ಕೆಲವು ಚುಟುಕಗಳು
ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ತದ್ರೂಪಿ ಸೃಷ್ಟಿ

ಎಂಥ ವಿಸ್ಮಯವಯ್ಯ ನಿನ್ನಯಾ ಸೃಷ್ಟಿ
ನಿರ್ಮಿಸಿದ ವಿಜ್ಞಾನಿ ತದ್ರೂಪಿ ಸೃಷ್ಟಿ
‌ಎಲ್ಲೆಲ್ಲೋ ನೆಟ್ಟಿದೆ ನಿನ್ನಯಾ ದೃಷ್ಟಿ
ವಿಜ್ಞಾನವೇ ನಿನಗಿಂಥ ಬಲು ಮಹಾಗಟ್ಟಿ ||

ಗ್ರಂಥಾಲಯ

ನಂಬಿಕೆಯ ಆಲಯಗಳು ದೇವಾಲಯ
ಜ್ಞಾನದ ಆಲಯಗಳು ಗ್ರಂಥಾಲಯ
‌ಒಂದೆಡೆ ಕಾಣದ ದೇವನಿಗೆ ನಿತ್ಯ ಪೂಜೆ
‌ಇನ್ನೊಂದೆಡೆ ಜ್ಞಾನದ ದೇವತೆಗೆ ಮನದಲ್ಲೇ ಪೂಜೆ ||

ಪುಸ್ತಕ-ಸಂಸ್ಕೃತಿ

ಸಂಸ್ಕಾರಿಯನ್ನಾಗಿಸುವುದು ಪುಸ್ತಕ
‌ಒಳ್ಳೆಯದನ್ನೆ ಸ್ವೀಕರಿಸುವುದಾಗ ಮಸ್ತಕ
ಪುಸ್ತಕ-ಸಂಸ್ಕೃತಿ ಜ್ಞಾನದ ಪ್ರತೀಕ
ಬೆಳೆಸು ನೀ ಅದನೆ ನಿನ್ನುಸಿರಿರುವ ತನಕ ||

Syndicate

Syndicate content