ನಿಮಗಾಗಿ
-ಗುರು ಬಬ್ಬಿಗದ್ದೆ
ಕಾಡುತಿದೆ ನೆನಪುಗಳು, ಎದೆಯಾಂತರಾಳದಲಿ
ಹಾರೈಕೆ ಮನದಲಿ, ನಿಮಗೆ ಒಳಿತಾಗಲಿ ೧
ನಿನ್ನೆಗಳ ನೆನೆಸುತ್ತ ಇಂದುಗಳು ಕಳೆದಿಹುದು
ನಾಳೆ ಹೇಗೆಂಬ ಚಿಂತೆ ಎನಗೆ
ನಿನ್ನೆ ನಿಮ್ಮಯ ನೆರಳು ಎನ್ನ ಜೊತೆಗಿರಲು
ನಾಳೆ ನಿಮ್ಮನು ಅಗಲಿ ನಾ ಹೇಗೆ ಇರಲಿ ೨
ಕಾಡುತಿವೆ ನೆನಪುಗಳುತೀರದ ಸುಳಿಗಳಲಿ
ಹಾಕಿದ ಒಂದೊಂದು ಹೆಜ್ಜೆಗಳಲಿಬರಬಾರದೇ
ಆ ಕ್ಷಣಬಯಸುತಿದೆ ತನು-ಮನ
ನಿಮ್ಮ ಆಗಮನದ ಸವಿನಯದ ಋತುಗಾನ ೩
ಕಾಡುತಿವೆ ನೆನಪುಗಳುಕಳೆದ ಆ ದಿನಗಳು
ಮರೆಯಲಾರೆನು ನಾನು ಕಳೆದಂಥ ಕ್ಷಣಗಳು
ಹರಸುತಿದೆ ಮನಸಿಂದುನಿಮ್ಮ ಬಾಳ್ ಜಯವನ್ನು
ಮರೆಯದಿರಿ ಎನ್ನನ್ನು, ಕಾಡಿಸಿರಿ ನೆನಪುಗಳನು ೪








