ನಾಲ್ಕು ಚುಟುಕಗಳಲ್ಲಿ ವಾಸ್ತವ ಚಿತ್ರಣ
 •    •  

 

                                 -ಶ್ರೀಮತಿ ನಳಿನಿ ಸೋಮಯಾಜಿ, ದುಬೈ


ಚುನಾವಣಾ  ಘೋಷಣೆ
ಕೇಳಿರಿ ನಮ್ಮೂರ ಚುನಾವಣಾ ಘೋಷಣೆ
ಎಲ್ಲ ಪಕ್ಷಗಳು ಸಾರುತ್ತಿವೆ ಬಡವರ ಸಂರಕ್ಷಣೆ
ನಾಯಕರನ್ನು ನಂಬಿ ಆಗದಿರಿ ಶೋಷಣೆ
ಇವರಾಡುವ ಮಾತಿಗೆ ಸಿಗದು ವಿಶ್ಲೇಷಣೆ

ಬಂಡಾಯ
ಪಕ್ಷದಲ್ಲಿ ಟಿಕೆಟ್ ಸಿಗದವರು ಹೂಡುತ್ತಿದ್ದರೆ ಬಂಡಾಯ
ಟಿಕೆಟ್ ದೊರೆಯಲೇಬೇಕೆಂಬ ಕಡ್ಡಾಯ
ಕೊಟ್ಟರೆ ಕೋಟಿ ರೂಪಾಯಿ
ನೀವಾಗುವಿರಿ ಸೀಟಿಗೆ ಸಿಪಾಯಿ.

ಅಧಿಕಾರ
ರಾಜಕಾರಣಿ ನಡೆಸಲು ರಾಜ್ಯಭಾರ
ಕೇಳಿಬಂತು ಎಲ್ಲೆಲ್ಲೂ ಹಾಹಾಕಾರ
ಇಲ್ಲ ಇವರಿಗೆ ಬಡಜನರ ಕಾಳಜಿ
ದುಡ್ಡು ಮಾಡುವುದೇ ಇವರ ಮರ್ಜಿ.

ಟಿಕೆಟ್
ಪಕ್ಷಗಳ ಒಳಗೊಳಗೆ ಕೋಲಾಹಲ
ಟಿಕೇಟಿಗಾಗಿ ನಡೆದಿದೆ ಹಾಲಾಹಲ
ಇಂಥವರಿಗೆ ಸೀಟಿನ ಅಮೃತ ಫಲ
ಇವರಲ್ಲಿದ್ದರೆ ಧನ ಜನ ಬಲ

Syndicate

Syndicate content