ಬೆವರು - ಟಿಪ್ಸ್
masala dosa.jpg

- ಅರ್ಶದ್ ಹುಸೇನ್ ಎಂ.ಹೆಚ್

ಭಗಭಗಿಸುವ ಸೆಖೆಯಲ್ಲಿ
ಜರಜರನೆ ಹಿಟ್ಟುಕಡೆದು
ಧಗಧಗಿಸುವ ಬೆಂಕಿಯೆದುರು
ಚೊಂಯ್ಯಚೊಂಯನೆ ದೋಸೆ ಹುಯ್ದು
ಚಕಚಕನೆ ಮಸಾಲೆ ಹಾಕಿ
ಪಟಪಟನೆ ತಟ್ಟೆಯಲ್ಲಿಟ್ಟು
ತಟತಟನೇ ಸಪ್ಲೇರಿಗೆ ಕೊಟ್ಟು
ಬೆವರೊರೆಸಿಕೊಂಡರು ಭಟ್ಟರು

ಆರಾಮಾವಾಗಿ ನಡೆಯುತ್ತಾ
ಏಸಿ ಹವೆಯ ಕುಡಿಯುತ್ತಾ
ಸಂಗೀತವ ಆಲಿಸುತ್ತಾ
ದೋಸೆಯ ಮೇಜಿಗೆ ತಂದಿತ್ತ
ದೋಸೆ ರುಚಿಯ ಮೆಚ್ಚಿದ
ಗಿರಾಕಿ ನೀಡಿದ ಟಿಪ್ಸ
ಮುಸಿಮುಸಿ ನಗುತ್ತಾ
ಜೀಬಿಗಿಳಿಸಿಕೊಂಡನಾ ಸಪ್ಲೇರು?

 

Syndicate

Syndicate content