ಷೋಡಷಿಯು ಅವಳು....
 •    •  
ಗುರು ಬಬ್ಬಿಗದ್ದೆ

                                   -ಗುರು ಬಬ್ಬಿಗದ್ದೆ


ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ     ೧

ಮಲ್ಲಿಗೆಯೋ ಸಂಪಿಗೆಯೋ ಮನಸೆಲ್ಲ ಜಾಜಿ
ಮಿಂಚಿನ ಸೆಳಕಿನಲಿ ತಪ್ಪೆಲ್ಲ ರಾಜಿ           ೨

ಮೆತ್ತನೆಯ ಮಾವನ ಮುತ್ತಿನ ಮಗಳು
ಮೆತ್ತನೆಯ ಮಾತಿಂದ ಮನವ ಗೆದ್ದಿಹಳು          ೩

ಮೈಮನದ ಮಕರಂದ ಮಾನಿನಿಗೆ ಚಂದ
ಮನವನ್ನು ತಣಿಸುವಳು ನೋಡು ಮುದದಿಂದ       ೪

ಮಗುವಂತೆ ಬಂದು ಮಗುವನ್ನೇ ನೀಡಿದಳು
ಮಕ್ಕಳಾದವು ಎರಡು ಒಂದು ಮರಿ ಮಗಳು        ೫

ಮಂದಹಾಸವ ಬೀರಿ ಈಗಲೂ ಕಾಯುವಳು
ಹರೆಯ ಅರವತ್ತಾರು, ಷೋಡಷಿಯು ಅವಳು         ೬

Syndicate

Syndicate content