ನಾನ್ಸೆನ್ಸ್ ಕವಿತೆಗಳು
Satyanarayana

- ಸತ್ಯನಾರಾಯಣ ಬಿ ಆರ್

ಸರಕಾರೀ ಆಫೀಸರುಗಳಿಗೆ ಸಂಜೆ ಹೊತ್ತು ವ್ಯಾಯಾಮಕ್ಕೆ ಬೆನ್ನು ಬಗ್ಗಿಸದೇ ಆಡಬಹುದಾದ ಬ್ಯಾಡ್ ಮಿಂಟನ್ ಆಟ ಬೇಕಾಗುವಂತೆ ನಮಗೂ ಗಂಭೀರ ಕವನಗಳ ನಡುವೆ ಹಾಸ್ಯ ಕವನಗಳು!

1

ನಾನೊಂದು ತೀರ

ನೀನೊಂದು ತೀರ

ಇದ್ದಾಗ ಬಾರು

ತುಂಬಾನೆ ಹತ್ತಿರ

2

ಚಂದ್ರ ಆಕಾಶದಲ್ಲಿದ್ರೆ ಮಾತ್ರ ಚಂದ

ಕುಡುಕ್ರು ಮೋರಿಲಿದ್ರೆ ಮಾತ್ರ ಚಂದ

3

ಅವಳು ಕೊಟ್ಟ

ಒಂದೇ ಒಂದು

ಪ್ರೀತಿಯ ಮುತ್ತಿಗೆ

ಆತ ಕೊಟ್ಟಿದ್ದು

ಒಂದೇ ಒಂದು

ಮಗು!

ಅವಳ ಮಡಿಲಿಗೆ.

ಹುಡುಗೀರೆ ಹುಷಾರ್

ಮುತ್ತು ಕೊಟ್ಟು ಮಗು ಪಡಿಬೇಡಿ

"ಮುತ್ತನ್ನೇ ಪಡೆಯಿರಿ"

(ಸಲಹೆ ಮಾತ್ರ ಉಚಿತ)

4

ಜಾಣ ಮಗಳು

ದಡ್ಡ ಮಗ

ಹನುಮಾನ್ ಚಾಲೀಸು

ಕಥೆ ಓದಿದ ಮೇಲೆ

ನಾನು ಬರೆಯುವ ಕಥೆಯ ಹೆಸರು

ಹುಡುಗರೇ ಹುಷಾರ್

ಹುಡ್ಗೀರು ಬುದ್ದಿವಂತ್ರಿದಾರೆ!

5

(ಇಂಡಿಯಾ ಆಷ್ಟ್ರೇಲಿಯಾ ಮ್ಯಾಚ್ ನಡುವೆ ಬೆತ್ತಲೆ ಓಡಿದವನನ್ನು ಕಂಡು)

ಕೊಟ್ಟಿದ್ದು ತನಗೆ

ಬಚ್ಚಿಟ್ಟಿದ್ದು ಪರರಿಗೆ

ಬಿಚ್ಚಿಟ್ಟಿದ್ದೂ ಪರರಿಗೆ!

6

ಒಂದು ಕೊಂಡರೆ ಒಂದು ಫ್ರೀ

ಮಗಳ ಮದುವೆಯಾದರೆ ಅತ್ತೆ ಫ್ರೀ

ಒಂದು ಕೊಂಡರೆ ಎರಡು ಫ್ರೀ

ಮಗಳ ಮದುವೆಯಾದರೆ ಅತ್ತೆ-ಮಾವ ಫ್ರೀ

ಮದುವೇನೆ ಆಗದಿದ್ರೆ

ಜಗತ್ತೆಲ್ಲಾ ಫ್ರೀ!

ಸತ್ಯನಾರಾಯಣ ಬಿ.ಆರ್.

satya_nbr@yahoo.com

 

Syndicate

Syndicate content