ಏನಿದು ಸಂಭ್ರಮವೋ...
ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ಹವ್ಯಕ ಸಮುದಾಯದವರು ಆದರಾತಿಥ್ಯದಲ್ಲಿ ಎಷ್ಟು ಮುಂದೋ ಹಾಗೆಯೇ ಸಂಪ್ರದಾಯದಲ್ಲಿಯೂ ಕೂಡ. ಅದರಲ್ಲೂ ಹವ್ಯಕರ ಮದುವೆಯೆಂದರೆ ಅದೊಂದು ವಿಶಿಷ್ಟ ಆಚರಣೆಯ ಹಬ್ಬ. ಕಾಲ ಬದಲಾಗುತ್ತಿದ್ದರೂ ತಮ್ಮ ಸಂಪ್ರದಾಯ, ಸಂಸ್ಕ್ರತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಹವ್ಯಕ ಜನಾಂಗವನ್ನು ಶ್ಲಾಘಿಸಲೇಬೇಕಾಗಿದೆ. ಈ ಕವನದಲ್ಲಿ ಹವ್ಯಕರ ಮದುವೆಯ ದಿನದ ಸಜೀವ ಚಿತ್ರಣ ನೀಡಲಾಗಿದೆ. ಮದುವೆಯ ದಿನ ಬೆಳಿಗ್ಗೆ ಬಾಸಿಂಗ ಕಟ್ಟುವ ಕಾರ್ಯಕ್ರಮದಿಂದ ಹಿಡಿದು ದಿನದ ಎಲ್ಲ ಸಂಪ್ರದಾಯಗಳನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನವೇ ಈ ಕವನದ ಹೂರಣ. ಅದೇ ನಿಜವಾದ ಮದುವೆಯ ಸಂಭ್ರಮದ ತೋರಣ.

ಏನಿದು ಸಂಭ್ರಮವೋ ಸಖಿ ನನಗೇನಿದು ಸಂತಸವೋ

ಮನಸುಗಳಾಚೆಗೆ ಮುದವನು ನೀಡುವ ಮಿಲನ ಮಹೋತ್ಸವವೋ

ಮಿಲನ ಮಹೋತ್ಸವವೋ, ಮಿಲನ ಮಹೋತ್ಸವವೋ ೧

ಮುಂಜಾನೆಯ ಸೂರ್ಯನ ಕಿರಣಗಳು ತೆರೆದಿವೆ ಕಣ್ಣಿನ ರೆಪ್ಪೆಗಳು

ಬಾಸಿಂಗ ಕಟ್ಟಿದ ಕ್ಷಣ ಕ್ಷಣವೋ

ಪ್ರೇಮ ಮಹೋತ್ಸವವೋ ಮಿಲನ ಮಹೋತ್ಸವವೋ ೨

ಸಿಂಗರ ಮಾಡಿದ ವಧು ವರರು ಶಾಸ್ತ್ರ ವಿಧಿಗಳಲಿ

ಎಲ್ಲ ಹಿರಿಯರು ಹರಸಲು ಬಂದಿಹ ಬಂಧು ಬಳಗವೋ

ಸಂತಸದಾ ಹೊನಲೋ ಸಖಿ ಮಿಲನ ಮಹೋತ್ಸವವೋ ೩

ವಧುವಿನ ಕರದಲಿ ಮಲ್ಲಿಗೆ ಹಾರ ವರನು ಕಟ್ಟುವ ತಾಳಿಯ ದಾರ

ಧಾರೆಯ ಎರೆಯುವ ಕನ್ಯಾ ಪಿತರು ಸಾರ್ಥಕವಾಯಿತು

ಕಣ ಕಣವೋ ಮಿಲನ ಮಹೋತ್ಸವವೋ ೪

ಸಪ್ತ ಪದಿಯಲಿ ನಡೆಯುವ ಸಮಯ

ಸುಪ್ತ ಭಾವನೆಯು ಅರಳುವ ಸಮಯ

ಬಗೆ ಬಗೆ ಖಾದ್ಯದ ನಂಟು ರಸಮಯ

ಎಲ್ಲರೂ ಸೇರುವ ಉತ್ಸವವೋ ಮಿಲನ ಮಹೋತ್ಸವವೋ ೫

ಅರಸಿಣ ಹಚ್ಚುವ ಸಮಯವಿದು ಸೆರಗನುವ ಹಿಡಿಯುವ ಕ್ಷಣವೇ ಇದು

ವಧುವಿನ ಮಧುರ ಗಾನ ಸುಧೆ ನಕ್ಕು ನಲಿಯುವ ಅನುಕ್ಷಣವೋ

ಸಖಿ ಮಿಲನ ಮಹೋತ್ಸವವೋ ೬

ಏಳು ರಂಧ್ರಗಳು ಕೃಷ್ಣನ ಕೊಳಲು ಏಳು ಹೆಜ್ಜೆಗಳಲೇನಿದೆ

ತಿರುಳುಬಿಳಿಯ ಬಣ್ಣದಲಿ ಏಳು ಬಣ್ಣಗಳೋ

ಏಳು ಜನುಮದ ನಂಟಿದು ಕೇಳೋ ಮಿಲನ ಮಹೋತ್ಸವವೋ ೭

ಗುರು

ಗುರು ಬಬ್ಬಿಗದ್ದೆಯವರು ಬರೆದಿರುವ ಈ ಕವನ ನನಗೆ ತುಂಬ ಇಷ್ಟವಾಯಿತು. ಮದುವೆ ಸಂಭ್ರಮದ ವಸ್ತುವನ್ನು ಸುಂದರವಾಗಿ ಕವಿತೆಯ ರೂಪದಲ್ಲಿ ಹೆಣೆದಿರುವ ಗುರು ಅವರಿಗೆ ನನ್ನ ಮೆಚ್ಚುಗೆ ಮತ್ತು ಅಭಿನಂದನೆ!

Dhanyavadagalu Shrivatsa

Dhanyavadagalu Shrivatsa avare. Namma kavana istavaagiddakke.

Syndicate

Syndicate content