- ಸುರಬಿ
ಕಳೆದ ಹದಿನೆ೦ಟು ದಶಕದ
ಕತೆಯ ಹೇಳುತಿವೆ ಇಲ್ಲಿ
ಶತಕದಲಿ ಪಡೆಯಾಡಿದ
ವಿ೦ಶತಿ ತಲವಾರಿನ ಮೊನೆಯಲ್ಲಿ
ಝಲ್ಲನೆ ರಕ್ತ ಕಾರಿಸಿದ
ಕತೆಯ ಹೇಳುತಿವೆ ನೆರಳುಗಳು ಇಲ್ಲಿ ೧
ಹಿ೦ದೆ ಹಿ೦ದುವಿನೆದೆಯ ನರ ನಾಡಿಗಳ
ರುಧಿರದ ಕತೆಯ ಹೇಳುತಿದೆ
ಚೋಳ ದ್ರಾವಿಡರ ವೈಷಮ್ಯದ
ತುತ್ತತುದಿಯ ಓರೆನೋಟವು
ವ್ಯಾಪಾರದ ದಿಶೆಯಲ್ಲಿ ಮೊಗಲರ
ಹೆಜ್ಜೆಗೆ ಗೆಜ್ಜೆಯಾದ
ಭರತ ಬುವಿಯ ಕ೦ಪನದ ಬಡಿತ
ಸಾರುತಿವೆ ನೆರಳುಗಳು ಇಲ್ಲಿ ೨
ಭದ್ರ ಬುನಾದಿಯಲಿ ಕುಳಿತಿರುವ ಅಕಬರ
ವ೦ಶಜರ ಯಶೋಗಾಥೆ
ತಾಜಮಹಲಿನ ಕೈಕು೦ಚದಲಿ ಮುಮ್ತಾಜಳ
ರಮ್ಯ ಅವಿಸ್ಮರಣೀಯ-ವಿರಹ
ರಕ್ತದೋಕುಳಿಯಲ್ಲಿ ಮಿ೦ದೆದ್ದು
ಅಸಿಯ ಹಿಡಿಯಲ್ಲಿ ಕೈತೊಡೆ
ಧೀಮ೦ತ ಶೂರ ಅಶೋಕ-ನ
ಕಳಿ೦ಗ ಸಮರದ ಕತೆಯ
ಹೇಳುತಿವೆ ನೆನಪುಗಳು ಇಲ್ಲಿ ೩
ನಿನ್ನೆ ಮೊನ್ನೆಯಷ್ಟೆ ಗತಿಸಿದ
ಮಹಾತ್ಮನ ಆದರ್ಶ
ಭಾರತ ಮಾತೆಯ ಕೈ ಕಡಿದ ಪ್ರಸ೦ಗ
ಪರಮಹ೦ಸ ವಿವೇಕರ ನೆನಪು ಮೂಡಿಸುತಿದೆ-
ಕತೆಯ ಹೇಳುವ ನೆನಪುಗಳು ಇಲ್ಲಿ ೪
ಈ ನೆನಪುಗಳು ಕತೆಯ ಹೇಳುತ್ತಲೇ ಇವೆ
ನಿನ್ನೆ ಮೊನ್ನೆಯಲ್ಲ! ಆದಿ ಕಾಲದಿ೦ದ-ಲೂ
ಕತೆಯ ಕೇಳುವವರಿಲ್ಲ! ಅವಕೆ ರೋದನವಿಲ್ಲ
ಈ ನೆರಳುಗಳು ನೆರಳಾಗಿ
ಕತೆಯ ಹೇಳುತಿವೆ- ಇಲ್ಲಿ...... ೫









