ಮೂತ್ರಿಯಲ್ಲಿ ನೊಣವೇ ಬೆಚ್ಚಿ ಬೀಳದಿರಿ, ಇದೊಂದು ಟ್ರಿಕ್
a fly in the toilet.jpg

- ಅರ್ಶದ್ ಹುಸೇನ್ ಎಂ.ಹೆಚ್.


ಭಾರತದಲ್ಲಿದ್ದಾಗ ನಾವು ಹೆಚ್ಚಾಗೆ ಸಿನೇಮಾ ಮಂದಿರದಲ್ಲಿ ಅಥವಾ ಸಾರ್ವಜನಿಕ ಮೂತ್ರಿಗಳಿಗೆ ಹೋಗುತ್ತಿದ್ದುದೇ ಕಡಿಮೆ. ಸ್ವಚ್ಛತೆಯೇ ಇದಕ್ಕೆ ಮುಖ್ಯ ಕಾರಣ. ಬಳಿಕ ಸುಲಭ್ ಶೌಚಾಲಯ ತಕ್ಕ ಮಟ್ಟಿಗೆ ಸ್ವಚ್ಛ ಹಾಗೂ ಉತ್ತಮ ಸೇವೆ ಒದಗಿಸುತ್ತಿದೆ.  ಹಾಗಾಗಿ ನಾವು ಹೆಚ್ಚಾಗಿ ಹಣ ಕೊಟ್ಟರೂ ಪರವಾಗಿಲ್ಲ, ಸ್ವಚ್ಛವಾಗಿರುವ ಸ್ಥಳಗಳನ್ನೇ ಹುಡುಕಿ ಹೋಗುತ್ತಿದ್ದೆವು. ಸಿನೇಮಾ ಮಂದಿರಗಳಲ್ಲಂತೂ ಜನರೇ ಹೆಚ್ಚಾಗಿ ನೈರ್ಮಲ್ಯವನ್ನು ಪಾಲಿಸದಿರುವುದು ಮುಖ್ಯ ಕಾರಣವೆಂದು ಸಿನೇಮಾ ಮಂದಿರದ ಸ್ವಚ್ಛತಾ ಸಿಬ್ಬಂದಿ ಒಬ್ಬರು ಹೇಳಿದ್ದ ನೆನಪು.

ಇಂತಹದ್ದೇ ಸಮಸ್ಯೆಗಳು ಜರ್ಮನಿಯ ಅಮ್ಸ್ಟರ್ ಡ್ಯಾಂ ನಗರದ ಮುನಿಸಿಪಾಲಿಟಿಗೂ ಕಾಡಿರಬೇಕು. ಎಷ್ಟು ಸೌಲಭ್ಯ ಒದಗಿಸಿದರೂ ಶುಚಿಯಾಗಿಟ್ಟುಕೊಳ್ಳದ ತನ್ನ ನಾಗರಿಕರಿಗೆ ಸ್ವಚ್ಛವಾಗಿಟ್ಟುಕೊಳ್ಳುವ ಒಂದು ವಿನೂತನ ವಿಧಾನವನ್ನು ಅದು ಅನುಸರಿಸುತ್ತಿದೆ.

ಮುಖಪುಟದಲ್ಲಿರುವ ಚಿತ್ರ ಗಮನಿಸಿದಿರಾ?  ನಿಮ್ಮ ಊಹೆ ಸರಿ. ಎಲ್ಲೆಲ್ಲೂ ಸಾಮಾನ್ಯವಾಗಿರುವ ಪುರುಷ ಮೂತ್ರಿ ಇದು. ಆದರೆ ಇದರಲ್ಲೊಂದು ನೊಣ ಕುಳಿತಿದೆಯೆಲ್ಲಾ? ... ನೊಣವೇ? ಹೌದು ನೊಣ. ಇದೇ ಇದರ ಟ್ರಿಕ್ ಆದರೆ ಇದು ನಿಜವಾದ ನೊಣವಲ್ಲ. ನೊಣದ ಚಿತ್ರವನ್ನು ಮೂತ್ರಿಯನ್ನು ನಿರ್ಮಿಸುವಾಗಲೇ ಸಿರಾಮಿಕ್ ಮೇಲೆ ನೊಣದ ಚಿತ್ರವೊಂದನ್ನು ಅಳಿಸಿ ಹೋಗಲಾರದಂತೆ ಮುದ್ರಿಸಲಾಗಿದೆ ಅಷ್ಟೇ.  ಮೂತ್ರಿಯನ್ನು ಉಪಯೋಗಿಸುವವರು ಈ ನೊಣಕ್ಕೇ ಗುರಿಹಿಡಿಯುವುದರಿಂದ ಹೊರಚೆಲ್ಲುವ ಪ್ರಮಾಣದಲ್ಲಿ ಶೇಖಡಾ ೮೦ಕ್ಕೂ ಹೆಚ್ಚು ಕಡಿಮೆಯಾಗಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ನಗರದ ಶಿಫೋಲ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಪಡೆದ  ಈ ಅಧ್ಯಯನದ ಬಳಿಕ ಆಮ್ಸ್ಟರ್ ಡ್ಯಾಂ ನಗರದ ಎಲ್ಲಾ ಮೂತ್ರಿಗಳಿಗೂ ಈ ವ್ಯವಸ್ಥೆಯನ್ನು ಮುನಿಸಿಪಾಲಿಟಿ ಕಲ್ಪಿಸಲಿದೆ.

ನಮ್ಮ ನಗರಗಳಿಗೂ ಈ ವ್ಯವಸ್ಥೆ ಬಂದರೂ ಒಳ್ಳೆಯದೇ. ನಮ್ಮಲೂ ಗುರಿಕಾರರಿಗೇನೂ ಕೊರತೆಯಿಲ್ಲವಲ್ಲ. ಆದರೆ ಪಾನ್ ಗುಟ್ಕಾ ತಿಂದು ಪಿಚಕಾರಿಯಿಂದ ಗೋಡೆಯ ಮೂಲೆಗಳಿಗೆ ಹಾಗೂ ಚರಂಡಿಗಳಿಗೆ ಗುರಿಯಿಡುವ ಭೂಪರಿಗೆ ಬೇರೆ ಏನು ಮಾಡಬಹುದು? ಏನಾದರೂ ಐಡಿಯಾ ಹೊಳೆದರೆ ಕನ್ನಡಧ್ವನಿಯೊಂದಿಗೆ ಹಂಚಿಕೊಳ್ಳುವಿರಲ್ಲ..

 

Pan Gutka ugalabahudada

Pan Gutka ugalabahudada jagadalli devara Photo athava sundaravada muddu makkala photo hakidare hege?

HAHA ...hahah hehehe olle

HAHA ...hahah hehehe olle upaaya Arshadravare!

Syndicate

Syndicate content