗಿರೀಶ್ ಕಾರ್ನಾಡರ ನಾಟಕ- ಹಯವದನ- ದುಬೈಯಲ್ಲಿ ಪ್ರಥಮ ಬಾರಿಗೆ ದುಬೈ ಇಂಡಿಯನ್ ಕಾನ್ಸುಲೇಟ್ ಆಡಿಟೋರಿಯಂ ಸಭಾಂಗನದಲ್ಲಿ ಜೂನ್ ಇಪ್ಪತ್ತರ ಶುಕ್ರವಾರದಂದು ಆಯೋಜಿಸಲಾಗಿದೆ. 

ಈ ಬಾರಿಯೂ ನಾಟಕದ ನಿರ್ದೇಶನದ ಹೊಣೆಯನ್ನು ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಹೊತ್ತುಕೊಂಡಿದ್ದಾರೆ.

ಈ ಪ್ರದರ್ಶನ ಸಂಪೂರ್ಣವಾಗಿ ಉಚಿತವಾಗಿದ್ದು ಎಲ್ಲಾ ಕಲಾಭಿಮಾನಿಗಳಿಗೆ ಈ ಮೂಲಕ ಆಹ್ವಾನ ನೀಡಲಾಗಿದೆ.

ಹಯವದನ ಒಂದು ಹಳೆಯ ಕಥೆಯನ್ನು ಅಧಾರವಾಗಿಟ್ಟುಕೊಂಡ ನಾಟಕ. ದೇವದತ್ತ ಎಂಬ ಬುದ್ಧಿವಂತ, ಆತನ ಹೆಂಡತಿ ಪದ್ಮಿನಿ ಮತ್ತು ಸುಂದರಾಂಗ ಕಾರ್ಮಿಕ ಹಾಗೂ ದೇವದತ್ತನ ಸ್ನೇಹಿತ ಕಪಿಲರ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ.  ಥೋಮಸ್ ಮಾನ್ ಅವರ ಟ್ರಾನ್ಸ್ ಪೋಸ್ಡ್ ಹೆಡ್ಸ್ ಎಂಬ ಕಥೆಯಿಂದ ಪ್ರೇರಿತವಾದ ಸಂಸ್ಕೃತ ನಾಟಕ ಕಥಾಸರಿತ್ಸಾಗರ ದ ಮೇಲೆ ಆಧಾರಿತವಾಗಿರುವ ಈ ಕಥೆಯ ಇನ್ನೊಂದು ಮುಖ್ಯ ಭೂಮಿಕೆ ಕುದುರೆ ಮುಖದ ಮನುಷ್ಯನ ವಿಸ್ಮೃತಿ. 

ಕಳೆದ ನಲವತ್ತು ವರ್ಷಗಳಲ್ಲಿ ಹಲವಾರು ಭಾರತೀಯ ಭಾಷೆಗಳಲ್ಲದೇ ಹಲವಾರು ವಿದೇಶೀ ಭಾಷೆಗಳಿಗೂ ಅನುವಾದಗೊಂಡಿರುವ ಈ ಕಥೆಯನ್ನು ನಾಟಕದ ರೂಪದಲ್ಲಿ ನೋಡಿದರೆ ಹೆಚ್ಚು ಸೊಗಸು.

ಉಚಿತ ಈ ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಪಡೆಯಬಹುದಾಗಿದೆ.
050-6976081
055-9490682
050-9368414

Syndicate

Syndicate content