ಕಿನ್ನರಿ ನುಡಿ - ಚುಟುಕುಗಳು
nalinisomayaji.jpg

- ನಳಿನಿ ಸೋಮಯಾಜಿ

ಕಿನ್ನರಿ

ಮುದ್ದು ಮುಖದ ಕಿನ್ನರಿ
ನಕ್ಕರೆ ಇವಳು ಸುಂದರಿ
ನಮ್ಮ ಮನೆಯ ಮುದ್ದು ಬಾಲೆ
ಮಾತನಾಡಲು ಮುತ್ತಿನ ಮಾಲೆ.

ವ್ಯಾಯಾಮ

ಸಾಯಂಕಾಲದ ಸಮಯದಲ್ಲಿ
ನಡೆದಿದ್ದೆ ಸಮುದ್ರ ತೀರದಲ್ಲಿ
ದೇಹಾರೋಗ್ಯಕ್ಕೆ ವ್ಯಾಯಾಮ ಸೂಕ್ತ
ಅರಿತು ಬಾಳಿದರೆ ಕಾಯಿಲೆಗಳಿಂದ ಮುಕ್ತ.

ಯಶಸ್ಸು

ಕಣ್ಣುಮುಚ್ಚಿ ಕಾಣಬೇಡ ಕನಸು
ಕಂಡದ್ದೆಲ್ಲಾ ಆಗದು ನನಸು
ಕನಸ್ಸನ್ನು ನನಸಾಗಿಸಲು ಪ್ರಯತ್ನಿಸು
ಖಂಡಿತಾ ನೀ ಗಳಿಸುವೆ ಯಶಸ್ಸು.

ಜಾಹಿರಾತು

ಜಾಹಿರಾತಿನ ಸಾಮ್ರಾಜ್ಯ ಈಗೆಲ್ಲ
ಉತ್ತಮ ವಸ್ತು ಪಡೆಯಲು ಅನುಕೂಲ
ನೀವು ಆರಿಸಿ ನಿಮಗೆ ಬೇಕಾದ್ದು
ಮೋಸ ಹೋಗದಿರಿ ಅದರ ಬಲೆಗೆ ಬಿದ್ದು.


 

Syndicate

Syndicate content