-ನಳಿನಿ ಸೋಮಯಾಜಿ
ಕನ್ನಡ ಕೌಸ್ತುಭ
ಝೀ ಟಿವಿ ರೂಪಿಸಿತ್ತು ಕನ್ನಡ ಕೌಸ್ತುಭ ಕಾರ್ಯಕ್ರಮವನ್ನು
ಕೂಡಿಸಿ ತಂದಿತ್ತು ಕನ್ನಡ ಸಿನೆಮಾ-ಕಿರುತೆರೆ ನಟ ನಟಿಯರನ್ನು
ಕೈ ಜೋಡಿಸಿ ಕರೆದಿತ್ತು ದುಬೈ ಕರ್ನಾಟಕ ಸಂಘ ಇವರೆಲ್ಲರನ್ನು
ಕಲಾವಿದರ ಹಾಡು ನರ್ತನ ಮನ ರಂಜಿಸಿತ್ತು ನೆರೆದಿದ್ದ ರಸಿಕರನ್ನು
ಕರ್ತವ್ಯ ಪ್ರಜ್ಞೆ
ಪ್ರಜೆಗಳೆ ಪ್ರಭುಗಳು, ಪ್ರಜಾಪ್ರಭುತ್ವದಲ್ಲಿ
ಪ್ರಬುದ್ದರಾಗಿ ಆರಿಸಿ ನಾಯಕರನ್ನು, ನಿಷ್ಠೆಯಲ್ಲಿ
ಅಯೋಗ್ಯರಲ್ಲೂ ಯೋಗ್ಯರನ್ನು ಆರಿಸಿ, ಇದು ಆಜ್ಞೆ
ಮತದಾನ ಮಾಡಿ ಉಳಿಸಿಕೊಳ್ಳಿ, ಕರ್ತವ್ಯ ಪ್ರಜ್ಞೆ
ಚಂಡಮಾರುತ
ಬೀಸಿತ್ತು ಗಾಳಿ ಜೋರಾಗಿ
ಮ್ಯಾನಮಾರ್ ದೇಶಕ್ಕೆ ಬಡಿದಿತ್ತು ಶಾಪವಾಗಿ
ಕೊಚ್ಚಿಹೋದವು ಜೀವರಾಶಿ ಸುಳಿಯಲ್ಲಿ
ಕಣ್ಮರೆಯಾಯಿತು ಊರು ನರ್ಗಿಸ್ ಚಂಡಮಾರುತದಲ್ಲಿ
ವಿಸ್ಮಯ
ಈ ಜಗತ್ತೇ ವಿಸ್ಮಯ
ಎಲ್ಲಿ ಏನಾಗುತ್ತೆ ತಿಳಿದಿಲ್ಲ
ಮೊದಲೆ ಗೊತ್ತಾಗಲು ಸಾದ್ಯವಿಲ್ಲ
ಎಲ್ಲವು ಸೃಷ್ಟಿಕರ್ತನ ಪವಾಡ ಎಂದರೆ ತಪ್ಪಿಲ್ಲ.
********








