- ಗೋಪೀನಾಥ ರಾವ್
ದೀಪದ ಸುತ್ತ ಸಂಭ್ರಮದಿ
ಗೊತ್ತು ಗುರಿಯಿಲ್ಲದೆ ಸುತ್ತುಹಾಕಿ ಹಾತೆ
ಮತ್ತೆ ದೀಪದ ಜ್ವಾಲೆಗೆ
ಅಲ್ಲೆ ಹೊತ್ತಿ ಉರಿದು
ವಿರಮಿಸುವ ಹಾಗೆ
ಮತ್ತೂ ನಾಲ್ಕು ದಿನ ಬಾಳಬೇಕಿದ್ದವರೆಲ್ಲ
ಮುತ್ತೈದೆ ಸಾವು ಪಡೆದು
ಅನಾಮತ್ತಾಗಿ ಬಿದ್ದು ಹೋಗುವುದು ಹೇಗೆ?
ಜೀವ ಹೊತ್ತು ಬಾಳುವ ಮಂದಿಗೆ
ಸಾವ ನಿತ್ಯ ಬಯಸುವ ಮಂದಿಗೆ
ಏಳುವ ಸಂದೇಹ
ಸಾವು
ಹೊತ್ತಿಗೆ ಬರುವುದೇ ಸನಿಹಕ್ಕೆ?
ನಾವಾಗಿ ನಮಗರಿಯದೆ ಸಾಗುವೆವೇ
ಅದನ್ನು ಹುಡುಕಿ ಹತ್ತಿರಕ್ಕೆ?
ಹೊತ್ತು ಮುಳುಗುವ ಸೂರ್ಯನ
ಸರಿಯಾಗಿ ಕಂಡಿದ್ದ ಮನುಜ
ರಾತ್ರಿ ಬೆಳಗಾಗುವುದರೊಳಗೆ
ಶ್ವಾಸ ನಿತ್ತು ಕಲ್ಲಾಗಿ
ಮತ್ತೆ ಸೂರ್ಯನ ಕಾಣಲೇ ಇಲ್ಲ
ಮೂಡಿ ನೆತ್ತಿಗೇರುವ ಸೂರ್ಯನಿಗೆ
ಸುದ್ದಿ ಮುಟ್ಟಿಸುವವು ಸ್ಮಶಾನ ಜ್ವಾಲೆಗಳು
ದೇವರಿಗೂ ಸಾವು ಮೊದಲೇ
ಗೊತ್ತಿರುವುದೇ ಎನ್ನುವುದೇ ಸಂದೇಹ
ಮತ್ತೇನಿದು ನಾಟಕ
ಹುಲು ಮನುಜನ ಜಾಗ್ರತೆ ಕತೆ!










manujana jeevanada
manujana jeevanada koneyannu chennagi varNisiddera.
-- Jayashankar