ರಾಣಿಬೆನ್ನೂರ ಅರುಣ ಕುಮಾರ್ ಹಾಗೂ ಕಸ್ತೂರಿ ಮೂಲಿಮನಿಯವರಿಂದ ಹಾಸ್ಯ ಭಾಷಣ
ಇಂದು ಸಂಜೆ ಐದರಿಂದ ಎಂಟು ಘಂಟೆಯವರೆಗೆ ಕನ್ನಡ ಕೂಟ ಯು.ಎ.ಇ. ಹಾಸ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ಬರ್ ದುಬೈ ರಿಚ್ಮಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿರುವ ಹಾಸ್ಯ ಕಾರ್ಯಕ್ರಮದಲ್ಲಿ ಗಂಗಾವತಿ ಬೀಚಿ ಎಂದೇ ಪ್ರಸಿದ್ಧರಾಗಿರುವ ಶ್ರೀ ಪ್ರಾಣೇಶ್ (ಪ್ರಾಣೇಶ್ ಆಚಾರ್ ಬೇವಿನಹಾಳ್), ರಾಣಿಬೆನ್ನೂರು ಅರುಣ್ ಕುಮಾರ್ ಹಾಗೂ ಶ್ರೀಮತಿ ಕಸ್ತೂರಿ ಮೂಲಿಮನಿಯವರು ಭಾಗವಹಿಸುತ್ತಿದ್ದಾರೆ.
ನಕ್ಕು ನಗಿಸುವ ಈ ಅಪರೂಪದ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರಿಗೆ ಕನ್ನಡ ಕೂಟ ಯು.ಎ.ಇ. ಆದರದ ಸ್ವಾಗತ ಬಯಸುತ್ತದೆ.
ನಕ್ಕು ನಗಿಸುವ ಹಲವಾರು ಕಾರ್ಯಕ್ರಮಗಳಲ್ಲಿ ಈಗಾಗಲೇ ಜಯಭೇರಿ ಬಾರಿಸಿರುವ ಪ್ರಾಣೇಶ್ ಅವರ ನಗೆ ಚುಟುಕುಗಳು ಯು.ಎಇ. ಕನ್ನಡಿಗರನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ.
ಇದೇ ತಂಡ ನಾಳೆ ಅಬುಧಾಬಿಯಲ್ಲಿಯೂ ಹಾಸ್ಯ ಕಾರ್ಯಕ್ರಮವೊಂದನ್ನು ನೀಡಲಿದೆ.








