ವಿಧಿ
ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ವಿಧಿಯ ಆಟವನ್ನು ಬಲ್ಲವರಾರು, ಅದು ತನಗೆ ಇಷ್ಟ ಬಂದಂತೆ ವರ್ತಿಸುತ್ತದೆ. ಅದರ ಮುಂದೆ ನಾವು ಕುಬ್ಜರು. ಅದು ಕೆಲವೊಮ್ಮೆ ಪ್ರೀತಿಯ ಅಗಾಧತೆಯ ಸುಂದರಿ ಆದರೆ ಮರುಕ್ಷಣವೇ ಜೀವವನ್ನೇ ನುಂಗುವ ಮಾಯೆಯೂ ಹೌದು.ವಿಧಿಯ ವಿಚಿತ್ರತೆಯ ಸಜೀವ ಚಿತ್ರಣವೇ ಕವನದ ಹೂರಣ. ನಿಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನನ್ನ ಇ ಮೈಲ್ :murthyhegde@gmail.com   

ಕೈ ಬೀಸಿ ಕರೆಯುತಿದೆ ಕೈವಲ್ಯದೆಡೆಗೆ
ಕವಲಾಗಿ ಹರಿಯುತಿದೆ ಮೈ ಮನದ ಕಡೆಗೆ ೧

ಬಾಂದಳದ ತಾರೆಯಲಿ ಮರೆಯಾದೆ ನೀನು
ಭೂ ದಳದ ಶಿಖರದಲಿ ಸಿಹಿಯಾದ ಜೇನು
ಸಾವಿನೆಡೆಯಲು ನಿನ್ನ ಸಾಹಸವೇ ಚೆನ್ನ
ಸಂಸಾರ ಸಾಗರದಿ ಹರಿಯ ಬಿಡು ಎನ್ನ ೨

ನಿಲ್ಲಲಾಗದು ಎಂದು ನಂದಿ ಹೋಯಿತೆ ಬೆಳಕು
ಕನಸನ್ನು ಕೊಲ್ಲುತ್ತ ತೊಳೆದು ಹೋಯಿತು ಕೊಳಕು
ನೀನಿರದ ಕ್ಷಣವೆಲ್ಲ ನಾನಿರೆನು ಎಂದು
ಬಾಳೆ ನಾ ಕೈ ಮುಗಿದು ಮುಂದೆ ಎಂದೆಂದೂ ೩

ಮನಸಲ್ಲಿ ಮಲ್ಲಿಗೆಯ ಪರಿಮಳವ ಬೀರಿ
‌ಆಳದಲಿ ಕಣ್ಣೀರ ಸಾಗರದ ಕೋಡಿ
‌ಒಲ್ಲೆನೆಂದರು ಬರುವೆ ಮನದ ಸುಂದರಿಯೆ
‌ಒಯ್ಯಾರದಲಿ ಮನವ ಬದಲಿಸುವ ಮಾಯೆ ೪

 

 

Syndicate

Syndicate content