ಕಲಿತ್ತ ಹುಡುಗಿ ದುಬೈಯಲ್ಲಿ
 •    •  
arshad.jpg

ಕಲಿತ್ತ ಹುಡುಗಿ ದುಬೈಯಲ್ಲಿ

        ಅರ್ಶದ್ ಹುಸೇನ್ ಎಂ. ಹೆಚ್.

ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ)

   (೧) ಬೊಂಬಾಯಿ ಹುಡುಗ ಮೊಬೈಲಾಗ್ ಮಾತಾಡ್ತಾ ನಡಕೊಂಡ್ ಬರ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಎದುರಿಗೆ ಬಂದ ಲೈಟಿನ ಕಂಭಕೆ ಢಿಕ್ಕಿ ಹೊಡೆದೇ ಬಿಟ್ಟಾ

   (೨)ಟ್ಯಾಕ್ಸಿ ಹುಡುಗ ಟ್ಯಾಕ್ಸಿ ಓಡಿಸ್ಕೊಂಡ್ ರಸ್ತೇಲಿ ಬರುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಮುಂದಿನ ಕಾರು ನಿಂತಿದ್ದ ನೋಡ್ದೇ ಢಿಕ್ಕಿ ಹೊಡೆದೆ ಬಿಟ್ಟಾ

   (೩)ಗ್ಯಾಸ್ ವೆಲ್ಡಿಂಗ್ ಹುಡುಗ ಯಾವುದೋ ಪೈಪಿಗೆ ವೆಲ್ಡಿಂಗ್ ಹಾಕುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಪೈಪಿಗೆ ಬೀಳುವ ವೆಲ್ಡಿಂಗ್ ಫ್ಲೇಮು ಕೈಯ ಮ್ಯಾಲೆ ಬಿತ್ತಾ

   (೪)ಹೊಂ ಡೆಲಿವರಿ ಹುಡುಗ ಸೈಕಲ್ಲು ಹತ್ಕೊಂಡು ಸಾಮಾನು ಒಯ್ಯುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
      ಫುಟ್‌ಪಾಥಲ್ಲಿ ಅಗೆದಿದ್ದ ಗುಂಡಿಯ ನೋಡ್ದೇ ಒಳಗೆ ಬಿದ್ದು ಬಿಟ್ಟಾ

   (೫)ಶಾವರ್ಮ ಹುಡುಗ ಶಾವರ್ಮ ಮಾಡುತ್ತಾ ಚಿಕನ್ನ ತಿರುವುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಶಾವರ್ಮ ತಿರುವುದ ಮರೆತೇ ಹೋಗಿ ಚಿಕನ್ ಕರಟಿ ಹೋಯ್ತಾ

   (೬)ಎಲೆಕ್ಟ್ರಿಶಿಯನ್ ಹುಡುಗ ಡೀಪಿ ಬಾಕ್ಸಲಿ ಕೆಲಸ ಮಾಡುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಎಲ್ಲಿದ್ದೋ ಫ್ಯೂಸು ಎಲ್ಲಿಗೋ ಹಾಕಿ ಢಂ ಎನಿಸಿ ಬಿಟ್ಟಾ

   (೮) ಪ್ಲಂಬರ್ ಹುಡುಗ ರಿಂಚೊಂದ ಹಿಡಕೊಂಡು ಪೈಪ್ ಟೈಟು ಮಾಡುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಹಿಡಿದಿದ್ದ ರಿಂಚು ಕೈಯಿಂದ ಸ್ಲಿಪ್ಪಾಗಿ ಕಾಲ ಮ್ಯಾಲ ಬಿತ್ತಾ

   (೯) ಫ್ಯಾಬ್ರಿಕೇಶನ್ ಹುಡುಗ ಡ್ರಿಲ್ಲರ್ ಹಿಡಕೊಂಡು ತೂತು ಕೊರೆಯುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಗೋಡೆಯ ಮ್ಯಾಲೆ ಬೀಳೋ ತೂತು ಕಿಟಕಿ ಮ್ಯಾಲೆ ಬಿತ್ತಾ

   (೧೦) ಕಾರ್ಪೆಂಟರ ಹುಡುಗ ಗರಗಸ ತೆಕ್ಕೊಂಡು ಪ್ಲೈವುಡ್ದು ಕುಯ್ಯುತ್ತಿದ್ದ
        ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
        ಪ್ಲೈವುಡ್ದು ಮುಗಿದ್ರೂ ಗರಗಸ ನಿಲ್ಲದೆ ಪ್ಯಾಂಟೇ ಕುಯ್ದು ಬಿಡ್ತಾ


   (೧೧) ಸೈನ್ ಬೋರ್ಡ್ ಹುಡುಗ ಸುತ್ತಿಗೆ ತೆಕ್ಕೊಂಡು ಮೊಳೆಯ ಹೊಡೆಯುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಮೊಳೆಯ ಮ್ಯಾಗಲ ಬೀಳೋ ಹೊಡೆತ ಬೆರಳ ಮ್ಯಾಲೆ ಬಿತ್ತಾ

   (೧೨)ಸೆಲೂನಿನ ಹುಡುಗ ಕತ್ತರಿ ತೆಕ್ಕೊಂಡು ಕಟಿಂಗು ಮಾಡುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಕಿವಿಯ ಮ್ಯಾಗಿನ ಕೂದಲ ಬದಲಿಗೆ ಕಿವಿಗೇ ಕತ್ರಿ ಬಿತ್ತಾ

   (೧೩)ಫೋರ್ಕ್ ಲಿಫ್ಟ್ ಹುಡುಗ ಲಾರಿಯ ಮೇಲೆ ಸಾಮಾನು ಹಾಕುತ್ತಿದ್ದ
       ಆಗ ಹೋಗುವ ಹುಡುಗಿ ಮ್ಯಾಗಲ ಅವನ ಕಣ್ಣ ಬಿತ್ತಾ
       ಲಾರಿಯ ಮ್ಯಾಲೆ ಬೀಳೋ ಸಾಮಾನು ರಸ್ತೆ ಮ್ಯಾಗೆ ಬಿತ್ತಾ.

ನಾವು ಶಾಲಾ

ನಾವು ಶಾಲಾ ಪಿಕ್ನಿಕ್ ಸ೦ದರ್ಭದಲ್ಲಿ "ಕಲಿತ್ತ ಹುಡುಗಿ" ಬಗ್ಗೆ ಇ೦ತಹುದೇ ಪದಗಳನ್ನು ಕಟ್ಟಿ ಹಾಡುತ್ತಿದ್ದದ್ದು ನೆನಪಾಯಿತು.

ಮೃಣಾಲಿನಿ ಉದಯ ಕುಮಾರ್

Syndicate

Syndicate content